ವಾರದೊಳಗೆ ಗ್ರಾಮಗಳು ಕೋವಿಡ್ ಮುಕ್ತವಾಗಬೇಕು, ಹೆಚ್ಚು ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿ – ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರಿನಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಸಮಾಲೋಚನಾ ಸಭೆ

ಪುತ್ತೂರು: ಕೋವಿಡ್ ನಿಯಂತ್ರಣದಲ್ಲಿ ನಾವು ತೃಪ್ತಿಕರವಾಗಿಲ್ಲ. ಕೋವಿಡ್ ನಿಯಂತ್ರಣ ಮಾಡಬೇಕಾದರೆ ಹೆಚ್ಚು ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿ. ಒಂದು ಹಂತದಲ್ಲಿ ಹೆಚ್ಚು ಪಾಸಿಟಿವ್ ಕೇಸ್ ಬಂದರೂ ಕೋವಿಡ್ ನಿಯಂತ್ರಣ ಸಾಧ್ಯವಿದೆ. ಹಾಗಾಗಿ ವಾರದೊಳಗೆ ಗ್ರಾಮಗಳು ಕೋವಿಡ್ ಮುಕ್ತವಾಗಬೇಕೆಂದು ಶಾಸಕ ಸಂಜೀವ ಮಠಂದೂರು ಅವರು ಫ್ರಂಟ್ ಲೈನ್ ಕಾರ್ಯಕರ್ತರಾದ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.

ಪುತ್ತೂರು ಕೆಮ್ಮಾಯಿ ಶಾಲೆಯಲ್ಲಿ ಅವರು ನೆಕ್ಕಿಲಾಡಿ, ಕೋಡಿಂಬಾಡಿ, ಬನ್ನೂರು ಗ್ರಾಮ ಸೇರಿದಂತೆ ನಗರಸಭಾ ವ್ಯಾಪ್ತಿಯ ಕೆಮ್ಮಾಯಿ, ಸಾಲ್ಮರ, ಜಿಡೆಕಲ್ಲು ವಾರ್ಡ್‌ನ 15 ಮಂದಿ ಆಶಾ ಕಾರ್ಯಕರ್ತೆಯರಿಂದ ತಮ್ಮ ತಮ್ಮ ವಾರ್ಡ್ ಏರಿಯಾದ ಕೋವಿಡ್ ವರದಿಯನ್ನು ಪಡೆದು ಮಾತನಾಡಿದರು. ಈಗಾಗಲೇ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆರಂಭಗೊಂಡಿದೆ. ಕೆಎಸ್‌ಹೆಗ್ಡೆ ಮೆಡಿಕಲ್ ಕಾಲೇಜಿನ ತಲಾ ಮೂರು ಮಂದಿ ವೈದ್ಯರಂತೆ 13 ತಂಡ ಮತ್ತು ತಾಲೂಕಿನ 7 ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಸುಶ್ರೂಶಕಿಯವರು ಎಲ್ಲೆಲ್ಲಿ ಜನವಸತಿ ಇದೆಯೋ ಅಲ್ಲಿ ಕೋವಿಡ್ ಪರೀಕ್ಷೆ ನಡೆಸಲಿದ್ದಾರೆ. ಇದರ ಜೊತೆ ಡೆಂಗ್ಯೂ ಮಲೇರಿಯ ಪ್ರಕರಣದ ಚಿಕಿತ್ಸೆಯನ್ನೂ ನೀಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಆದಷ್ಟು ಹೆಚ್ಚು ಹೆಚ್ಚು ಮಂದಿಯನ್ನು ಕೋವಿಡ್ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಬೇಕು. ಹೆಚ್ಚು ಜನ ಪರೀಕ್ಷೆಗೊಳಪಟ್ಟಲ್ಲಿ ಒಮ್ಮೆ ಹೆಚ್ಚು ಕೋವಿಡ್ ಪಾಸಿಟಿವ್ ವರದಿ ಬರಬಹುದು. ಯಾಕೆಂದರೆ ಪಾಸಿಟಿವ್ ಕೇಸ್ ತುಂಬಾ ಇದೆ. ಅದು ಗಮನಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಸೋಂಕನ್ನು ನಿಯಂತ್ರಣ ಮಾಡಲು ಸುಲಭವಾಗಲಿದೆ ಎಂದರು.

ಕೋವಿಡ್‌ನಿಂದ ಮೃತಪಟ್ಟ ಸಂಕಷ್ಟದ ಕುಟುಂಬ ಪಟ್ಟಿ ಮಾಡಿ:
ಕೋವಿಡ್‌ನಿಂದಾಗಿ ಮೃತಪಟ್ಟ ಸಂದರ್ಭದಲ್ಲಿ ಆ ಕುಟುಂಬ ಸಂಕಷ್ಟದಲ್ಲಿದ್ದರೆ ಅಂತಹವರ ಪಟ್ಟಿ ಮಾಡಿ. ಅವರ ಮನೆಯಲ್ಲಿ ಗಂಡ ಮೃತಪಟ್ಟು ಹೆಂಡತಿ ಮಕ್ಕಳು ಮಾತ್ರ ಇದ್ದಲ್ಲಿ ಅವರ ಮಾಹಿತಿ ನೀಡಿ. ಅವರ ಕುರಿತು ಏನಾದರೂ ಬೇರೆ ವ್ಯವಸ್ಥೆ ಮಾಡುವ ಪ್ರಯತ್ನ ಮಾಡೋಣ ಎಂದು ಶಾಸಕರು ಆಶಾ ಕಾರ್ಯಕರ್ತರಿಗೆ ತಿಳಿಸಿದರು.

ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಿ:
ಕೋವಿಡ್ ಸೋಂಕಿತರು ಮನೆಯಲ್ಲಿ ಐಸೋಲೇಶನ್ ಮಾಡುವುದು ತುಂಬಾ ಕಷ್ಟದ ಕೆಲಸ. ಇದರಿಂದ ಸಮಸ್ಯೆ ಉದ್ಭವಿಸುತ್ತದೆ. ಈ ನಿಟ್ಟಿನಲ್ಲಿ ಪೊಲೀಸರ ಮೂಲಕವಾದರೂ ಸಹಿ ಯಾರೆ ಆಗಲಿ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಿ. ಬಲ್ನಾಡಿನಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಬಹಳ ವ್ಯವಸ್ಥೆ ಇದೆ. ಯಾವುದೇ ಸಮಸ್ಯೆ ಇಲ್ಲ ಎಂದು ಶಾಸಕರು ಹೇಳಿದರು. ಕೆಮ್ಮಾಯಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಜಿನ್ನಪ್ಪ ಗೌಡ, ತಾ.ಪಂ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಲೀಲಾವತಿ, ಸುಂದರ ಪೂಜಾರಿ ಬಡಾವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವೇದಾವತಿ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಂ, ರಾಜ್ಯ ಸರಕಾರಿ ನೌಕರರ ಸಂಘದ ತನುಜಾ, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘಟಕಿ ಗಂಗಾ, ಕೆಮ್ಮಾಯಿ ಶಾಲಾ ಮುಖ್ಯಗುರು ಮರಿಯಮ್ಮ, ಜಿಡೆಕಲ್ಲು ಶಾಲಾ ಮುಖ್ಯಗುರು ತಾರನಾಥ ಸವಣೂರು, ಸಿಆರ್‌ಪಿ ಅಶ್ರಪ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.