ಗುಂಡ್ಯ ಪೊಲೀಸ್ ತಪಾಸಣಾ ಕೇಂದ್ರದಲ್ಲಿ  4ತಿಂಗಳಿನಿಂದ ನೀರಿನ ಸಂಪರ್ಕ ಕಡಿತ..!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡ್ಯದ ಪೋಲೀಸ್ ತಪಾಸಣೆ ಕೇಂದ್ರಕ್ಕೆ ನೀರು ಸರಬರಾಜು ಪೈಪ್ ಒಡೆದು ಹೋಗಿ ಕಳೆದ ನಾಲ್ಕು ತಿಂಗಳಿನಿಂದ ನೀರು ಸರಬರಾಜು ನಿಲುಗಡೆಗೊಂಡಿದ್ದು, ಇದನ್ನು ಸರಿಪಡಿಸಿಕೊಡುವಲ್ಲಿ ಶಿರಾಡಿ ಗ್ರಾಮ ಪಂಚಾಯಿತಿ ಮೀನ ಮೇಷ ಎನಿಸುತ್ತಿದೆ ಎಂಬ ದೂರು ವ್ಯಕ್ತವಾಗಿದೆ.

ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಗಡಿಯಲ್ಲಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುವ ಪ್ರಕ್ರಿಯೆ ನಡೆಯುತ್ತಿದ್ದಾಗ ಪೊಲೀಸ್ ಚೌಕಿ ಇಲ್ಲದ ಕಾರಣ ಆಗಿನ ಎಸ್.ಐ. ಈರಯ್ಯ ಅವರ ಕೋರಿಕೆಯಂತೆ ಪುತ್ತೂರು ಉಪ ವಿಭಾಗಾಧಿಕಾರಿಯವರು ಪ್ರತ್ಯೇಕ ತಪಾಸಣೆ ಕೇಂದ್ರದ ಕಟ್ಟಡ ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ಶಿರಾಡಿ ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ಸಂಪರ್ಕ ನೀಡಲಾಗಿತ್ತು.

ಆದರೆ ಆರಂಭದಲ್ಲಿ ಎಲ್ಲ ವ್ಯವಸ್ಥೆಗಳು ಸರಿ ಇದ್ದರೂ ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರು, ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ದಿನದ 24 ಗಂಟೆಯೂ ಪಾಲಿ ವ್ಯವಸ್ಥೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳು ನೀರಿಗಾಗಿ ಸ್ಥಳೀಯ ಮನೆಯವರನ್ನು ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸ್ಥಳೀಯ ನಿವಾಸಿಯೊಬ್ಬರ ಕೃಪೆಯಿಂದ ಪೊಲೀಸರು ತಾತ್ಕಾಲಿಕ ನೆಲೆಯಲ್ಲಿ ನೀರನ್ನು ಪಡೆಯುತ್ತಿದ್ದಾರೆ. ಆದರೆ ಎಷ್ಟು ಮಾತ್ರಕ್ಕೆ ಸರಿ ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ದಾರಿ ದೀಪವೂ ಇಲ್ಲ:
ದ.ಕ. ಜಿಲ್ಲಾ ಗಡಿಯಲ್ಲಿ ಇರುವ ಈ ಕೇಂದ್ರ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಯುತ್ತಿರುತ್ತದೆ. ಆದರೆ ಈ ಪ್ರದೇಶದಲ್ಲಿ ರಸ್ತೆಯಲ್ಲಿ ದಾರಿ ದೀಪಗಳು ಇಲ್ಲವಾಗಿದ್ದು, ತಪಾಸಣೆ ಕೇಂದ್ರ ಸನಿಹಕ್ಕೆ ಬಂದಾಗಲೇ ವಾಹನ ಚಾಲಕರಿಗೆ ತಿಳಿಯುವಂತಿದ್ದು, ಬಹಳಷ್ಟು ವಾಹನಗಳವರು ಗೊಂದಲಕ್ಕೀಡಾಗಿ, ತಪಾಸಣಾ ಗೇಟಿಗೆ ಡಿಕ್ಕಿ ಹೊಡೆದ ಪ್ರಮೇಯ ನಡೆದಿದ್ದು, ದಾರಿ ದೀಪದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಸಮಸ್ಯೆ ಗಮನಕ್ಕೆ ಬಂದಿದೆ-ಶೀಘ್ರ ಬಗೆಹರಿಸಲಾಗುವುದು.
ಪೊಲೀಸ್ ತಪಾಸಣೆ ಕೇಂದ್ರದಲ್ಲಿ ನೀರಿನ ಸಮಸ್ಯೆಯ ಬಗ್ಗೆ ದೂರು ಬಂದಿದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ಬದಲಿ ಕೊಳವೆ ಬಾವಿ ತೋಡಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿನ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಶಿರಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.