ಕೊರೋನಾ ಸಂಕಷ್ಟ:ಮಾಯಿದೆ ದೇವುಸ್ ಚರ್ಚ್‌ನಿಂದ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

  • ಚರ್ಚ್ ವ್ಯಾಪ್ತಿಯ 103ಕ್ಕೂ ಮಿಕ್ಕಿ ಕುಟುಂಬಗಳಿಗೆ ನೆರವು | ಸುಮಾರು ರೂ.60 ಸಾವಿರ ವೆಚ್ಚ

ಪುತ್ತೂರು: ವಿಶ್ವದೆಲ್ಲೆಡೆ ಮರಣಮೃದಂಗ ಬಾರಿಸುತ್ತಿರುವ ಮಾರಣಾಂತಿಕ ರೋಗವೆನಿಸಿದ ಕೊರೋನಾ(ಕೋವಿಡ್ ೧೯) ವೈರಸ್ ಹರಡುವಿಕೆಯಲ್ಲಿ ಯಾವುದೇ ಜಾತಿ ಧರ್ಮ ಎಂಬುದಿಲ್ಲ. ಇದೀಗ ಇದರ ಎರಡನೇ ಅಲೆಯು ಮಾನವನಲ್ಲಿ ಭೀಕರ ಆತಂಕ ಸೃಷ್ಟಿಸಿದ್ದು, ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವ ಬಡ ಕುಟುಂಬಗಳು ಈ ಕೊರೋನಾ ಅಟ್ಟಹಾಸದಿಂದಾಗಿ ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರು ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ ತನ್ನ ವ್ಯಾಪ್ತಿಯ ೧೯ ವಾಳೆಗಳಲ್ಲಿನ ಕ್ರಿಶ್ಚಿಯನ್ ಬಡ ಕುಟುಂಬದಲ್ಲಿನ ಸುಮಾರು ೧೦೩ಕ್ಕೂ ಮಿಕ್ಕಿ ಅರ್ಹ ಫಲಾನುಭವಿಗಳಿಗೆ ಈಗಾಗಲೇ ಅಗತ್ಯ ಆಹಾರ ಸಾಮಾಗ್ರಿಗಳನ್ನು ಪೂರೈಸಿರುತ್ತಾರೆ. ಕಳೆದ ಬಾರಿಯ ಲಾಕ್‌ಡೌನ್ ಸಮಯದಲ್ಲೂ ಅರ್ಹ ಫಲಾನುಭವಿಗಳಿಗೆ ನೆರವು ನೀಡುವ ಕಾರ್ಯ ಮಾಡುವ ಮೂಲಕ ಮಾಯಿದೆ ದೇವುಸ್ ಚರ್ಚ್ ಶ್ಲಾಘನೆಗೆ ಪಾತ್ರವಾಗಿತ್ತು.

ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವು:
ಕೊರೋನಾ ವೈರಸ್ ಎಷ್ಟೊಂದು ಭೀಕರ ಎಂಬುದು ಪ್ರಸ್ತುತ ಜಗಜ್ಜಾಹೀರ. ಆದರೆ ನಮ್ಮನ್ನು ನಾವು ಕಾಪಾಡಿಕೊಳ್ಳುವ ಮುಖೇನ ನಮ್ಮ ಕುಟುಂಬಗಳನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಅಗತ್ಯ ಸಂದರ್ಭದಲ್ಲಿ ಹೊರಗಡೆ ಹೋಗುವಾಗ ಸರಕಾರದ ನಿಯಮಗಳನ್ನು ಪಾಲಿಸುವ ಮುಖೇನ ನಮ್ಮನ್ನು ನಾವು ಕಾಪಾಡಿಕೊಳ್ಳೋಣ ಎಂಬುದೇ ನಮ್ಮ ಧ್ಯೇಯವಾಗಿರಲಿ. ಮೊದಲ ಹಂತದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ತೀರಾ ಹಿಂದುಳಿದವರಿಗೆ ನೆರವು ನೀಡಲಾಗಿದ್ದು, ಚರ್ಚ್ ವ್ಯಾಪ್ತಿಯ ೧೯ ವಾಳೆಗಳಲ್ಲಿನ ಅರ್ಹ ಫಲಾನುಭವಿಗಳನ್ನು ಆಯಾ ವಾಳೆ ವ್ಯಾಪ್ತಿಯ ಗುರಿಕಾರರು ಹಾಗೂ ಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ಆಹಾರ ಸಾಮಾಗ್ರಿಗಳ ನೆರವನ್ನು ಈಗಾಗಲೇ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ sಬಿದ್ದರೆ ಎರಡನೇ ಹಂತದಲ್ಲಿ ನೆರವನ್ನು ನೀಡುವ ಉದ್ಧೇಶ ನಮ್ಮಲ್ಲಿದೆ ಎಂದು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು `ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ವಾಳೆಯ ಗುರಿಕಾರರು ಹಾಗೂ ಪ್ರತಿನಿಧಿಗಳು ಸಹಿತ ಹಲವರು ಉಪಸ್ಥಿತರಿದ್ದರು.

ಹಸಿದವನ ಹಸಿವನ್ನು ನೀಗಿಸುವ ಕೆಲಸವಾಗಬೇಕಿದೆ…
ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವುದು ಕಣ್ಣ ಮುಂದೇನೇ ಇದೆ. ಈ ವೈರಸ್‌ನಿಂದ ಪ್ರತಿಯೋರ್ವರ ಕುಟುಂಬ ಹೈರಾಣಾಗಿರುವುದು ನಿಜ. ಇಡೀ ಭಾರತ ದೇಶವೇ ಲಾಕ್‌ಡೌನ್ ಪರಿಸ್ಥಿತಿಯಲ್ಲಿರುವಾಗ ಹೊರಗಡೆ ಹೋಗಿ ಕೆಲಸ ಮಾಡಿ ಜೀವನ ತುಂಬಿಸಿಕೊಳ್ಳುವುದು ಕಷ್ಟದ ಮಾತೇ ಆಗಿದೆ. ಆದ್ದರಿಂದ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು, ಚರ್ಚ್ ವ್ಯಾಪ್ತಿಯ ಅರ್ಹ ಫಲಾನುಭವಿ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡಲು ಆದೇಶವನ್ನು ಹೊರಡಿಸಿದ್ದಾರೆ. ಅದರಂತೆ ನಾವು ಈಗಾಗಲೇ ಚರ್ಚ್ ವ್ಯಾಪ್ತಿಯ ಫಲಾನುಭವಿ ಅರ್ಹ ಕುಟುಂಬಗಳಿಗೆ ನೆರವನ್ನು ಒದಗಿಸಿದ್ದೇವೆ. ಪ್ರಭು ಯೇಸುಕ್ರಿಸ್ತರ ಮಾತಿನಂತೆ ಹಸಿದವನ ಹಸಿವನ್ನು ನೀಗಿಸುವ ಕೆಲಸವನ್ನು ಮಾನವ ಮಾಡಬೇಕಾಗಿದೆ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಧಾನ ಧರ್ಮಗುರುಗಳು, ಮಾಯಿದೆ ದೇವುಸ್ ಚರ್ಚ್, ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.