ಕಾಣಿಯೂರು ಗ್ರಾಮ ಪಂಚಾಯತ್ ಕೋವಿಡ್-19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕೊರೋನಾ ಸೋಂಕು ಸೊನ್ನೆ ಪ್ರಕರಣಕ್ಕೆ ಬಂದಾಗ ಸಮಧಾನಕರ – ಡಾ. ರಾಮಕೃಷ್ಣ ರಾವ್
ಲಾಕ್‌ಡೌನ್ ನಿಯಮವನ್ನು ಪಾಲಿಸದಿದ್ದರೆ ದಂಡ ವಿಧಿಸಲು ಗ್ರಾ.ಪಂ. ನಿರ್ಧರಿಸಿದೆ – ಗಣೇಶ್ ಉದನಡ್ಕ

ಕಾಣಿಯೂರು: ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸಮಾಜದ ಆರೋಗ್ಯ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕೊರೋನಾ ನಿಯಂತ್ರಣಕ್ಕಾಗಿ ಹೆಚ್ಚಿನ ಹೋರಾಟ ನಡೆಸಿದ್ದರಿಂದ ಸ್ವಲ ಮಟ್ಟಿಗೆ ಸೋಂಕು ಇಳಿಮುಖ ಕಂಡಿದೆ. ಆದರೆ ಇದನ್ನು ಹಗುರವಾಗಿ ಕಾಣದೇ ಗಂಭೀರವಾಗಿ ಪರಿಗಣಿಸಿ ಕೊರೋನಾ ಸೋಂಕು ಸೊನ್ನೆ ಪ್ರಕರಣಕ್ಕೆ ಬಂದಾಗ ಸಮಧಾನಕರವಾಗಬಹುದು ಎಂದು ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಹೇಳಿದರು. ಅವರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿ ಕಾಣಿಯೂರಿನ ಸಭಾಂಗಣದಲ್ಲಿ ಜೂ.8ರಂದು ನಡೆದ ಕಾಣಿಯೂರು ಗ್ರಾ.ಪಂ. ಕೋವಿಡ್ 19 ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.

ನಮಗೆ ಅಂಕಿ ಅಂಶಗಳು ಮುಖ್ಯವಲ್ಲ, ಒಟ್ಟಿನಲ್ಲಿ ಕೊರೋನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ಹೆಚ್ಚು ಪ್ರಕರಣಗಳು ಬರದಂತೆ ಎಲ್ಲರೂ ಸಹಕಾರ ನೀಡಬೇಕು ಎಂದವರು ಎಲ್ಲಾ ರೀತಿಯಲ್ಲಿ ಸಹಕಾರ ನೀಡಿರುವ ಕಾಣಿಯೂರು ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿಯವರಿಗೆ ವೈದ್ಯಾಧಿಕಾರಿಯವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಆದ್ಯತೆಯ ಮೇರೆಗೆ ಜನರನ್ನು ಪರಿಗಣಿಸಿ ಲಸಿಕೆ ನೀಡಲು ಆಶಾಕಾರ್ಯಕರ್ತೆಯರು ಸಹಕರಿಸಬೇಕು. ಕಾಣಿಯೂರು ಪೇಟೆಯಲ್ಲಿ ಜನರ ಸಂಚಾರ, ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದ್ದು, ಈ ಬಗ್ಗೆ ಹಲವಾರು ದೂರುಗಳು ಗ್ರಾ.ಪಂ.ಗೆ ಬಂದಿದೆ. ಸರಕಾರ, ಜಿಲ್ಲಾಡಳಿತದ ಲಾಕ್‌ಡೌನ್ ನಿಯಮಗಳನ್ನು ಪಾಲಿಸದಿದ್ದರೆ. ಸಾಮಾಜಿಕ ಅಂತರ ಕಾಯ್ದುಕೊಂಡು, ವ್ಯವಹಾರ ನಡೆಸದಿದ್ದರೆ, ಸಮಯ ಮೀರಿ ವ್ಯಾಪಾರ ನಡೆಸಿದರೆ, ಮಾಸ್ಕ್ ಧರಿಸದಿದ್ದರೆ ಗ್ರಾ.ಪಂ.ನಿಂದ ದಂಡ ವಿಧಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಅಭಿವೃದ್ಧಿ ಅಧಿಕಾರಿಯವರು ದಂಡ ವಿಧಿಸಲಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಕೊಪ್ಪ, ಪ್ರವೀಣ್‌ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ದೇವಿಪ್ರಸಾದ್ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಲೋಕಯ್ಯ ಪರವ ದೋಳ್ಪಾಡಿ, ಸುಲೋಚನಾ ಮಿಯೋಳ್ಪೆ, ಸುನಂದ ಅಬ್ಬಡ, ತೇಜಕುಮಾರಿ ಉದ್ಲಡ್ಡ, ಮೀರಾ, ಗಂಗಮ್ಮ ಗುಜ್ಜರ್ಮೆ, ಅಂಬಾಕ್ಷಿ ಕೂರೇಲು, ಕೀರ್ತಿ ಕುಮಾರಿ ಅಂಬುಲ, ಗ್ರಾಮಕರಣಿಕರಾದ ಸತೀಶ್, ಗ್ರಾಮ ಸಹಾಯಕ ಭಾಸ್ಕರ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿಶ್ವನಾಥ ದೇವಿನಗರ, ಆರೋಗ್ಯ ಇಲಾಖೆಯ ಸಮತಿ, ಉಷಾಲತಾ, ಆಶಾ ಕಾರ್ಯಕರ್ತೆಯರಾದ ಕುಸುಮಾ ಕಾಣಿಯೂರು, ಭಾರತಿ ದೋಳ್ಪಾಡಿ, ಯಮುನಾ ಕೋಡಂದೂರು, ಗೀತಾ ಚಾರ್ವಾಕ, ಭಾರತಿ ನಾಣಿಲ, ಜಲಜಾಕ್ಷಿ, ಕಾಣಿಯೂರು ಸಿಆರ್‌ಪಿ ಯಶೋದಾ ಎ, ಶಿಕ್ಷಕರಾದ ಭಾರತಿ, ಚೆನ್ನಪ್ಪ ಗೌಡ, ಜಯಂತ್ ವೈ, ಸುಜಯ, ಅಂಗನವಾಡಿ ಕಾರ್ಯಕರ್ತೆಯರಾದ ಸುಮಿತ್ರಾ ಏಲಡ್ಕ, ಭವಾನಿ ಬೊಬ್ಬೆಕೇರಿ, ಬಾಲಕ್ಕಿ ತೀರ್ಥಕೇರಿ, ಅಕ್ಷತಾ ಇಡ್ಯಡ್ಕ, ಶಾರದಾ ಚಾರ್ವಾಕ, ಹೊನ್ನಮ್ಮ ನಾಣಿಲ, ಕಮಲ ಗಾಳಿಬೆಟ್ಟು, ಲೀಲಾವತಿ ದೋಳ್ಪಾಡಿ, ವೇದಾವತಿ ಕೂರೇಲು, ಪಾರ್ವತಿ, ಕೀರ್ತಿಕುಮಾರ್ ಮತ್ತೀತರರು ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವರಾಜ್ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಗ್ರಾ.ಪಂ. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ವಂದಿಸಿದರು.

ಕೊರೋನಾ ವೈರಸ್ ಇಳಿಮುಖ ಕಂಡಿದೆ ಎಂದರೆ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರ ಪರಿಶ್ರಮ ತುಂಬಾ ಇದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ಸೇವೆ ಮೆಚ್ಚುವಂತದ್ದು. ತಮ್ಮ ಜೀವನವನ್ನೇ ಪಣಕಿಟ್ಟು ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಣಿಯೂರು ಗ್ರಾ.ಪಂ. ಸದಾ ಆರೋಗ್ಯ ಇಲಾಖೆಯ ಜೊತೆಗಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸ್ಪಂದಿಸಿದ್ದು, ಇನ್ನೂ ಮುಂದೆಯೂ ಸ್ಪಂದಿಸಲಿದ್ದೇವೆ.

– ಗಣೇಶ್ ಉದನಡ್ಕ
ಉಪಾಧ್ಯಕ್ಷರು, ಗ್ರಾ.ಪಂ. ಕಾಣಿಯೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.