ನಿವ್ವಳ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಸಾಲ ಪಡೆಯುಲು ವಿಧಿಸಿರುವ ಷರತ್ತುಗಳನ್ನು ಹಿಂಪಡೆಯಲು ಶಾಸಕರಿಂದ ಸಹಕಾರಿ ಸಚಿವರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:2020-21 ನೇ ಸಾಲಿಗೆ ರೈತರಿಗೆ ಸಹಕಾರಿ ಪತ್ತಿನ ಸಂಘಗಳ ಮೂಲಕ ನಿವ್ವಳ ಶೂನ್ಯ ಬಡ್ಡಿ ದರದಲ್ಲಿ ರೂ.೩ಲಕ್ಷ ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವಲ್ಲಿ ವಿಧಿಸಿರುವ ಷರತ್ತುಗಳನ್ನು ಹಿಂಪಡೆಯುವಂತೆ ಶಾಸಕ ಸಂಜೀವ ಮಠಂದೂರು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್‌ರವರಿಗೆ ಮನವಿ ಮಾಡಿದ್ದಾರೆ.

2020-21ನೇ ಸಾಲಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ ನಿವ್ವಳ ಶೂನ್ಯ ಬಡ್ಡಿ ದರದಲ್ಲಿ ರೂ.3ಲಕ್ಷ ಗಳ ತನಕ ಅಲ್ಪಾವಧಿ ಕೃಷಿ ಸಾಲ ನೀಡುವ ಕುರಿತು ಸರಕಾದಿಂದ ಮಂಜೂರಾತಿ ನೀಡಲಾಗಿರುತ್ತದೆ. ಆದರೆ ಈ ಯೋಜನೆಯನ್ನು ಒಂದು ಕಟುಂಬಕ್ಕೆ ಗರಿಷ್ಠ ರೂ.೩ಲಕ್ಷಗಳಿಗೆ ನೀಡಿದ ಸಾಲಗಳಿಗೆ ಮಾತ್ರ ಅನ್ವಯಿಸಿರುತ್ತದೆ. ಅಲ್ಲದೆ ಮಾಸಿಕ ರೂ.20,000 ವೇತನ/ಪಿಂಚಣಿ ಪಡೆಯುತ್ತಿರುವ ಅಥವಾ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಬಡ್ಡಿ ಪ್ರೋತ್ಸಾಹಧನ ದೊರೆಯುವುದಿಲ್ಲ ಎಂಬ ಷರತ್ತುಗಳನ್ನು ವಿಧಿಸಿರುವುದರಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯದೆ ತೊಂದರೆಯಾಗುತ್ತಿದೆ. ಹೀಗಾಗಿ ಸಾಲ ಪಡೆಯಲು ರೈತರಿಗೆ ವಿಧಿಸಿರುವ ಈ ಎಲ್ಲಾ ಷರತ್ತುಗಳನ್ನು ಹಿಂಪಡೆಯುವ ಮೂಲಕ ರೈತರಿಗೆ ಈ ಹಿಂದಿನಂತೆ ನಿವ್ವಳ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.