ಭಾರತೀಯ ಪತ್ರಕಾರ್ ಕಲ್ಯಾಣ ಮಂಚ್ ಇದರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಹಾಜಿ ಎಸ್. ಅಬೂಬಕರ್ ಆರ್ಲಪದವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕುರುಕ್ಷೇತ್ರ (ಹರಿಯಾಣ)ದಲ್ಲಿ ಕೇಂದ್ರ ಕಚೇರಿಯನ್ನೊಂದಿ ಕಾರ್ಯಾಚರಿಸುತ್ತಿರುವ ಭಾರತೀಯ ಪತ್ರಕಾರ್ ಕಲ್ಯಾಣ ಮಂಚ್ ಇದರ ಕರ್ನಾಟಕ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಗಡಿನಾಡ ಧ್ವನಿ ಪತ್ರಿಕಾ ಸಂಪಾದಕರೂ ಹಲವಾರು ಸಂಘಟನೆಗಳ ರೂವಾರಿಗಳೂ ಸಾಮಾಜಿಕ ಚಿಂತಕರೂ ಆದ ಡಾ. ಹಾಜಿ ಎಸ್. ಅಬೂಬಕರ್ ಆರ್ಲಪದವು ಇವರನ್ನು ರಾಜ್ಯಾಧ್ಯಕ್ಷರಾದ ಡಾ. ಎ. ಡಿ. ಕೊಟ್ನಾಲ್ ಇವರ ಶಿಫಾರಸಿನ ಮೇರೆಗೆ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಪವನ ಆಶ್ರೀ ಇವರು ನೇಮಕಾತಿ ಮಾಡಿ ಆದೇಶಿಸಿದ್ದಾರೆ ಡಾ. ಹಾಜಿ ಎಸ್. ಅಬೂಬಕರ್ ಆರ್ಲಪದವು ಇವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಸಿಎಸ್ಸಿ ವಿಎಲ್ಇ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕರ್ನಾಟಕ ಮುಸ್ಲಿಂ ಜಮಾತ್ ತಾಲೂಕು ಕಾರ್ಯದರ್ಶಿಯಾಗಿಯೂ ತಾಲೂಕು ಕಾನೂನು ಪ್ರಾಧಿಕಾರದ ಪ್ಯಾರಾ ಲೀಗಲ್ ವ್ಯಾಲೆಂಟರಿಯಾಗಿಯೂ, ವಿದ್ಯಾಸಂಸ್ಥೆಗಳ ಅಧ್ಯಕ್ಷರು ಗಳಾಗಿಯೂ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿಯೂ ಅಲ್ಲದೆ ಹಲವಾರು ಸಂಘ-ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ .ಇವರು ಗೌರವ ಡಾಕ್ಟರೇಟ್ , ಭಾರತ ವಿಕಾಸ ರತ್ನ, ಕರ್ನಾಟಕ ಜ್ಞಾನ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಶ್ರೀ ರಾಷ್ಟ್ರಪ್ರಶಸ್ತಿ, ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನುಗ್ರಹ ಪ್ರಶಸ್ತಿ , ಡಾ. ಬಿ. ಆರ್. ಅಂಬೇಡ್ಕರ್ ರಾಜ್ಯಪ್ರಶಸ್ತಿ, ಡಾ. ಶಿವರಾಮ ಕಾರಂತ ರಾಷ್ಟ್ರಪ್ರಶಸ್ತಿ, ಆರ್ಯಭಟ್ಟ ರಾಷ್ಟ್ರಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯಪ್ರಶಸ್ತಿ , ಸೇರಿದಂತೆ ಸುಮಾರು 160 ಕ್ಕಿಂತ ಮಿಕ್ಕಿದ ಪ್ರಶಸ್ತಿಗಳನ್ನು ಪಡೆದುಕೊಂಡಿರುವರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.