ಯುವ ಕಾಂಗ್ರೆಸ್‌ನಿಂದ ಸೇವಾ ಗೌರವ ಕಾರ್ಯಕ್ರಮ: ಸುದ್ದಿ ಬಿಡುಗಡೆ ಸಂಸ್ಥೆಗೆ ಕೋವಿಡ್ ಸುರಕ್ಷಿತಾ ಪರಿಕರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಮಾಜದ ಒಟ್ಟು ರಕ್ಷಣೆಯ ಜೊತೆಗೆ ತಮ್ಮ ರಕ್ಷಣೆಯನ್ನೂ ಮಾಡಿ ಕೊಳ್ಳಿ – ಹೇಮನಾಥ ಶೆಟ್ಟಿ

ಪುತ್ತೂರು: ಸುದ್ದಿ ಸಮೂಹದ ಮೂಲಕ ಕೋವಿಡ್ ಸೋಂಕಿನಿಂದ ಜಾಗೃತಿ ಮೂಡಿಸುವ ಮೂಲಕ ಸಮಾಜದ ಒಟ್ಟು ರಕ್ಷಣೆಯ ಜೊತೆಗೆ ಮಾದ್ಯಮ ಬಳಗ ತಮ್ಮ ರಕ್ಷಣೆಯನ್ನೂ ಮಾಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನಿಂದ ಕೋವಿಡ್ ಸುರಕ್ಷಿತಾ ಪರಿಕರ ವಿತರಣೆ ಮಾಡಲಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಮಾದ್ಯಮ ಬಳಗದವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಜೂ.೧೦ರಂದು ಯುವಕ ಕಾಂಗ್ರೆಸ್ ವತಿಯಿಂದ ಸುದ್ದಿ ಬಿಡುಗಡೆ ಕಚೇರಿಗೆ ಸ್ಯಾನಿಟೈಸರ್ ಸ್ಟಾಂಟ್ ಮತ್ತು ಮಾಸ್ಕ್, ಫೇಸ್‌ಶೀಲ್ಡ್ ಅನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹೇಮನಾಥ ಶೆಟ್ಟಿಯವರು ಯುವಕ ಕಾಂಗ್ರೆಸ್ ರಾಜಕೀಯ ಪಕ್ಷಕ್ಕೆ ಒಳಪಟ್ಟಿದ್ದು, ಪುತ್ತೂರಿನಾದ್ಯಂತ ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ, ಕೋವಿಡ್ ಸೋಂಕಿತರ ಸಾಗಾಟ, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಲ್ಲೂ ಸಹಕಾರ ಸೇರಿದಂತೆ ರಕ್ತದಾನ ಮಾಡುವ ಮೂಲಕ ಮಹತ್ವದ ಕಾರ್ಯವನ್ನು ಮಾಡಲಾಗುತ್ತಿದೆ. ಈ ಎಲ್ಲಾ ನೈಜ ವಿಚಾರಗಳು ಸುದ್ದಿ ಪತ್ರಿಕೆಯೂ ಪ್ರಕಟಿಸಿ ಇತರರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಮಾಡಿದೆ. ಇಂತಹ ಸಮಾಜಮುಖಿ ಕಾರ್ಯದಲ್ಲಿರುವ ಪತ್ರಿಕಾ ರಂಗದವರು ತಮ್ಮ ಆರೋಗ್ಯ ಕಾಪಾಡಬೇಕೆನ್ನುವ ದೃಷ್ಟಿಯಿಂದ ಸಂಸ್ಥೆಗೆ ಕಿಂಚಿತ್ ಕೋವಿಡ್ ಸುರಕ್ಷಿತಾ ಪರಿಕರ ವಿತರಣೆ ಮಾಡಿದ್ದೇವೆ ಎಂದರು.

ಸೇವಾ ಗೌರವ ಕಾರ್ಯಕ್ರಮ:
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅವರು ಮಾತನಾಡಿ ಯುವ ಕಾಂಗ್ರೆಸ್ ವತಿಯಿಂದ ಸೇವಾ ಗೌರವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೇವೆಯನ್ನು ಗುರುಸಿವ ಮೂಲಕ ಕೋವಿಡ್ ಸೇರಿದಂತೆ ಪ್ರಕೃತಿ ವಿಕೋಪದಲ್ಲೂ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ ಸಂದರ್ಭದಲ್ಲಿ ನಿಮ್ಮ ಆರೋಗ್ಯ ರಕ್ಷಣೆಗೆ ಸೇವೆ ಗುರುತಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಸುದ್ದಿ ಸಂಸ್ಥೆಯ ಪಿ.ಎಸ್ ಭಟ್ ಕೋವಿಡ್ ಸುರಕ್ಷತಾ ಪರಿಕರಗಳನ್ನು ಸ್ವೀಕರಿಸಿದರು. ಸಂಸ್ಥೆಯ ಬೆಂಗಳೂರು ವರದಿಗಾಗ ಗಣೇಶ್ ಕಲ್ಲರ್ಪೆಯವರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಪಾರೂಕ್, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸನತ್ ಯೂಸುಫ್, ಸಿದ್ದಿಕ್ ಸುಲ್ತಾನ್, ಕಮಲೇಶ್, ನಗರಸಭಾ ಮಾಜಿ ಸದಸ್ಯ ಅನ್ವರ ಖಾಸಿಂ, ಸಾಮಾಜಿಕ ಜಾಲತಾಣದ ಮುಖಂಡ ಜಗದೀಶ್ ಕಜೆ, ಅನಿಲ್ ಪುಣ್ಚತ್ತಾರ್, ರವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.