ನೂಜಿಬಾಳ್ತಿಲ ಕೋವಿಡ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ: ನೂಜಿಬಾಳ್ತಿಲ ಕೊರೋನ ಕಾರ್ಯಪಡೆ ಸಭೆಯು ಜೂನ್ 8ರಂದು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಇವರು ಅಧ್ಯಕ್ಷೆ ವಹಿಸಿ ಮಾತನಾಡಿದ ಇವರು ಪ್ರಸ್ತುತ ವಿದ್ಯಮಾನದಲ್ಲಿ ಮಾನವನ ಜೀವನವನ್ನು ಬುಡ ಮೇಲು ಮಾಡಿದ ಒಂದು ಸಾಂಕ್ರಾಮಿಕ ರೋಗವೇ ಕೊರೋನಾ. ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು. ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಆರೋಗ್ಯ ಇಲಾಖೆಯವರು ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿಗಳನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿ ಈ ಮೂಲಕ ವಾರ್ಡ್ ವ್ಯಾಪ್ತಿ ಪ್ರತಿ ಮನೆಗೆ ಭೇಟಿ ನೀಡಿ ಅವರಿಗೆ ಡೆಂಗ್ಯೂ ,ಕೊರೋನಾ , ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಅವರು ಮಾತನಾಡಿ ಹೋಂ ಕ್ವಾರಂಟೆನ್ ನ್ನಲ್ಲಿರುವ ಪ್ರತಿ ಮನೆಗಳಿಗೆ ಭೇಟಿ ನೀಡಿ ಔಷಧಿ ಅವರಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ಒದಗಿಸಲಾಗಿದೆ ಅವರು ಹೊರಗಡೆ ಎಲ್ಲೂ ಹೋಗದೆ ಮನೆಯಲ್ಲಿಯೇ ಇರುವಂತೆ ಅವರ ಮನವೊಲಿಸಲಾಗಿದೆ. ಸಂಜೆ ಹೊತ್ತಲ್ಲಿ ಆಟದ ಮೈದಾನದಲ್ಲಿ ರಸ್ತೆಗಳಲ್ಲಿ ಆಟ ಆಡುವುದು ಕಂಡುಬಂದಿದ್ದು ಅವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ನಮ್ಮ ಗ್ರಾಮವನ್ನು ಕೊರೋನಾ ಮುಕ್ತ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಕರೋನ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕರೋನ ಪೋಸಿಟಿವ್ ಬಂದ ವ್ಯಕ್ತಿಯನ್ನು ಕೋವಿಡ್ ಸೆಂಟರಿಗೆ ಕಳುಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿರುವ ಕೊರೋನ ಪೋಸಿಟಿವ್ ಪ್ರಕರಣಗಳ ಬಗ್ಗೆ ಕಿರಿಯ ಆರೋಗ್ಯ ಸಹಾಯಕಿ ದಯಾ ಕಿರಣ್ ಮತ್ತು ಮಧುರ ಮಾಹಿತಿ ನೀಡಿದರು. ನೂಜಿಬಾಳ್ತಿಲ ವ್ಯಾಪ್ತಿಯ ನೋಡಲ್ ಅಧಿಕಾರಿ ಎಚ್.ಪಿ. ರಾಘವೇಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ.ಪಿ. ವರ್ಗಿಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಹಳೆ ನೂಜಿ, ವಸಂತ ಕುಬಲಾಡಿ, ಶ್ರೀಧರ ಗೌಡ ಗೋಳ್ತಿಮಾರ್, ವಿಜಯಲಕ್ಷ್ಮಿ ಅರಿ ಮಜಲು, ಉಮೇಶ್.ಎಸ್.ಜೆ, ವಿನಯ ಕುಮಾರಿ ಬಳಕ್ಕ , ಮೀನಾಕ್ಷಿ , ಸಿವಿಲ್ ಇಂಜಿನಿಯರ್ ದುರ್ಗಾ ಪ್ರಸಾದ್ , ಶಾಲಾ ಮುಖ್ಯಶಿಕ್ಷಕಿ ಸುಂದರಿ, ಲಕ್ಷ್ಮಣಗೌಡ ಶಾಂತಿಯಡ್ಕ , ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಯ ಪ್ರತಿನಿಧಿಗಳಾದ ಜಯಂತ ಕುಮಾರ್ ಬರಮೇಲು, ಪುರುಶೋತ್ತಮ ಗರ್ಗಸ್ ಪಾಲ್ , ವರ್ಗೀಸ್.ವಿ.ಕೆ, ಸರೋಲಿ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿಗೆ ಇನ್ನುಮುಂದೆ ಕೊರೋನಾ ಪಾಸಿಟಿವ್ ಬಂದರೆ ಅಂತಹ ವ್ಯಕ್ತಿಯನ್ನು ಗ್ರಾಮಸ್ಥರ ಆರೋಗ್ಯದ ಹಿತಾದೃಷ್ಟಿಯಿಂದ ಯಾವುದು ಮುಲಾಜಿಲ್ಲದೆ ನೇರಾ ಕೋವಿಡ್ ಕೇರ್ ಸೆಂಟರ್ ರಿಗೆ ಕಳುಹಿಸಲಾಗುವುದು. ಅದೇ * ರೀತಿ ಪಾಸಿಟಿವ್ *ಬಂದವ್ಯಕ್ತಿಯ ಪ್ರೈಮರಿ ಕಾಂಟ್ಯಾಕ್ಟ್ ಮಾತ್ರವಲ್ಲದೆ ನೆರೆಹೊರೆಯ, ಆಸುಪಾಸಿನ ಎಲ್ಲ ಮನೆಗಳ ನಿವಾಸಿಗಳ ಕಡ್ಡಾಯ ಟೆಸ್ಟ್* ಮಾಡಲಾಗುವುದು ಅದೇ ರೀತಿ ಅನಗತ್ಯವಾಗಿ ತಿರುಗಾಡುವುದು ಮಾಡುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮವನ್ನು ಯಾವುದೇ ಮುಲಾಜಿಲ್ಲದೆ ಕೈಗೊಳ್ಳಲಾಗುವುದು* .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.