ಕುಂಬ್ರ: ಒಳಮೊಗ್ರು ಗ್ರಾಪಂ ಕೋವಿಡ್ ಗ್ರಾಮೀಣ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ಕೋವಿಡ್ ಗ್ರಾಮೀಣ ಕಾರ್ಯಪಡೆ ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಗ್ರಾಮದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದ್ದು ಕೊರೊನ, ಡೆಂಗು, ತಡೆಗಟ್ಟಲು ದ್ವನಿವರ್ಧಕ ದ ಮೂಲಕ ಪ್ರಚಾರ ಪಡಿಸುವುದು, ವಿಕಲಚೇತನರನ್ನು ವ್ಯಾಕ್ಸಿನ್‌ಗೆ ಹೋಗಲು ಪಂಚಾಯತ್‌ನಿಂದ ವಾಹನದ ವ್ಯವಸ್ಥೆ ಮಾಡಲಾಗುವುದು, ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವ ಬಗ್ಗೆ ಕಾರ್ಯಪಡೆ ತಂಡ ನಿಗಾ ವಹಿಸುವುದು ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಆಶಾ ಕಾರ್ಯಕರ್ತರು, ಕಿ. ಮ. ಆ. ಸಹಾಯಕಿ ಹಾಗೂ ಪಂಚಾಯತ್ ಸಿಬ್ಬಂದಿಗಳಿಗೆ ಬ್ಯಾಗ್,ಕೊಡೆ, ಮಾಸ್ಕ್, ಸ್ಯಾನಿಟೈಸರ್ ಅನ್ನು ಉದ್ಯಮಿ ಸಂತೋಷ ರೈ ಕೈಕಾರರವರು ವಿತರಣೆ ಮಾಡಿದರು. ಪ್ಲೈಯಿಂಗ್ ಸ್ಕ್ವಾಡ್ ಆಫೀಸರ್ ರಾಮಚಂದ್ರ, ನೊಡೆಲ್ ಅಧಿಕಾರಿ ವಿದ್ಯಾರಾಣಿ, ಬೀಟ್ ಪೊಲೀಸ್ ಕರುಣಾಕರ, ಗ್ರಾಮ ಕರಣಿಕ ರಾಧಾಕೃಷ್ಣ, ಪಂಚಾಯತ್ ಉಪಾಧ್ಯಕ್ಷೆ ಸುಂದರಿ, ಸದಸ್ಯರು, ಆರೋಗ್ಯಇಲಾಖೆಯವರು, ಕಾರ್ಯಪಡೆ ಸದಸ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.