ಬೊಳುವಾರು ವಾರ್ಡ್‌ನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಜನಜಾಗೃತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೊಳುವಾರು ವಾರ್ಡ್ 15ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗಗಳು ಹರಡದಂತೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನವನೀತಂ ಸಭಾಭವನದಲ್ಲಿ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಮನೋಹರ್‌ರವರು ಸಾಂಕ್ರಾಮಿಕ ರೋಗ ತಡೆಯುವ ಕುರಿತು ಮಾಹಿತಿ ನೀಡಿದ ಅವರು ವಾರ್ಡ್ -15 ಕೋರೋನ ಮುಕ್ತವಾಗುವುದಕ್ಕೆ ಸಹಕರಿಸಿದ ಸಾರ್ವಜನಿಕರನ್ನು ಅಭಿನಂದಿಸಿದರು. ಸಭೆಯಲ್ಲಿ ನಗರಸಭೆಯ ನೋಡಲ್ ಅಧಿಕಾರಿ ರವೀಂದ್ರ, ನೀರಿನ ನಿರ್ವಾಹಕರಾದ ರಾಜೇಶ್‌ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆಯ ಸೂಪರ್ಡೆಂಟ್ ಸಿ.ಆರ್ ದೇವಾಡಿಗ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಅಂಗನವಾಡಿ ಶಿಕ್ಷಕಿ ಯಶೋಧ, ಮಾಜಿ ಪುರಸಭೆ ಅಧ್ಯಕ್ಷೆ ಪ್ರೇಮಲತಾ ರಾವ್, ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರಾದ ಜಾನ್ ಕುಟ್ಹೀನ , ರಂಗನಾಥರಾವ್, ಶ್ರೀಪತಿ, ಪ್ರದೀಪ್ ಹೆಗ್ಡೆ, ಮಹಿಳಾ ಮೋರ್ಚಾ ಪ್ರಭಾವತಿ , ರವಿ ಪೂಜಾರಿ ಉಪಸ್ಥಿತರಿದ್ದರು.  ಉಸ್ಮಾನ್ ರವರು ವಂದಿಸಿದರು. ಕಾರ್ಯಕ್ರಮವನ್ನು ನೀಲಂತ್ ಕುಮಾರ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.