ನೇರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನೇರ ನೇಮಕಾತಿಗಾಗಿ ಸರಕಾರಕ್ಕೆ ನಮ್ಮ ಕಡೆಯಿಂದಲೂ ಮನವಿ – ಕೆ ಜೀವಂಧರ್ ಜೈನ್
  • ಕಪ್ಪು ಪಟ್ಟಿ ಧರಿಸಿ ಕರ್ತವ್ಯ – ಅಣ್ಣಪ್ಪ ಕಾರೆಕ್ಕಾಡು

ಪುತ್ತೂರು: ಪೌರ ಕಾರ್ಮಿಕರ ಹುದ್ದೆಗಳ ನೇರ ನೇಮಕಾತಿಗೆ ಸರಕಾರ ಚಾಲನೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ರಾಜ್ಯ ವ್ಯಾಪಿ ಕಪ್ಪು ಪಟ್ಟಿ ಧಿರಿಸಿ ತಮ್ಮ ಕರ್ತವ್ಯ ನಿರ್ವಹಿಸುವ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ನಗರಸಭೆ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಜೂ. 11ರಂದು ಬೆಳಿಗ್ಗೆ ಪುತ್ತೂರು ನಗರಸಭೆಯ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಕರ್ತವ್ಯಕ್ಕೆ ಹಾಜರಾದರು.

ಬೆಂಗಳೂರು ರಾಮನಗರದಲ್ಲಿ ಮ್ಯಾನ್ ಹೋಲ್ ಕಾಮಗಾರಿ ನಿರ್ವಹಿಸುತ್ತಿದ್ದ ಮೂವರು ಪೌರಕಾರ್ಮಿಕರು ಸಾವನ್ನಪ್ಪಿರುವ ದುರ್ಘಟನೆ ಜರುಗಿದೆ. ರಾಜ್ಯಾದ್ಯಂತ ಈ ರೀತಿಯ ಘಟನೆಗಳು ನಡೆಯುತ್ತಿದ್ದರು ಆಡಳಿತ ವರ್ಗ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಬೇಜಾವಾಬ್ದಾರಿತನ ತೋರಿರುವುದು ಕಂಡು ಬಂದಿರುತ್ತದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಪೌರಕಾರ್ಮಿಕರು ಮ್ಯಾನ್ ಹೋಲ್ ನಲ್ಲಿ ಜೀವ ಕಳೆದುಕೊಂಡ 85 ಪ್ರಕರಣಗಳು ನಡೆದಿವೆ. ಪ್ರತಿ ಸಾರಿ ಘಟನೆ ನಡೆದಾಗ ಒಂದಿಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತದೆ. ಪರಿಣಾಮ ಪದೇ ಪದೇ ಈ ಮಾದರಿಯ ಪ್ರಕರಣಗಳು ಘಟಿಸುತ್ತವೆ. ಮಂಡ್ಯದಲ್ಲೂ ಇದೇ ಘಟನೆಯಿಂದ ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎಲ್ಲಾ ಘಟನೆ ಪೌರಕಾರ್ಮಿಕರ ಜೀವಕ್ಕೆ ಯಾವುದೆ ಬೆಲೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಮ್ಯಾನ್ ಹೋಲ್ ನಲ್ಲಿ ಪ್ರಾಣಕಳೆದುಕೊಂಡ ಕಾರ್ಮಿಕರ ಕುಟುಂಬಗಳಿಗೆ ಅವರು ಬಯಸಿದ ಸ್ಥಳದಲ್ಲಿ ಅನುಕಂಪದ ನೌಕರಿ ನೀಡಬೇಕು. ರಾಜ್ಯದಲ್ಲಿ ಅತ್ಯಂತ ಅಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬಾಕೀ ಉಳಿದಿರುವ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಚಾಲನೆ ನೀಡಬೇಕು. ಇದಲ್ಲದೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯಗತ್ಯ ಸೇವೆ ನಿರ್ವಹಿಸುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ವಾಟರ್ ಮೆನ್.ಡಾಟ ಆಪರೇಟರ್ ಗಳಿಗೆ ಹಲವೆಡೆ ಸಕಾಲಕ್ಕೆ ಸೂಕ್ತ ವೇತನವನ್ನೇ ನೀಡುತ್ತಿಲ್ಲ. ಅತ್ಯಂತ ಅಭದ್ರತೆಯಲ್ಲಿರುವ ಈ ನೌಕರರಿಗೆ ತಕ್ಷಣ ವೇತನ ಬಿಡುಗಡೆ ಮಾಡುವ ಜತೆಗೆ ಗುತ್ತಿಗೆ ಬದಲಿಗೆ ನೇರ ವೇತನಕ್ಕೆ ಒಳಪಡಿಸುವಂತೆ ಮತ್ತು ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂ ಸರಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಲಾಯಿತು.

ನೇರ ನೇಮಕಾತಿ, ಪಾವತಿಗೆ ಸರಕಾರಕ್ಕೆ ನಮ್ಮ ಕಡೆಯಿಂದಲೂ ಮನವಿ :
ಪೌರಕಾರ್ಮಿಕರ ಸಾಂಕೇತಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ಮಾತನಾಡಿ ನಾವು ಕೂಡಾ ನಮ್ಮ ಕಡೆಯಿಂದ ಪೌರ ಕಾರ್ಮಿಕರ ನೇಮಕಾತಿಗೆ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಪ್ಪು ಪಟ್ಟಿ ಧರಿಸಿ ಕರ್ತವ್ಯ:
ಪೌರಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ಪುತ್ತೂರು ನಗರಸಭೆಯಲ್ಲಿ ೪೧ ಮಂದಿ ನೇರಪಾವತಿ ಅಡಿಯಲ್ಲಿ ಮತ್ತು ೭ ಮಂದಿ‌ ಖಾಯಂ ಪೌರಕಾರ್ಮಿಕರಿದ್ದಾರೆ. ನೇರ ಪಾವತಿಯಲ್ಲಿರುವ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿ ಸರಕಾರಿ ಸೌಲಭ್ಯವನ್ನು ಅವರಿಗೆ ಒದಗಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದೇವೆ ಎಂದರು. ಪೌರಕಾರ್ಮಿಮರ ಗೌರವ ಸಲಹೆಗಾರ ಐತ್ತಪ್ಪ, ಅಮಿತ್, ನಾಗೇಶ್, ರಾಧಾಕೃಷ್ಣ ಸೇರಿದಂತೆ ಪೌರಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.