ಕಡಬ ಪಟ್ಟಣ ಪಂಚಾಯತ್ ಕೊರೋನಾ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೊರೋನಾ ಪೀಡಿತರಿಗೆ, ಕೊರೋನಾ ವಾರಿಯರ್‍ಸ್‌ಗೆ ಕಿಟ್ ಕೊಡಲು ಕಡಬ ಪಟ್ಟಣ ಪಂಚಾಯತ್‌ನಲ್ಲಿ ಹಣವಿಲ್ಲ!
  • ಕಿಟ್ ಕೊಡುವ ಬಗ್ಗೆ ತಹಶೀಲ್ದಾರ್ ಭರವಸೆ

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊರೋನಾ ಪೀಡಿತರಿಗೆ ಹಾಗೂ ಈ ರೋಗದ ವಿರುದ್ದ ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಸೇರಿದಂತೆ ಕೊರೋನಾ ವಾರಿಯರ್‍ಸ್‌ಗೆ ಕನಿಷ್ಠ ಕಿಟ್ ಕೊಡುವ ವ್ಯವಸ್ಥೆಗೆ ಕಡಬ ಪಟ್ಟಣ ಪಂಚಾಯತ್‌ನಲ್ಲಿ ಹಣವಿಲ್ಲ ಎಂಬ ವಿಚಾರ ಕೊರೋನಾ ಕಾರ್ಯಪಡೆಯಲ್ಲಿ ಚರ್ಚೆಗೆ ಬಂದಿದೆ.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊರೋನಾ ಕಾರ್ಯಪಡೆ ಸಭೆ ಓಂತ್ರಡ್ಕ ಶಾಲೆಯಲ್ಲಿ ಜೂ.೧೦ರಂದು ಕಡಬ ತಹಶೀಲ್ದಾರ್ ಅನಂತ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಜಿ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಅವರು ಮಾತನಾಡಿ, ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಕಿಟ್ ನೀಡುವ ಕಾರ್ಯ ನಡೆಯುತ್ತಿದೆ, ಆದರೆ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಪೀಡಿತರಿಗೆ ಆಗಲಿ ಕೊರೋನಾ ವಾರಿಯರ್‍ಸ್‌ಗೆ ಕಿಟ್ ಕೊಡುವ ವ್ಯವಸ್ಥೆ ಇದುವರೆಗೆ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಈ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಪಟ್ಟಣ ಪಂಚಾಯತ್ ಅಧಿಕಾರಿಗಳು ಕಿಟ್ ನೀಡಲು ಪಟ್ಟಣ ಪಂಚಾಯತ್‌ನಲ್ಲಿ ಅನುದಾನವಿಲ್ಲ ಎಂದರು. ಈ ಬಗ್ಗೆ ಮಾತನಾಡಿದ ಆಡಳಿತಾಧಿಕಾರಿಯಾಗಿರುವ ಕಡಬ ತಹಶೀಲ್ದಾರ್ ಅನಂತಶಂಕರ್ ಮಾತನಾಡಿ, ಗ್ರಾ.ಪಂ.ಗೆ ವಿಶೇಷ ೫೦ ಸಾವಿನ ಅನುದಾನ ಬಂದಿದೆ, ಅಲ್ಲದೆ ೧೪ ನೇ ಹಣಕಾಸು ಯೋಜನೆಯಡಿ ನಿರ್ವಹಿಸಲು ಅವಕಾಶವಿದೆ ಹೀಗಾಗಿ ಗ್ರಾ,.ಪಂ ವ್ಯಾಪ್ತಿಯಲ್ಲಿ ಆಹಾರ ಕಿಟ್ ನೀಡಲಾಗುತ್ತಿದೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೂ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆಶಾಕಾರ್ಯಕರ್ತೆಯರು, ಅಂಗಡಿವಾಡಿ ಕಾರ್ಯಕರ್ತೆಯರು ಮತ್ತು ಪ.ಪಂ ಅಧಿಕಾರಿಗಳಿಂದ ಸಲಹೆಗಳನ್ನು ಪಡೆದು ಮಾತನಾಡಿದ ತಹಶೀಲ್ದಾರ್ ಅವರು ಜನರಲ್ಲಿ ಕೊರೋನಾ ಸೋಂಕಿನ ಭಯ ಕಡಿಮೆಯಾಗಿರುವುದು ಕಂಡು ಬರುತ್ತಿದೆ, ಎಲ್ಲೆಂದರಲ್ಲಿ ಗುಂಪು ಸೇರುವುದು ಹೆಚ್ಚುತ್ತಿದೆ, ಕೊರೋನಾ ನಿಯಂತ್ರಣ ಜನರ ಕೈಯಲ್ಲಿಯೂ ಇದ್ದು ಮಾರ್ಗಸೂಚಿ ಪಾಲಿಸಿ ಇಲಾಖೆಯ ಜೊತೆ ಕೈಜೋಡಿಸಿದು ಸಾರ್ವಜನಿಕರ ಮಹತ್ವದ ಹೊಣೆಯಾಗಿದೆ ಎಂದರು. ಅಲ್ಲದೆ ವಾರ್ಡ್ ವ್ಯಾಪ್ತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಜನರಿಗೆ ಜಾಗೃತಿ ಮೂಡಿಸುವಂತೆಯೂ ಸಲಹೆ ನೀಡಿದರು.

ಕಡಬ ಪಟ್ಟಣ ಪಂಚಾಯತ್ ನೋಡಲ್ ಅಧಿಕಾರಿ ಹರೀಶ್ ಬೆದ್ರಾಜೆಯವರು ಮಾತನಾಡಿ, ಆರೋಗ್ಯ ಇಲಾಖೆಯವರು ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿ ಕೊರೋನಾ ನಿರ್ಮೂಲನೆಗೆ ಅಧಿಕಾರಿ ವರ್ಗ ಶ್ರಮಿಸುತ್ತಿದೆ. ಆದರೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು ೨೬ ಆಕ್ಟೀವ್ ಕೇಸುಗಳಿವೆ. ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿ ಕೊರೋನಾ ಮುಕ್ತ ಪಟ್ಟಣವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಗ್ರಾ.ಪಂ ಮಾಜಿ ಸದಸ್ಯ ಆದಂ ಕೊಂಡೋಳಿ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಆರೋಗ್ಯ ಹಿರಿಯ ಸಹಾಯಕಿ ಅನ್ನಮ್ಮ, ಪಟ್ಟಣ ಪಂಚಾಯತ್‌ನ ಸಿಬ್ಬಂದಿಗಳಾದ ವಾರಿಜಾ, ಗುರುರಾಜ್ ಭಟ್, ಶಶಿಕಲಾ, ಕೀರ್ತನ್ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.