ಕುಂಬ್ರ : ಕೆಪಿಎಸ್ ಸ್ಕೂಲ್ ಆಟದ ಮೈದಾನದಲ್ಲಿ ಭತ್ತ ಕೃಷಿ | ಎರಡು ಎಕ್ರೆ ಮೈದಾನದಲ್ಲಿ ಬೆಳೆಯಲಿದೆ ಅನ್ನದ ಬಟ್ಟಲು..!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಭತ್ತ ಕೃಷಿ ಕಂಗೊಳಿಸಲಿದೆ, ಇದಕ್ಕಾಗಿ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು ಜೂ. 12ರಂದು ಪುತ್ತೂರು ಶಾಸಕರೂ ಕೆಪಿಎಸ್ ಸ್ಕೂಲ್ ಇದರ ಅಭಿವೃದ್ದಿ ಸಮಿತಿಯ ಅಧ್ಯಕ್ಷರೂ ಆದ ಸಂಜೀವ ಮಟಂದೂರು ಚಾಲನೆ ನೀಡಲಿದ್ದಾರೆ.

ಶಾಲಾ ಆಟದ ಮೈದಾನವನ್ನು ಅಭಿವೃದ್ದಿಪಡಿಸಲಾಗಿದೆ. ಸುಮಾರು ಎರಡು ಎಕ್ರೆ ವಿಸ್ತೀರ್ಣದಲ್ಲಿ ಆಟದ ಮೈದಾನ ಕಂಗೊಳಿಸುತ್ತಿದೆ. ಉಬ್ಬು ತಗ್ಗುಗಳಿಂದ ಕೂಡಿದ್ದ ಆಟದ ಮೈದಾನವನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಎರಡು ತಿಂಗಳಿಂದ ಮೈದಾನ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ವಿಶಾಲವಾದ ಆಟದ ಮೈದಾನ ಮಳೆಗಾಲದಲ್ಲಿ ಕ್ರೀಡೆಗೆ ಬಳಸದೇ ಇರುವ ಕಾರಣ ಈ ಬಾರಿ ಮೈದಾನದಲ್ಲಿ ಭತ್ತ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ.

 

ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಯೋಗ
ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆಯ ಸಹಬಾಗಿತ್ವದಲ್ಲಿ ಭತ್ತ ಕೃಷಿ ಮಾಡಲಾಗುತ್ತದೆ. ಶಾಲಾ ಆಡಳಿತ ಮಂಡಳಿ ನೇತೃತ್ವ ವಹಿಸಲಿದ್ದು , ಒಳಮೊಗ್ರು ಗ್ರಾಪಂ ಸಹಕಾರ ನೀಡಲಿದೆ. ಜೂ. 12 ರಂದು ಶಾಸಕರು ಚಾಲನೆ ನೀಡಿದ ಬಳಿಕ ನಾಟಿಗೆ ಬೇಕಾದ ಹದ ಪ್ರಕ್ರಿಯೆ ನಡೆಯಲಿದೆ. ಮಳೆಗಾಲ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ಬಿತ್ತನೆ ಕಾರ್ಯ ನಡೆಯಲಿದೆ.

ಸುಮಾರು ಎರಡು ಎಕ್ರೆ ವಿಶಾಲವಾದ ಮೈದಾನದಲ್ಲಿ ಈ ಬಾರಿ ಭತ್ತ ಬೆಳೆಸಲಿದ್ದೇವೆ. ಶಾಲಾ ಕ್ರೀಡಾಂಗಣಕ್ಕೆ ಮಣ್ಣು ಹಾಕಿ ಹದ ಮಾಡಲಾಗಿದೆ. ಮಳೆಗಾಲದಲ್ಲಿ ಯಾವುದೇ ಕ್ರೀಡಾ ಚಟುವಟಿಕೆ ನಡೆಯುವುದಿಲ್ಲವಾದ್ದರಿಂದ ಕೃಷಿ ಮಾಡಲು ಯಾವುದೇ ಅಡ್ಡಿ ಎದುರಾಗುವುದಿಲ್ಲ. ಹೊಸ ಪ್ರಯೋಗ ಎಂಬಂತೆ ಶ್ರೀ. ಕ್ಷೇ. ಧರ್ಮಸ್ಥಳ ಒಕ್ಕೂಟದ ಸಹಕಾರದೊಂದ ಈ ಕಾರ್ಯ ನಡೆಯಲಿದೆ. ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು ಅವರ ಮಾರ್ಗದರ್ಶನದಲ್ಲಿ ಎಲ್ಲಾ ಚಟುವಟಿಕೆಗಳು ನಡೆಯಲಿದೆ – ನಿತೀಶ್‌ಕುಮಾರ್ ಶಾಂತಿವನ ಕಾರ್ಯಾಧ್ಯಕ್ಷರು ಕೆಪಿಎಸ್ ಸ್ಕೂಲ್ ಕುಂಬ್ರ

ಶ್ರೀ. ಕ್ಷೇ. ಧ. ಒಕ್ಕೂಟದ ಸಹಭಾಗಿತ್ವದಲ್ಲಿ ಭತ್ತ ಕೃಷಿ ನಡೆಯಲಿದೆ. ಭತ್ತ ಕೃಷಿ ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ಶಾಲಾ ಆಟದ ಮೈದಾನವನ್ನೇ ಗದ್ದೆಯನ್ನಾಗಿಸಿ ನಾವು ಹೊಸ ಪ್ರಯೋಗವನ್ನು ನಡೆಸಲಿದ್ದೇವೆ. ಈ ಬಾರಿ ಯಸಸ್ವಿಯಾದರೆ ಮುಂದೆ ಪ್ರತೀ ವರ್ಷವೂ ಭತ್ತ ಕೃಷಿ ಮಾಡುವ ಪ್ರಯತ್ನವನ್ನು ಮಾಡುತ್ತೇವೆ. ಇದಕ್ಕೆ ಗ್ರಾಮಸ್ಥರ ಸಹಕಾರವೂ ಅಗತ್ಯವಾಗಿದೆ – ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರು, ಶ್ರೀ. ಕ್ಷೇ. ಧ. ಒಕ್ಕೂಟ ಕುಂಬ್ರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.