ನೆಹರುನಗರದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಅಕ್ರಮ ಶೆಡ್ ನಿರ್ಮಾಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಬಕ ಗ್ರಾ.ಪಂ, ನಗರಸಭೆ ಜಂಟಿ ಕಾರ್ಯಾಚರಣೆ- ಶೆಡ್ ತೆರವು

ಪುತ್ತೂರು: ನಗರಸಭೆ ಮತ್ತು ಕಬಕ ಗ್ರಾ.ಪಂ ಸರಹದ್ದಿನ ನೆಹರುನಗರದ ತಾರಿಗುಡ್ಡೆ ಹೌಸಿಂಗ್ ಬೋರ್ಡ್‌ನಲ್ಲಿರುವ ಸರಕಾರಿ ಜಮೀನಿನಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭ ಅಕ್ರಮವಾಗಿ ನಿರ್ಮಾಣಗೊಂಡಿರುವ ಶೆಡ್ ಅನ್ನು ನಗರಸಭೆ ಮತ್ತು ಕಬಕ ಗ್ರಾ.ಪಂ ಜಂಟಿ ಕಾರ್ಯಾಚರಣೆ ನಡೆಸಿ ತೆರವು ಮಾಡಿರುವ ಘಟನೆ ಜೂ.11ರಂದು ನಡೆದಿದೆ.

ನೆಹರುನಗರ ತಾರಿಗುಡ್ಡೆ ಹೌಸಿಂಗ್ ಬೋರ್ಡ್ ಸ್ಥಳದಲ್ಲಿ ಸರಕಾರಿ ಭೂಮಿಯಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸಿಮೆಂಟ್ ಶೀಟ್ ಅಳವಡಿಸಿದ ಶೆಡ್ ನಿರ್ಮಾಣಗೊಂಡಿತ್ತು. ಈ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆ ಮತ್ತು ಕಬಕ ಗ್ರಾ.ಪಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ತೆರವು ಕಾರ್ಯಚರಣೆ ನಡೆಸಿದರು. ಕಬಕ ಗ್ರಾ.ಪಂ ವಿ.ಎ ಜಂಗಪ್ಪ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಅವರು ಮಹಜರು ನಡೆಸಿದ ಬಳಿಕ ತೆರವು ಕಾರ್ಯ ನಡೆಯಿತು. ಕಬಕ ಗ್ರಾ.ಪಂ ಸಹಾಯಕ ಮನೋಹರ್ ಉಪಸ್ಥಿತರಿದ್ದರು. ಗೃಹರಕ್ಷಕದಳದ ಮಾರ್ಷಲ್‌ಗಳು ಬಂದೋಬಸ್ತ್ ಒದಗಿಸಿದರು. ನಗರಸಭೆ ಪೌರ ಕಾರ್ಮಿಕರು ಶೆಡ್ ತೆರವು ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.