ನೆಲ್ಯಾಡಿ ರಾಮನಗರ ವ್ಯಾಪ್ತಿಯಲ್ಲಿ 23 ಪಾಸಿಟಿವ್ ಪ್ರಕರಣ-ಸೀಲ್‌ಡೌನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ನ ವಾರ್ಡ್ ೫ರ ರಾಮನಗರ ವ್ಯಾಪ್ತಿಯಲ್ಲಿ ಒಂದೇ ದಿನ ಬರೋಬ್ಬರಿ ೨೩ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಆ ಪ್ರದೇಶದ ಆಯ್ದ ಭಾಗವನ್ನು ಸೀಲ್‌ಡೌನ್ ಮಾಡಲಾಗಿದೆ.

ಜೂ.೯ರಂದು ನಡೆದ ‘ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ರಾಮನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದರ ವರದಿ ಜೂ.೧೧ರಂದು ಬಂದಿದ್ದು ಬರೋಬ್ಬರಿ ೨೩ ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇದರಲ್ಲಿ ಒಂದೇ ಮನೆಯ ಐವರು ಸೇರಿದ್ದಾರೆ. ಉಳಿದಂತೆ ಕೆಲ ಮನೆಗಳಲ್ಲಿ ೪, ೩,೨,೧ರಂತೆ ಪ್ರಕರಣಗಳು ಪತ್ತೆಯಾಗಿವೆ. ೨೩ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಲೀಲಾ, ನೆಲ್ಯಾಡಿ ಗ್ರಾ.ಪಂ.ಪಿಡಿಒ ಮಂಜುಳ ಎನ್., ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರುಗಳಾದ ಯಾಕೂಬ್ ಸಲಾಂ, ಪ್ರಕಾಶ್ ಕೆ., ಸಿಬ್ಬಂದಿಗಳಾದ ಶಿವಪ್ರಸಾದ್, ಸೋಮಶೇಖರ, ಆಶಾ ಕಾರ್ಯಕರ್ತೆಯರಾದ ಪೂರ್ಣಿಮಾ, ಜಾನಕಿ, ಕೋವಿಡ್ ಕಾರ್ಯಪಡೆ ಸದಸ್ಯ ಸುಂದರ ಗೌಡ ಅತ್ರಿಜಾಲು ಮತ್ತಿತರರು ಭೇಟಿ ನೀಡಿ ಸೋಂಕಿತರಿಗೆ ಸೂಕ್ತ ಮಾಹಿತಿ, ಔಷಧಿ ನೀಡಿದರು. ಇಲ್ಲಿ ಹೆಚ್ಚು ಸೋಂಕು ಪೀಡಿತ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.