ಸವಣೂರು ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣದ ಹಿನ್ನಲೆ ಸವಣೂರು ಪೇಟೆಯಲ್ಲಿ ಗ್ರಾ.ಪಂ. ನಿಂದ ಜಾಗೃತಿ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                                                                                                                                     ಚಿತ್ರ- ಉಮಾಪ್ರಸಾದ್ ರೈ

ಪುತ್ತೂರು: ಸವಣೂರು ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ಸವಣೂರು ಪೇಟೆಯಲ್ಲಿ ಸವಣೂರು ಗ್ರಾ.ಪಂ. ನಿಂದ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಸವಣೂರು ಭಾಗದ ಅಂಗಡಿ, ಸೊಸೈಟಿ, ಬ್ಯಾಂಕ್‌ಗಳಿಗೆ ಭೇಟಿ ನೀಡಿದ ಪಂಚಾಯತ್  ತಂಡವು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ವ್ಯವಹಾರವನ್ನು ನಡೆಸುವಂತೆ ಮನವಿಯನ್ನು ಮಾಡಲಾಯಿತು.

ತರಕಾರಿ ವ್ಯಾಪಾರಿಗೆ ಏಚ್ಚರಿಕೆ ನೀಡಿದ ಪಂಚಾಯತ್
ಸವಣೂರಿನ ತರಕಾರಿ ವ್ಯಾಪಾರಿಯೊಬ್ಬ ಕೊಳೆತ ತರಕಾರಿಯನ್ನು ತನ್ನ ಅಂಗಡಿಯ ಮುಂಭಾಗದಲ್ಲಿ ಹಾಕಿರುವುದನ್ನು ಗಮನಿಸಿದ ಸವಣೂರು ಪಂಚಾಯತ್ ತಂಡವು ವ್ಯಾಪಾರಿಗೆ ಈ ಬಗ್ಗೆ ಏಚ್ಚರಿಕೆಯನ್ನು ನೀಡಿ, ಇನ್ನೂ ಮುಂದೆ ಕೊಳೆತ ತರಕಾರಿಯನ್ನು ರಸ್ತೆ ಬದಿ ಹಾಕಿದಲ್ಲಿ ದಂಡ ವಿಧಿಸುವ ಕ್ರಮ ಕೈಗೊಳ್ಳವುದಾಗಿ ಹೇಳಿದರು.

ಬ್ಯಾಂಕ್ ಗೆ ಭೇಟಿ
ಸವಣೂರಿನ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಲಾಯಿತು. ಅಲ್ಲದೇ ಕೋವಿಡ್ ಹಿನ್ನಲೆಯಲ್ಲಿ ಬ್ಯಾಂಕಿನ ಸಮಯವನ್ನು ಬೆಳಿಗ್ಗೆ 8 ಗಂಟೆಗೆ ಆರಂಭಿಸುವಂತೆ ಒತ್ತಾಯಿಸಲಾಯಿತು.

ಸವಣೂರು ಸಹಕಾರಿ ಸಂಘದಲ್ಲಿ ಬೆಳಿಗ್ಗೆ 8 ರಿಂದ ಪಡಿತರ ವಿತರಣೆ
ಸವಣೂರು ಸಹಕಾರಿ ಸಂಘದಲ್ಲಿ ಬೆಳಿಗ್ಗೆ 8 ರಿಂದ ಪಡಿತರವನ್ನು ವಿತರಣೆ ಮಾಡುತ್ತೇವೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತೇವೆ ಎಂದು ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು ಹೇಳಿದರು.

ಬೆಳಿಗ್ಗೆ 5 ಗಂಟೆಗೆ ಕ್ಯೂ ನಿಲ್ಲಲು ಬರಬೇಡಿ
ಪಡಿತರ ವ್ಯವಸ್ಥೆಯನ್ನು ಪಡೆಯಲು ಸವಣೂರಿನಲ್ಲಿ ಬೆಳಿಗ್ಗೆ 5 ಗಂಟೆಗೆ ಬಂದು ಕ್ಯೂ ನಿಲ್ಲುವ ಗ್ರಾಹಕರು, ಇನ್ನೂ ಮುಂದೆ ಬೆಳಿಗ್ಗೆ 8 ಗಂಟೆಯ ನಂತರ ಬನ್ನಿ, ಪ್ರತಿ ದಿನ ನೂರು ಮಂದಿಗೆ ಟೋಕನ್ ನೀಡುತ್ತೇವೆ, ಎಲ್ಲಾ ಪಡಿತರ ಫಲಾನುಭವಿಗಳಿಗೆ ಅಕ್ಕಿ ದೊರೆಯುತ್ತದೆ, ಯಾರು ಕೂಡ ಅವಸರ ಪಡಬೇಡಿ, ಸಾವಕಾಶವಾಗಿ ಬನ್ನಿ ಎಂದು ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ರವರು ಈ ಸಂದರ್ಭದಲ್ಲಿ ಹೇಳಿದರು.

ಗ್ರಾಮ ಪಂಚಾಯತ್ ಅಭಿಯಾನದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಕೆಡೆಂಜಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರುಗಳಾದ ತೀರ್ಥರಾಮ ಕೆಡೆಂಜಿ, ಅಬ್ದುಲ್ ರಜಾಕ್ ಕೆನರಾ, ರಫೀಕ್ ಎಂ, ಎ, ಮಾಂತೂರು, ಸತೀಶ್ ಅಂಗಡಿಮೂಲೆ, ಯಶೋಧಾ ನೂಜಾಜೆ, ಜಯಶ್ರೀ ಕುಚ್ಚೆಜಾಲು, ಬಾಬು ಜರಿನಾರು, ಲೆಕ್ಕ ಸಹಾಯಕ ಮನ್ನಥ, ಸಿಬ್ಬಂದಿ ಪ್ರಮೋದ್ ಕುಮಾರ್ ರೈ ಸಹಿತ ಅನೇಕ ಮಂದಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.