ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂಟ್ವಾಳ ಪುರಸಭೆ ಪೌರಕಾರ್ಮಿಕರಿಂದ ಮುಖ್ಯಾಧಿಕಾರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಪೌರ ಕಾರ್ಮಿಕರ ಹುದ್ದೆಗಳ ನೇರ ನೇಮಕಾತಿಗೆ ಸರಕಾರ ಚಾಲನೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ರಾಜ್ಯ ವ್ಯಾಪಿ ಕಪ್ಪು ಪಟ್ಟಿ ಧರಿಸಿ ತಮ್ಮ ಕರ್ತವ್ಯ ನಿರ್ವಹಿಸುವ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಜೂ. 11ರಂದು ಬೆಳಿಗ್ಗೆ ಬಂಟ್ವಾಳ ಪುರಸಭೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಬಳಿಕ ಪುರಸಭಾ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

 

ಬೆಂಗಳೂರು ರಾಮನಗರದಲ್ಲಿ ಮ್ಯಾನ್ ಹೋಲ್ ಕಾಮಗಾರಿ ನಿರ್ವಹಿಸುತ್ತಿದ್ದ ಮೂವರು ಪೌರಕಾರ್ಮಿಕರು ಸಾವನ್ನಪ್ಪಿರುವ ದುರ್ಘಟನೆ ಜರುಗಿದೆ. ರಾಜ್ಯಾದ್ಯಂತ ಈ ರೀತಿಯ ಘಟನೆಗಳು ನಡೆಯುತ್ತಿದ್ದರೂ ಆಡಳಿತ ವರ್ಗ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಬೇಜವಾಬ್ದಾರಿತನ ತೋರಿರುವುದು ಕಂಡು ಬಂದಿರುತ್ತದೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಪೌರಕಾರ್ಮಿಕರು ಮ್ಯಾನ್ ಹೋಲ್ ನಲ್ಲಿ ಜೀವ ಕಳೆದುಕೊಂಡ 85 ಪ್ರಕರಣಗಳು ನಡೆದಿವೆ. ಪ್ರತಿ ಸಾರಿ ಘಟನೆ ನಡೆದಾಗ ಒಂದಿಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳಲಾಗುತ್ತದೆ. ಪರಿಣಾಮ ಪದೇ ಪದೇ ಈ ಮಾದರಿಯ ಪ್ರಕರಣಗಳು ಘಟಿಸುತ್ತವೆ. ಮಂಡ್ಯದಲ್ಲೂ ಇದೇ ಘಟನೆಯಿಂದ ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎಲ್ಲಾ ಘಟನೆ ಪೌರಕಾರ್ಮಿಕರ ಜೀವಕ್ಕೆ ಯಾವುದೆ ಬೆಲೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಮ್ಯಾನ್ ಹೋಲ್ನಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬಗಳಿಗೆ ಅವರು ಅನುಕಂಪದ ನೌಕರಿ ನೀಡಬೇಕು. ಬಯಸಿದ ಸ್ಥಳದಲ್ಲಿ ರಾಜ್ಯದಲ್ಲಿ ಅತ್ಯಂತ ಅಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬಾಕಿ ಉಳಿದಿರುವ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಚಾಲನೆ ನೀಡಬೇಕು. ಇದಲ್ಲದೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯಗತ್ಯ ಸೇವೆ ನಿರ್ವಹಿಸುವ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ವಾಟರ್ ಮೆನ್, ಡಾಟ ಆಪರೇಟರ್ಗಳಿಗೆ ಹಲವೆಡೆ ಸಕಾಲಕ್ಕೆ ಸೂಕ್ತ ವೇತನವನ್ನೇ ನೀಡುತ್ತಿಲ್ಲ. ಅತ್ಯಂತ ಅಭದ್ರತೆಯಲ್ಲಿರುವ ಈ ನೌಕರರಿಗೆ ತಕ್ಷಣ ವೇತನ ಬಿಡುಗಡೆ ಮಾಡುವ ಜತೆಗೆ ಗುತ್ತಿಗೆ ಬದಲಿಗೆ ನೇರ ವೇತನಕ್ಕೆ ಒಳಪಡಿಸುವಂತೆ ಮತ್ತು ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂ ಸರಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಲಾಯಿತು. ಬಳಿಕ ಪುರಸಭಾ ಚೀಫ್ ಆಫೀಸರ್ ಲೀನಾ ಬ್ರಿಟ್ಟೋ‌ರವರಿಗೆ ಮನವಿ ಸಲ್ಲಿಸಲಾಯಿತು. ಈ‌ ಸಂದರ್ಭದಲ್ಲಿ ನವೀನ್ ಪೂಜಾರಿ ಪಡೀಲು, ವಿನೋದ್, ಸುಭಾಷ್, ಬಶೀರ್, ತಿರುಮಲೇಶ್ವರ, ಸಂತೋಷ್, ಖಾಸಿಂ, ಸುಹಾಸ್, ಶಿವ, ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.