HomePage_Banner
HomePage_Banner

ಹಡೀಲು ಭೂಮಿಯಲ್ಲಿ ಭತ್ತದ ಬೇಸಾಯಕ್ಕೆ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ’ಗದ್ದೆಗೆ ಇಳಿಯೋಣ ಬನ್ನಿ’ ಸಮಾಜ ಪರಿವರ್ತನಾ ಆಂದೋಲನಕ್ಕೆ ಚಾಲನೆ

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ವಯಂ ಸೇವಕರ ಸಹಯೋಗದೊಂದಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ತಾಲೂಕಿನಲ್ಲಿ ಹಡೀಲು ಭೂಮಿಗಳಲ್ಲಿ ಭತ್ತದ ಬೇಸಾಯ ಮಾಡುವ ಸಂಬಂಧ ತಾಲೂಕಿನ ವಿವಿಧ ದೇವಸ್ಥಾನಗಳ ಆಡಳಿತ ಸಮಿತಿ ಸದಸ್ಯರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆರಂಭಿಸಿರುವ ಗದ್ದೆಗೆ ಇಳಿಯೋಣ ಬನ್ನಿ’ ಎಂಬ ಸಮಾಜ ಪರಿವರ್ತನಾ ಆಂದೋಲನಕ್ಕೆ ಜೂ.11 ದೇವಳ ಸಭಾಭವನದಲ್ಲಿ ಒಡಿಯೂರು ಶ್ರೀಗಳ ಮೂಲಕ ಚಾಲನೆ ನೀಡಲಾಯಿತು.

ರಾಷ್ಟ್ರದ ಉನ್ನತಿ ಕೃಷಿಯಲ್ಲಿ ಅಡಗಿದೆ: ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕೃಷಿ ಮತ್ತು ಋಷಿ ಎರಡು ಜೊತೆ ಜೊತೆಗೆ ಸಾಗಿದಾಗ ಆದರ್ಶವಾದ ರಾಷ್ಟ್ರ ನಿರ್ಮಾಣ ಸಾಧ್ಯ. ರಾಷ್ಟ್ರದ ಉನ್ನತಿಯೂ ಕೃಷಿಯಲ್ಲಿ ಅಡಗಿದೆ. ಕೃಷಿಯನ್ನು ವ್ಯಾಪಾರದ ದೃಷ್ಟಿಯಿಂದ ಮಾತ್ರ ನೋಡದೇ ಕೃಷಿ ಮತ್ತು ವ್ಯಾಪಾರದ ಒಟ್ಟು ಅಭ್ಯುದಯದ ಕಲ್ಪನೆ ಇಟ್ಟುಕೊಂಡು ಮುಂದೆ ಹೋಗಬೇಕು ಎಂದು ನುಡಿದರು. ಈಗಾಗಲೇ ನಾವು ಬಂಟ್ವಾಳ ತಾಲೂಕಿನ ೨೨ ಗ್ರಾಮಗಳಿಗೆ ಸಂಪರ್ಕ ಮಾಡಿ ಹಡೀಲು ಭೂಮಿಯಲ್ಲಿ ಕೃಷಿ ಮಾಡಲು ಪ್ರೋತ್ಸಾಹ ನೀಡಿzವೆ. ಕೆಲವೊಂದು ಕಡೆಗಳಲ್ಲಿ ಪ್ರಾಣಿ ಪಕ್ಷಿಗಳ ತೊಂದರೆ, ಏಕಾಏಕಿ ಕೃಷಿ ಮಾಡಲು ಕಷ್ಟ ಎಂಬ ಮಾತು ಬಂದಿದೆ. ನಮ್ಮಲ್ಲಿರುವ ಉದಾಸೀನತೆ ಬಿಟ್ಟರೆ ಎಲ್ಲಾ ಕಾರ್ಯ ಆಗಲಿದೆ. ಇದರ ಜೊತೆಗೆ ಕೃಷಿ ಮಾಡಬೇಕೆಂದು ಸಂಕಲ್ಪ ಮಾಡಬೇಕು, ಸುಮ್ಮನೆ ಘೋಷಣೆ ಮಾಡಿದರೆ ಸಾಲದು, ಮಾಡಿ ತೋರಿಸಬೇಕು. ಇದಕ್ಕೆ ಪ್ರೋತ್ಸಾಹ ಪ್ರೇರಣೆ ಕೊಡುವ ಕೆಲಸ ಆಗಬೇಕು ಮತ್ತು ಭಾರತೀಯ ಸಂಸ್ಕೃತಿ ಮತ್ತೊಮ್ಮೆ ಬೆಳೆಸಿಕೊಳ್ಳಲು ಇದು ಅಗತ್ಯ ಎಂದು ಒಡಿಯೂರು ಸ್ವಾಮೀಜಿ ಹೇಳಿದರು.

ಭತ್ತ ಬೆಳೆಯೋಣ ಬದುಕು ಕಟ್ಟೋಣ: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವಳದ ದೇವರ ಮಾರುಗದ್ದೆ ಸೇರಿದಂತೆ ವಿವಿಧ ದೇವಳದ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಸ್ಥಳೀಯರ ಹಾಗೂ ಕೃಷಿ ಂಬಂಧಿತ ಇಲಾಖೆಗಳ ಸಹಕಾರದೊಂದಿಗೆ ಹಡೀಲು ಬಿದ್ದ ಗದ್ದೆಗಳನ್ನು ಗುರುತಿಸಿ ಅಲ್ಲಿ ಭತ್ತದ ಬೆಳೆ ಬೆಳೆಸುವ ಬಗ್ಗೆ ಚಿಂತನೆ ನಡೆಸುವುದು ಉತ್ತಮ ವಿಚಾರವಾಗಿದೆ. ಇದರ ಜೊತೆಗೆ ಹಲವು ಕಡೆ ಖಾಸಗಿಯವರಲ್ಲಿ ಹಡೀಲು ಭೂಮಿ ಇದೆ. ಅವರಲ್ಲಿ ಮಾತುಕತೆ ನಡೆಸಿದಾಗ ಅವರೇ ಭತ್ತದ ಕೃಷಿ ಮಾಡುತ್ತೇವೆ ಎಂದಾದರೆ ಅದಕ್ಕೆ ಮೊದಲ ಆದ್ಯತೆ ಕೊಡಬೇಕು. ಅವರಿಗೆ ನಮ್ಮಿಂದ ಏನು ಸಹಕಾರ ಬೇಕೋ ಅದನ್ನು ಕೊಡುವಂತಹದ್ದು ಆಗಬೇಕು. ನಮ್ಮಲ್ಲಿನ ಸ್ವಸಹಾಯ ಸಂಘ, ಸ್ವಯಂ ಸೇವಕರು, ಸಂಘ ಸಂಸ್ಥೆಗಳು ಸೇರಿಕೊಂಡು ಭತ್ತದ ಕೃಷಿ ಮಾಡುವವರಿಗೆ ತಮ್ಮಿಂದಾದ ಸಹಾಯ ಮಾಡುವಂತಾಗಬೇಕು. ದೇವಸ್ಥಾನ ಇವೆಲ್ಲದರ ನೇತೃತ್ವ ವಹಿಸಬೇಕು. ಸಹಕಾರಿ ಸಂಘಗಳ ಮೂಲಕವೂ ಪ್ರೇರಣೆ ಸಿಗಬೇಕು. ಇದರಿಂದ ಪರಿಸರ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವಾಗಲಿದೆ. ಅಲ್ಲದೆ ಭಾವನಾತ್ಮಕ ಸಂಬಂಧಗಳ ಬೆಸುಗೆಯಾಗಲಿದೆ. ಒಟ್ಟು ಇದು ಸಮಾಜದ ಕಾರ್ಯ ಆಗಬೇಕು. ರಾಜ್ಯದಲ್ಲಿ ಇದು ಮಾದರಿ ಕಾರ್ಯಕ್ರಮವಾಗಿ ‘ಭತ್ತ ಬೆಳೆಯೋಣ ಬದುಕು ಕಟ್ಟೋಣ’ ಎಂಬ ಸಂದೇಶ ರವಾನೆಯಾಗಲಿದೆ ಎಂದರು.

ಗದ್ದೆಗೆ ಇಳಿಯೋಣ ಬನ್ನಿ ವಾಟ್ಸಪ್ ಗ್ರೂಪ್: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅವರು ಮಾತನಾಡಿ, ದೇವಸ್ಥಾನದ ಹಡೀಲು ಭೂಮಿಯಲ್ಲೂ ಭತ್ತದ ಬೇಸಾಯ ಮಾಡಲಿzವೆ. ಅದರ ಜೊತೆಗೆ ರೈಲ್ವೇ ನಿಲ್ದಾಣದ ಬಳಿಯ ಶ್ರೀನಿವಾಸ ಪೈ ಅವರಿಗೆ ಸಂಬಂಧಿತ ಹಡೀಲು ಬಿದ್ದ ಭೂಮಿಯನ್ನು ದೇವಳದ ವತಿಯಿಂದ ಭತ್ತದ ಬೇಸಾಯಕ್ಕೆ ಸಿದ್ಧತೆ ಮಾಡಲಿzವೆ ಎಂದರು. ಭತ್ತದ ಕೃಷಿ ಮಾಡ ಬಯಸುವವರಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ’ಗದ್ದೆಗೆ ಇಳಿಯೋಣ ಬನ್ನಿ’ ಎಂಬ ವಾಟ್ಸಪ್ ಗ್ರೂಪ್ ಮಾಡಿ ಅದರ ಮೂಲಕ ಕೃಷಿ ಇಲಾಖೆಯಲ್ಲಿನ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು, ಮುಂದೆ ಭತ್ತದ ಕೃಷಿ ಸಂದರ್ಭ ಬಿತ್ತನೆ ಬೀಜಗಳನ್ನು ಎಲ್ಲಾ ಕಡೆಗೆ ಕೊಂಡೊಯ್ಯುವ ಕಾರ್ಯಕ್ರಮ ಹಾಕಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ವಿವಿಧ ದೇವಾಲಯದ ವ್ಯಾಪ್ತಿಗಳ ಪ್ರದೇಶಗಳಲ್ಲಿ ಚಿಂತನಾ ಸಭೆ ನಡೆಸಲು ತೀರ್ಮಾನಿಸಿ ದಿನಾಂಕ ನಿಗದಿಗೊಳಿಸಲಾಯಿತು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಸಭೆಯ ದಿನಾಂಕಗಳ ಪಟ್ಟಿ ಮಾಡಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರು ಕೃಷಿ ಮತ್ತು ಧಾರ್ಮಿಕ ವಿಚಾರಕ್ಕೆ ಸಂಬಂಧಿತ ಮಾಹಿತಿ ನೀಡಿದರು. ಸೇವಾ ಭಾರತಿಯ ರವೀಂದ್ರ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಕೃಷಿಕ ಸಮಾಜದ ವಿಜಯ ಕುಮಾರ್ ಕೋರಂಗ, ಸಚಿನ್ ರೈ ಪಾಪೆಮಜಲು, ಸಹಕಾರಿ ಸಂಘದ ಪ್ರಮುಖರು ವಿವಿಧ ಸಲಹೆ ಸೂಚನೆ ನೀಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕೃಷಿ ನಿರ್ದೇಶಕ ಉಮೇಶ್, ಶಾಸಕರ ವಾರ್‌ರೂಮ್ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ.ಜಗನ್ನಿವಾಸ ರಾವ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮ್‌ದಾಸ್ ಗೌಡ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ ಸಹಕಾರಿ ಸಂಘದ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು. 

ಸಹಕಾರಿ ರೂಪದಲ್ಲಿ ನಡೆಯುವ ಯೋಜನೆ
ಹಡೀಲು ಬಿದ್ದ ಗದ್ದೆಗಳಲ್ಲಿ ಬೇಸಾಯಕ್ಕೆ ದೇವಸ್ಥಾನಗಳ ಮೂಲಕ ಚಾಲನೆ ನೀಡುವುದು. ದೇವಸ್ಥಾನದ ಕಾರ್ಯಕರ್ತರು ಹಡೀಲು ಬಿದ್ದ ಗದ್ದೆಗಳ ಮಾಲಕರ ಅನುಮತಿಯೊಂದಿಗೆ ಸಹಕಾರಿ ರೂಪದಲ್ಲಿ ಅದಕ್ಕೆ ಬೇಕಾಗುವ ಖರ್ಚುಗಳನ್ನು ವಹಿಸಿಕೊಂಡು ಮಾಡುವ ಯೋಜನೆ ಇದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪೂರೈಕೆ ಮಾಡುವಷ್ಟು ಕುಚಲಕ್ಕಿ ಉತ್ಪಾದನೆ ಆಗುತ್ತಿಲ್ಲ. ಇದನ್ನು ಮನಗಂಡು ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೊಸ ಅಕ್ಕಿ ಊಟ ಅನ್ನುವಂತಹದ್ದು ಇತ್ತೀಚೆಗೆ ಬಹಳ ಕಡಿಮೆ ಆಗುತ್ತಿದೆ. ಪುತ್ತೂರಿನಲ್ಲಿ ವಾಣಿಜ್ಯ ಬೆಳೆ ಹೆಚ್ಚಾಗಿ ಬೇಸಾಯ ಪದ್ಧತಿ ಕಡಿಮೆ ಆಗಿದೆ. ಇದರ ಜೊತೆಗೆ ಅಂತರ್‌ಜಲ ಉಳಿಸಲು ಬೇಸಾಯ ಪದ್ಧತಿ ಹೆಚ್ಚಿಸುವ ಯೋಜನೆ ಶಾಸಕರ ಪ್ರೇರಣೆ ಮೇಲೆ ನಡೆಯುತ್ತಿದೆ. ಪುತ್ತೂರು ದೇವಳದ ಪರಿಸರದಲ್ಲಿ ಆದಷ್ಟು ಹಡೀಲು ಬಿದ್ದ ಭೂಮಿಯನ್ನು ಗುರುತಿಸಿ ಗದ್ದೆ ಬೇಸಾಯಕ್ಕೆ ಮುಂದೆ ಹೋಗಿವೆ. ಬೇಸಾಯದಿಂದ ಬಂದ ಇಳುವರಿಯಲ್ಲಿ ದೇವಳಕ್ಕೂ ಅಕ್ಕಿ ತರುವಂತಹ ಯೋಜನೆ ರೂಪಿಸಲಾಗಿದೆ.
ಮುಳಿಯ ಕೇಶವ ಪ್ರಸಾದ್, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ಆಹಾರದಲ್ಲಿ ಸ್ವಾವಲಂಬಿಯಾಗಬೇಕೆಂಬ ಗುರಿ:
ಆಧುನಿಕತೆ ಹೆಚ್ಚಾದಂತೆ ಕೃಷಿ ಚಟುವಟಿಕೆ, ಗದ್ದೆ ಬೇಸಾಯ ಕಡಿಮೆ ಆಗಿ ಅಂತರ್ಜಲ ಬಿತ್ತಿ ಹೋಗಿದೆ. ಅಂತರ್‌ಜಲ ವೃದ್ಧಿಗೆ ಭತ್ತದ ಗದ್ದೆ ಮಾಡಬೇಕು. ಇದರ ಜೊತೆಗೆ ಆಹಾರದಲ್ಲಿ ಸ್ವಾವಲಂಬಿಯಾಗಬೇಕು. ಕುಚಲಕ್ಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಗಬೇಕು ಎಂಬುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಹಡೀಲು ಬಿದ್ದ ಭೂಮಿಯನ್ನು ಬೇಸಾಯ ಮಾಡುವ ಮೂಲಕ ಯುವ ಸಮುದಾಯವನ್ನು ಜಾಗೃತಗೊಳಿಸುವ ಕಾರ್ಯ ನಡೆಸಲಿzವೆ. ಸಂಘ ಪರಿವಾರ, ಇತರ ಸಾಮಾಜಿಕ ಸಂಘಟನೆಗಳು, ದೇವಸ್ಥಾನಗಳು, ಇಲಾಖೆಗಳ ಸಹಕಾರದೊಂದಿಗೆ ಎಲ್ಲೆಲ್ಲಿ ಹಡೀಲು ಬಿದ್ದ ಭೂಮಿ ಇದೆಯೋ ಅಲ್ಲೆಲ್ಲಾ ಅದರ ಮಾಲಕರಿಗೆ ಪ್ರೇರಣೆ ಕೊಟ್ಟು ಅವರೇ ಸ್ವ ಇಚ್ಛೆಯಿಂದ ಇತರರ ಸಹಕಾರ ಪಡೆದುಕೊಂಡು ಬೇಸಾಯ ಮಾಡಬೇಕು. ಅವರಿಗೆ ಆಗುವುದಿಲ್ಲ ಎಂದಾಗ ಅವರು ಒಪ್ಪಿಗೆ ಕೊಟ್ಟರೆ ಒಂದಷ್ಟು ಗದ್ದೆಗಳನ್ನು ದೇವಸ್ಥಾನದ ಮುತುವರ್ಜಿಯಿಂದ ನಡೆಸುವುದು ಮತ್ತು ಸಹಕಾರ ಸಂಘಗಳ ಸಹಕಾರ ಪಡೆದು ಅಲ್ಲಿ ಬೇಸಾಯ ಮಾಡುವ ಯೋಜನೆ ಹಾಕಿಕೊಂಡಿzವೆ.
ಸಂಜೀವ ಮಠಂದೂರು, ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.