HomePage_Banner
HomePage_Banner

ಭತ್ತ ಬೆಳೆಯೋಣ ಬನ್ನಿ…ಆಟದ ಮೈದಾನವೀಗ ಅನ್ನದ ಬಟ್ಟಲು ಕುಂಬ್ರ ಕೆಪಿಎಸ್ ಶಾಲಾ ವಠಾರದಲ್ಲೊಂದು ವಿನೂತನ ಪ್ರಯೋಗ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ಶಾಸಕರಿಂದ ಚಾಲನೆ – 1.5ಎಕರೆಯಲ್ಲಿ ಗದ್ದೆ ಬೇಸಾಯ – ಎಂ೪ ಭತ್ತದ ತಳಿ ನಾಟಿ

ಪುತ್ತೂರು: ಭತ್ತಕ್ಕೆ ಮನುಷ್ಯನ ಬದುಕಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. ತುಳುನಾಡಲ್ಲಿ ಭತ್ತ ಬೇಸಾಯ ಬಹಳ ಹಿಂದಿನ ಕೃಷಿಪದ್ಧತಿಯಾಗಿದೆ. ಸಂಸ್ಕಾರಯುತ ಬದುಕಿಗೆ ಕೃಷಿ ಮುನ್ನುಡಿಯಾಗಿದೆ. ಭತ್ತ ಕೃಷಿಯಿಂದ ನೆಲ,ಜಲದ ರಕ್ಷಣೆಯೊಂದಿಗೆ ಸಂಸ್ಕಾರಯುತ ಜೀವನ ನಡೆಸಲು ಕೂಡ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಶಿಸಿ ಹೋಗುತ್ತಿರುವ ಭತ್ತ ಕೃಷಿಯ ಬಗ್ಗೆ ಯುವ ಜನಾಂಗ ಒಲವು ತೋರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಶಾಲಾ ಆಟದ ಮೈದಾನವನ್ನೇ ಗದ್ದೆಯನ್ನಾಗಿ ಪರಿವರ್ತಿಸಿ ಅಲ್ಲಿ ಭತ್ತ ಬೆಳೆಯುವ ಮೂಲಕ ವಿದ್ಯಾರ್ಥಿಗಳಿಗೂ ಭತ್ತ ಕೃಷಿಯ ಬಗ್ಗೆ ಮಾಹಿತಿ ತಿಳಿಸುವ ಕೆಲಸವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ ಇದರ ಆಡಳಿತ ಮಂಡಳಿ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಬಹಳಷ್ಟು ಸಂಘ ಸಂಸ್ಥೆಗಳು ಬೆಂಬಲ ನೀಡಿರುವುದು ಖುಷಿ ತಂದಿದೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಅವರು ಭತ್ತಬೆಳೆಯೋಣ ಬನ್ನಿ ಎಂಬ ಧ್ಯೇಯದೊಂದಿಗೆ ಈಗಾಗಲೇ ತಾಲೂಕಿನಾದ್ಯಂತ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಕೃಷಿ ಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಅದೇ ರೀತಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಟದ ಮೈದಾನವನ್ನೇ ಗದ್ದೆಯನ್ನಾಗಿ ಪರಿವರ್ತಿಸಿ ಭತ್ತ ಬೇಸಾಯ ಮಾಡುವ ವಿನೂತನ ಪ್ರಯೋಗಕ್ಕೆ ಜೂ.೧೨ ರಂದು ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ
ಪದವಿಪೂರ್ವ ಕಾಲೇಜಿನ ಈ ಆಟದ ಮೈದಾನದಲ್ಲಿ ಭತ್ತ ನಾಟಿ ಮಾಡುವ ಕೆಲಸವು ಇಲ್ಲಿನ ವಿದ್ಯಾರ್ಥಿಗಳಿಗೆ ಭತ್ತ ಕೃಷಿಯ ಬಗ್ಗೆ ಪ್ರೇರಣೆ ನೀಡಲಿದೆ ಎಂದ ಶಾಸಕರು ವಿದ್ಯಾರ್ಥಿಗಳು ಪ್ರಾತ್ಯಕ್ಷಿತೆಯ ಮುಖಾಂತರ ನೋಡುವ ಕೆಲಸ ಇಲ್ಲಿ ಆಗಲಿದೆ. ಇಂತಹ ಕೆಲಸ ಶಾಲೆಗಳಲ್ಲಿ ಆದಾಗ ವಿದ್ಯಾರ್ಥಿಗಳು ನಮ್ಮ ಪಾರಂಪರಿಕ ವಿಷಯಗಳನ್ನು ತಿಳಿದುಕೊಂಡು ಜಗತ್ತಿಗೆ ಪರಿಚಯಿಸುವಂತಹ ಕೆಲಸವನ್ನು ಮಾಡಲಿದ್ದಾರೆ ಎಂದರು. ಭಾರತಕ್ಕೆ ಆಧ್ಯಾತ್ಮಿಕ ದೇಶ ಎನ್ನುತ್ತಾರೆ. ಈ ಆಧ್ಯಾತ್ಮಿಕತೆ ಕೃಷಿಯಿಂದಲೇ ಬಂದಿದೆ. ಇದನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಈ ಸಂದರ್ಭದಲ್ಲಿ ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು, ಶಾಸಕ ಸಂಜೀವ ಮಠಂದೂರುರವರ ನೇತೃತ್ವದಲ್ಲಿ ಭತ್ತ ಬೆಳೆಯೋಣ ಬನ್ನಿ ಆಂದೋಲನವನ್ನು ಆರಂಭಿಸಲಾಗಿದ್ದು ಇದಕ್ಕೆ ಪುತ್ತೂರಲ್ಲಿ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಕುಂಬ್ರ ಶಾಲಾ ಮೈದಾನದಲ್ಲಿ ಶಾಲೆಯಲ್ಲಿ ಭತ್ತ ಬೆಳೆಯೋಣ ಎಂಬ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯ ಮಾಡಬೇಕಾದ ಅನಿವಾರ‍್ಯತೆ ಇದೆ. ಇದಕ್ಕೆ ನಾವೆಲ್ಲರೂ ಪ್ರಯತ್ನ ಪಡಬೇಕು. ಭತ್ತದ ಕೃಷಿಯಿಂದ ಹಲವು ಬಗೆಯ ಪ್ರಯೋಜನಗಳು ರೈತರಿಗೆ ಇದೆ ಎಂದು ಹೇಳಿ ಶುಭ ಹಾರೈಸಿದರು.

ಕುಂಬ್ರ ಜ್ಯೂನಿಯಾರ್ ಕಾಲೇಜಿನ ಮಾಜಿ ಕಾರ್ಯಾಧ್ಯಕ್ಷರಾದ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಕ್ರೀಡಾಂಗಣದಲ್ಲಿ ಈ ವರ್ಷ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ಶಾಲೆ ಕೂಡ ಇಲ್ಲದೇ ಇರುವಾಗ ಕ್ರೀಡಾಂಗಣವನ್ನು ಭತ್ತದ ಬೇಸಾಯಕ್ಕೆ ಬಳಸಿಕೊಂಡಿರುವುದು ಶ್ಲಾಘನೀಯ. ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಶಾಲೆಯಲ್ಲಿ ಭತ್ತಬೆಳೆಯೋಣ ಎಂಬ ಆಂದೋಲನದ ಮೂಲಕ ನಮ್ಮ ಜನಪದೀಯ ಸಂಸ್ಕೃತಿಯನ್ನು ಉಳಿಸಿ ವಿದ್ಯಾರ್ಥಿಗಳಿಗೂ ತಿಳಿಸುವ ಕೆಲಸಕ್ಕೆ ಕೈ ಹಾಕಿರುವುದು ಉತ್ತಮ ಕೆಲಸವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್, ಕೃಷಿ ಯೋಜನಾಧಿಕಾರಿ ಉಮೇಶ್ ಪೂಜಾರಿ, ಕುಂಬ್ರ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ರಾಜೇಶ್ ರೈ ಪರ್ಪುಂಜ, ಸುಧಾಕರ ರೈ ಕುಂಬ್ರ, ನಾರಾಯಣ ಪೂಜಾರಿ ಕುರಿಕ್ಕಾರ, ಸುಧಾಕರ ಆಳ್ವ ಕಲ್ಲಡ್ಕ, , ಸುಷ್ಮಾ ಸತೀಶ್ ಕೋಡಿಬೈಲು, ಹರೀಶ್ ಬಿಜತ್ರೆ, ಸೀತಾರಾಮ ಗೌಡ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ರೇಖಾ, ಲತೀಪ್, ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೂಪರ್‌ವೈಸರ್ ಶೃತಿ, ಸೇವಾ ಪ್ರತಿನಿಧಿ ಆನಂದ ರೈ, ಶಶಿಕಲಾ, ಕುಂಬ್ರದ ಉದ್ಯಮಿ ಮೋಹನ್‌ದಾಸ್ ರೈ ಕುಂಬ್ರ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಪುಜಾರಿ ಬಡಕ್ಕೋಡಿ, ಕುಂಬ್ರ ಕೆಪಿಎಸ್ ಪ್ರಾಂಶುಪಾಲ ಅಶೋಕ್, ಪ್ರಾಥಮಿಕ ವಿಭಾಗದ ಮುಖ್ಯಗುರು ನೀನಾ ಕುವೆಲ್ಲೋ, ಉಪನ್ಯಾಸಕರಾದ ಪುಷ್ಪರಾಜ್, ಪ್ರಶಾಂತ್,ಶಿಕ್ಷಕಿಯರಾದ ಪ್ರಶಾಂತಿ, ಜೂಲಿಯಾನ ಮೋರಾಸ್, ದೇವಕಿ, ಗ್ರಾಮಾಭಿವೃದ್ಧಿ ಒಕ್ಕೂಟದ ವಲಯ ಅಧ್ಯಕ್ಷ ರಾಧಾಕೃಷ್ಣ ರೈ ತುಂಡುಬೈಲು, ವರ್ತಕರ ಸಂಘದ ಅಧ್ಯಕ್ಷ ಎಸ್. ಮಾಧವ ರೈ ಕುಂಬ್ರ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಕಾರ್ಪಾಡಿ ಶ್ರೀಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಆಟದ ಮೈದಾನಕ್ಕೆ ಮಣ್ಣು ಹಾಕಿ ದೊಡ್ಡ ಮಟ್ಟದ ಮೈದಾನವನ್ನಾಗಿ ಮಾಡಲಾಗಿದೆ. ಶಾಸಕ ಸಂಜೀವ ಮಠಂದೂರುರವರ ನೇತೃತ್ವ, ಮಾರ್ಗದರ್ಶನದಲ್ಲಿ ಶಾಲಾ ಸಮಿತಿಯವರು ಭತ್ತದ ಕೃಷಿ ಮಾಡುವ ಬಗ್ಗೆ ಯೋಚನೆ ಮಾಡಿದ್ದು ಇದಕ್ಕೆ ಕುಂಬ್ರದ ಎಲ್ಲಾ ಸಂಘ ಸಂಸ್ಥೆಗಳು ಅದರೊಂದಿಗೆ ಗ್ರಾಮ ಪಂಚಾಯತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ನೀಡಿವೆ. ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು, ಯುವ ಜನಾಂಗಕ್ಕೆ ಭತ್ತದ ಕೃಷಿಯ ಬಗ್ಗೆ ಅನುಭವ ಇಲ್ಲ. ಇದು ಎಲ್ಲರಿಗೂ ಪ್ರೇರಣೆಯಾಗಬೇಕು, ಇದೊಂದು ಭತ್ತ ಬೆಳೆಯುವ ಹಬ್ಬವಾಗಬೇಕು ಎಂಬ ನಿಟ್ಟಿನಲ್ಲಿ ಇದನ್ನು ಆರಂಭಿಸಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ನೀಡಬೇಕು ಎಂಬುದು ನನ್ನ ಮನವಿಯಾಗಿದೆ.
ನಿತೀಶ್ ಕುಮಾರ್ ಶಾಂತಿವನ, ಕಾರ್ಯಾಧ್ಯಕ್ಷರು, ಕುಂಬ್ರ ಕೆಪಿಎಸ್ ಅಭಿವೃದ್ಧಿ ಸಮಿತಿ

ರಾಜ್ಯದಾದ್ಯಂತ ಸುಮಾರು ೩೦ ಸಾವಿರ ಎಕರೆ ಭೂಮಿಯಲ್ಲಿ ಭತ್ತ ಕೃಷಿಯನ್ನು ಯೋಜನೆಯ ಮುಖಾಂತರ ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಯಂತ್ರದ ಮೂಲಕ ನಾಟಿ ಮಾಡಲಾಗುತ್ತಿದ್ದು ಇದಕ್ಕೆ ಯಂತ್ರಶ್ರೀ ಕಾರ್ಯಕ್ರಮದ ಭತ್ತ ಬೇಸಾಯ ಮಾಡಲಾಗುತ್ತಿದೆ. ತಾಲೂಕಿನಲ್ಲಿ ೩೦೦ ಎಕರೆ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗುತ್ತಿದೆ. ಕುಂಬ್ರ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಎಂ.೪ ಭತ್ತದ ತಳಿಯ ಬೇಸಾಯ ಮಾಡಲಾಗುತ್ತಿದೆ. ಯೋಜನೆಯ ಮುಖಾಂತರ ಟ್ರ್ಯಾಂಕ್ಟರ್ ನೀಡಿದ್ದೇವೆ. ೧.೫ ಎಕರೆಯಲ್ಲಿ ಕೈ ನಾಟಿ ಮತ್ತು ಯಂತ್ರದ ಮುಖಾಂತರ ನಾಟಿ ಮಾಡಲಾಗುತ್ತಿದೆ.
ಉಮೇಶ್ ಪೂಜಾರಿ, ಕೃಷಿ ಯೋಜನಾಧಿಕಾರಿ ಧ.ಗ್ರಾ.ಯೋ.ಪುತ್ತೂರು

ಸಂಘ ಸಂಸ್ಥೆಗಳ ಸಹಕಾರ
ಶಾಸಕ ಸಂಜೀವ ಮಠಂದೂರುರವರ ಮಾರ್ಗದರ್ಶನದಲ್ಲಿ ಕುಂಬ್ರ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಭತ್ತ ಬೇಸಾಯ ಮಾಡುವ ಕಾರ್ಯಕ್ಕೆ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿಯೊಂದಿಗೆ ಶಾಲಾ ಶಿಕ್ಷಕರು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಳಮೊಗ್ರು ಗ್ರಾಪಂ, ವರ್ತಕರ ಸಂಘ ಕುಂಬ್ರ, ವಿಶ್ವ ಯುವಕ ಮಂಡಲ ಕುಂಬ್ರ, ಶ್ರೀರಾಮ ಭಜನಾ ಮಂದಿರ ಕುಂಬ್ರ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಲ್ಲದೆ ಊರಿನ ನಾಗರೀಕರು ಸಹಕಾರ ನೀಡುತ್ತಿದ್ದಾರೆ.

1.5 ಎಕರೆ ಜಾಗದಲ್ಲಿ ಭತ್ತ ಬೇಸಾಯ
ಶಾಲಾ ಆಟದ ಮೈದಾನಕ್ಕೆ ನೆರೆಯ ಕುಂಬ್ರದಿಂದ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ.ಸುಮಾರು ೧.೫ ಎಕರೆ ವಿಸ್ತ್ರೀರ್ಣ ಇರುವ ಈ ಆಟದ ಮೈದಾನದಲ್ಲಿ ಇದೀಗ ಎಂ.೪ ಭತ್ತದ ತಳಿಯ ಬೇಸಾಯ ಮಾಡಲಾಗುತ್ತಿದೆ. ಗದ್ದೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು ಎರಡು ಭಾಗದಲ್ಲಿ ಬಿತ್ತನೆ ಮೂಲಕ (ಕುಮೆರ್) ಬೇಸಾಯ ಮಾಡಿದರೆ ಮಧ್ಯದ ಒಂದು ಭಾಗದಲ್ಲಿ ಟ್ರೇಯಲ್ಲಿ ಸಸಿ ಮಾಡಿ ಯಂತ್ರದ ಮೂಲಕ ನಾಟಿ ಮಾಡುವ ಕಾರ್ಯ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.