HomePage_Banner
HomePage_Banner

ಬೆಟ್ಟಂಪಾಡಿ- ಇರ್ದೆ ಉಪ್ಪಳಿಗೆ ಕ್ಲಸ್ಟರ್ ಶಿಕ್ಷಕರಿಂದ ಅಡುಗೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಧನ ಸಹಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಅಭಿನಂದನೀಯ ಕಾರ್ಯಕ್ರಮ- ಸಂಜೀವ ಮಠಂದೂರು
ನಿಡ್ಪಳ್ಳಿ; ಆರ್ಥಿಕ ಸಂಕಷ್ಟದ ಈ ಕಾಲದಲ್ಲಿ ಉಳ್ಳವರು ಇಲ್ಲದವರಿಗೆ ನೀಡುವ ಇಂತಹ ಕಾರ್ಯಕ್ರಮ ಮಾಡಿದ ಶಿಕ್ಷಕರ ಕೆಲಸ ಅಭಿನಂದನೀಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ನುಡಿದರು. 
ಅವರು ಜೂ.12 ರಂದು ಬೆಟ್ಟಂಪಾಡಿ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆದ ಬೆಟ್ಟಂಪಾಡಿ ಮತ್ತು ಇರ್ದೆ ಉಪ್ಪಳಿಗೆ ಕ್ಲಸ್ಟರ್ ಶಿಕ್ಷಕರಿಂದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಡುಗೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಧನ ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಧನ ಸಹಾಯ ವಿತರಿಸಿ ಮಾತನಾಡಿದರು. ಇನ್ನು ಮುಂದೆ ಕೋವಿಡ್ ಪರೀಕ್ಷೆ ಫಲಿತಾಂಶ ಪುತ್ತೂರಿನಲ್ಲೆ ಸಿಗುವಂತೆ ಲ್ಯಾಬ್ ವ್ಯವಸ್ಥೆ ಮಾಡಲಾಗುವುದು ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಶಿಕ್ಷಕರ ಹೃದಯ ಶ್ರೀಮಂತಿಕೆ ಸಾಬೀತು- ಬಿ.ಇ.ಒ ಲೋಕೇಶ್.ಸಿ
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ .ಸಿ ಮಾತನಾಡಿ   ಸಮುದಾಯದ ಜೊತೆಯಲ್ಲಿ ಶಿಕ್ಷಕರು ಇದ್ದೇವೆ ಎನ್ನುವುದನ್ನು ಸಾಬೀತು ಗೊಳಿಸಿದ್ದಿರಿ.ಆದುದರಿಂದ ಶಿಕ್ಷಕರು ಹೃದಯ ಶ್ರೀಮಂತಿಕೆಯನ್ನು ತೋರಿಸಿದ್ದು ಬಹಳ ಸಂತಸ ತಂದಿದೆ ಎಂದರು.
ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ  ಮಾತನಾಡಿ ಶಿಕ್ಷಕರ ಇಂತಹ ಕಾರ್ಯಕ್ರಮ ಪ್ರಶಂಸನೀಯವಾಗಿದೆ. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಮುಂದೆ ತಾಲೂಕು ಹಂತದಲ್ಲಿ ಸಮಸ್ತ ಶಿಕ್ಷಕರ ಸಹಕಾರದಲ್ಲಿ ಎಲ್ಲಾ ಶೈಕ್ಷಣಿಕ ಸಂಘಟನೆಯೊಂದಿಗೆ ಸಹಾಯ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ.ಡಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಳ್ವ, ತಾಲೂಕು ಅಕ್ಷರ ದಾಸೋಹ ನಿರ್ದೇಶಕ ಸುರೇಶ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಸರ್ಕಾರಿ ನೌಕರರ ಸಂಘದ ತಾಲೂಕು ಪ್ರತಿನಿಧಿ ತನುಜ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ವೇದಾವತಿ,  ಸಂಘಟನಾ ಕಾರ್ಯದರ್ಶಿ ಸುಧಾಕರ್, ಖಜಾಂಚಿ ಶಾಂತಿ ಮೊರಾಸ್,ಪುತ್ತೂರು ಇ.ಸಿ.ಒ ಹರಿಪ್ರಸಾದ್, ಉಪ್ಪಳಿಗೆ ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಹರಿಪ್ರಸಾದ್ ಬೈಲಾಡಿ ಹಾಗೂ ಎಲ್ಲಾ ಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಬೆಟ್ಟಂಪಾಡಿ ಶಾಲಾ ಮುಖ್ಯ ಗುರು ಲಿಂಗಮ್ಮ ಪ್ರಾರ್ಥಿಸಿ ಉಪ್ಪಳಿಗೆ ಪ್ರೌಢಶಾಲಾ ಮುಖ್ಯ ಗುರು ನಾರಾಯಣ. ಕೆ ಸ್ವಾಗತಿಸಿದರು. ಸೂರಂಬೈಲು ಶಾಲಾ ಶಿಕ್ಷಕ ನಾಗೇಶ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ತಾ. ದೈಹಿಕ ಶಿಕ್ಷಣ ಶಿಕ್ಷಕ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ ವಂದಿಸಿದರು.
ಬೆಟ್ಟಂಪಾಡಿ ಕ್ಲಸ್ಟರ್  ಸಿ.ಅರ್.ಪಿ ಸೀತಾರಾಮ ಭಟ್ ಪಾಣಾಜೆ, ಇರ್ದೆ ಉಪ್ಪಳಿಗೆ ಕ್ಲಸ್ಟರ್ ಸಿ.ಅರ್.ಪಿ ಬಾಲಕೃಷ್ಣ ಸಿ.ಎಚ್ ಹಾಗೂ ಪುತ್ತೂರು ತಾಲೂಕು ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ನಾಗೇಶ ಪಾಟಾಳಿ ಇವರು ಒಟ್ಟು  ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಬೆಟ್ಟಂಪಾಡಿ ಹಾಗೂ ಇರ್ದೆ ಉಪ್ಪಳಿಗೆ ಕ್ಲಸ್ಟರ್ ಮಟ್ಟದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಡುಗೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಧನ ಸಹಾಯ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.