HomePage_Banner
HomePage_Banner

ಕಡಬದಲ್ಲಿ ಅವಧಿ ಮೀರಿ ವ್ಯಾಪಾರ ನಡೆಸಿದರೆ ಬೀಳಲಿದೆ ಕೇಸ್!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಡಬ ಎಸ್.ಐ. ರುಕ್ಮ ನಾಯ್ಕ್ ಎಚ್ಚರಿಕೆ
  • ಲಾಕ್ಡೌನ್ ಅವಧಿಯಲ್ಲಿ 475 ಪ್ರಕರಣ ದಾಖಲು, 2,84,500 ದಂಡ ವಸೂಲಿ

ಕಡಬ: ಕೊರೋನಾ ನಿಯಂತ್ರಣಕ್ಕೆ ಬಾರದೆ ಇರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿಸಲಾಗಿದ್ದು, ಒಂದು ವಾರಗಳ ಕಾಲ ಸರಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಇಲ್ಲದಿದ್ದರೆ ಕೇಸು ಹಾಕಲಾಗುವುದು ಕಡಬ ಎಸ್.ಐ.ರುಕ್ಮ ನಾಯ್ಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

                                                                  ಕಡಬ ಎಸ್.ಐ. ರುಕ್ಮ ನಾಯ್ಕ್

ಲಾಕ್ಡೌನ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಡಬ ಠಾಣಾ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಾಪಾರಸ್ಥರು ಸರಕಾರ ನಿಗದಿಪಡಿಸಿದ ಸಮಯ ಮೀರಿದರೂ ಅಂಗಡಿ ಬಂದ್ ಮಾಡದೆ ಇರುವುದು, ಮತ್ತು ಪದೆ ಪದೆ ಅವರಿಗೆ ಪೋಲಿಸರು ಬಂದ್ ಮಾಡಿ ಎಂದು ಎಚ್ಚರಿಕೆ ಕೊಡುವುದು ಮಾಮುಲು ಆಗಿ ಬಿಟ್ಟಿದೆ, ನಾಳೆಯಿಂದ ವ್ಯಾಪಾರಸ್ಥರು ಕೂಡ ಸಮಯಕ್ಕೆ ಸರಿಯಾಗಿ ಬಂದ್ ಮಾಡಬೇಕು, ಅನಗತ್ಯವಾಗಿ ತಿರುಗಾಡಬಾರದು, ನಾವು ಕಟ್ಟು ನಿಟ್ಟಾಗಿ ವತರ್ಿಸುವುದು ಜನರ ಒಲಿತಿಗಾಗಿ ಇದನ್ನು ಅರ್ಥ ಮಾಡಿಕೊಳ್ಳಬೇಕು, ಅಗತ್ಯ ವಸ್ತುಗಳ ಖರೀದಿಯ ವೇಳೆ ಜನರು ಮಾಸ್ಕ್ ಧರಿಸದಿರುವುದು, ಗುಂಪಾಗಿ ಇರುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಲಾಕ್ಡೌನ್ ಅವಧಿಯಲ್ಲಿ 475 ಪ್ರಕರಣ ದಾಖಲು | 2,84,500 ದಂಡ ವಸೂಲಿ
ಲಾಕ್ಡೌನ್ ಪ್ರಾರಂಭವಾದ ಬಳಿಕ ಕಡಬ ಠಾಣೆಯಲ್ಲಿ ನಿಯಮ ಉಲ್ಲಂಘನೆಯ 475 ಪ್ರಕರಣ ದಾಖಲಾಗಿದ್ದು, ಒಟ್ಟು 2,84,500 ರೂ, ದಂಡ ವಸೂಲಾಗಿದೆ, 45 ದ್ವಿಚಕ್ರ ವಾಹನ, 1 ಅಟೋ ರಿಕ್ಷಾ ಮತ್ತು 30 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಿ ದಂಡ ಹಾಕಲಾಗಿದೆ, ಅಲ್ಲದೆ 750 ಮಂದಿಗೆ ಮಾಸ್ಕ್ ಧರಿಸದೆ ಇರುವುದಕ್ಕೆ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.