HomePage_Banner
HomePage_Banner

ಬಜತ್ತೂರು ಗ್ರಾಮದ ವೃದ್ಧೆ ಕೋವಿಡ್‌ನಿಂದ ಮೃತ್ಯು – ಶಾಸಕರ ವಾರ್‌ರೂಮ್ ಮೂಲಕ ಪುತ್ತೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ

ಪುತ್ತೂರು: ಉಸಿರಾಟದ ತೊಂದರೆಗೆಯಿಂದ ಬಳಲುತ್ತಿದ್ದು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಡೆ ಪಡೆಯುತ್ತಿದ್ದ ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ ತನಿಯಾರು(75ವ) ಎಂಬವರು ಜೂ.13ರಂದು ರಾತ್ರಿ ಮೃತಪಟ್ಟಿದ್ದಾರೆ.

ಮೃತರ ಕೋವಿಡ್ ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಮೃತ ದೇಹವನ್ನು ಪುತ್ತೂರು ಶಾಸಕರ ವಾರ್‌ರೂಮ್ ಮೂಲಕ ಪುತ್ತೂರು ಮಡಿವಾಳ ಕಟ್ಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ, ಸ್ಮಶಾನ ನಿರ್ವಾಹಕ ಸತೀಶ್ ಅವರ ನೇತೃತ್ವದಲ್ಲಿ ಕೋವಿಡ್ ನಿಯಮವಾಳಿಯಂತೆ ಪಿಪಿಇ ಕಿಟ್ ಧರಿಸಿ ಮೃತರ ಪುತ್ರರು ಅಂತ್ಯ ಸಂಸ್ಕಾರ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.