HomePage_Banner
HomePage_Banner

ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೊರೊನಾ ಸೋಂಕಿತ ಮನೆಯವರಿಗೆ, ಆಶಾ ಕಾರ್‍ಯಕರ್ತರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸಹಕಾರಿ ಸಂಘದ ವತಿಯಿಂದ ಪೆರ್ನೆ ಮತ್ತು ಬಿಳಿಯೂರು ಗ್ರಾಮ ವ್ಯಾಪ್ತಿಯಲ್ಲಿರುವ ಕೊರೊನಾ ಸೋಂಕಿತ ಮನೆಯವರಿಗೆ ಮತ್ತು ಆಶಾ ಕಾರ್‍ಯಕರ್ತರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.

ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಕಿಟ್ ವಿತರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನತೆ ದುಡಿಮೆ ಇಲ್ಲದೆ ಬಹಳ ಸಂಕಷ್ಟದಲ್ಲಿ ಇದ್ದಾರೆ ಅದರಲ್ಲೂ ಕೊರೊನಾ ಸೋಂಕಿತ ಮನೆಯವರ ಕಷ್ಟ ಹೇಳ ತೀರದಂತಾಗಿದೆ ಹಾಗೂ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣದ ಹಂಗು ತೊರೆದು ಕನಿಷ್ಠ ವೇತನದಲ್ಲಿ ಕೆಲಸ ಮಾಡುವ ಆಶಾ ಕಾರ್‍ಯಕರ್ತರೂ ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಂತಹವರನ್ನು ಗುರುತಿಸಿ ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು ನಾವುಗಳು ಕೊರೊನಾ ಮಹಾಮಾರಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಕೋವಿಡ್-೧೯ ಮುಂಜಾಗ್ರತಾ ಕ್ರಮದೊಂದಿಗೆ ನಡೆದ ಸರಳ ಕಾರ್‍ಯಕ್ರಮದಲ್ಲಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ತನಿಯಪ್ಪ ಪೂಜಾರಿ, ನಿರ್ದೇಶಕರಾದ ಡಾ. ರಾಜಗೋಪಾಲ ಶರ್ಮ, ಸುನಿಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ನೀಲಪ್ಪ ಗೌಡ, ಚೆನ್ನಕೇಶವ, ಬಶೀರ್, ಜಯಲಕ್ಷ್ಮಿ, ಬೇಬಿ, ರೇವತಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಘದ ವ್ಯಾಪ್ತಿಯಲ್ಲಿರುವ ಒಟ್ಟು ೩೮ ಮಂದಿಗೆ ೨೫ ಕೆ.ಜಿ. ಅಕ್ಕಿ ಸೇರಿದಂತೆ ೧೫೦೦ ಮೌಲ್ಯದ ಕಿಟ್ ವಿತರಿಸಲಾಯಿತು. ಸಹಕಾರಿ ಸಂಘದ ಕಾರ್‍ಯನಿರ್ವಹಣಾಧಿಕಾರಿ ಪುಷ್ಪಾ ಡಿ. ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.