HomePage_Banner
HomePage_Banner

ಬೆಟ್ಟಂಪಾಡಿ:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೂ.14ರಂದು ಬೆಟ್ಟಂಪಾಡಿ 100 ನಾಟೌಟ್ ಎಂಬ ಶೀರ್ಷಿಕೆಯಡಿ ಗ್ರಾ.ಪಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವರವರು ಮಾತನಾಡಿ, ನೋಟ್ ಬ್ಯಾನ್, ಜಿಎಸ್.ಟಿಯಂತಹ ಅವೈಜ್ಞಾನಿಕ ನೀತಿಯ ಜಾರಿಯಿಂದ ಜನತೆ ಮೊದಲೇ ಜರ್ಜಿರಿತಾಗಿದ್ದಾರೆ. ಇದರ ಜೊತೆಗೆ ಕೊರೋನಾ ಮಹಾಮಾರಿಯು ಜನರಿಗೆ ಆರ್ಥಿಕವಾಗಿ ಮತ್ತಷ್ಟು ಹೊಡೆತ ನೀಡಿರುವ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ಪೆಟ್ರೋಲ್ ಬೆಲೆಯನ್ನು ರೂ.50ಕ್ಕೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ನವೀನ್ ರೈ ಚೆಲ್ಯಡ್ಕ ಮಾತನಾಡಿ, ಕೊರೋನಾಕ್ಕೆ ಸರಕಾರದ ಲಸಿಕೆ ನಮಗೆ ಬೇಡ. ಲಸಿಕೆ ಪಡೆದುಕೊಳ್ಳುವಷ್ಟು ನಾವು ಶಕ್ತರಿದ್ದೇವೆ. ಸರಕಾರ ಅಗತ್ಯ ಸಾಮಾಗ್ರಿಗಳ ದರ ಕಡಿಮೆ ಮಾಡಲಿ. ಪೆಟ್ರೋಲ್ ದರವನ್ನು ಅಂತಾರಾಷ್ಟ್ರೀಯ ದರದಲ್ಲಿಯೇ ನೀಡಬೇಕು ಎಂದು ಆಗ್ರಹಿಸಿದ ಅವರು ರಾಜ್ಯದಲ್ಲಿ ಸಿಡಿ ಸರಕಾರ ಆಡಳಿತ ನಡೆಸುತ್ತಿದ್ದು ದುರಾಡಳಿತ, ಭ್ರಷ್ಟಾಚಾರದಿಂದ ಕೂಡಿದ್ದು ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ಆರೋಪ ಮಾಡುವಂತಾಗಿದೆ ಎಂದು ಹೇಳಿದರು.

ಐತ್ತಪ್ಪ ಪೇರಲ್ತಡ್ಕ ಹಾಗೂ ಆಲಿಕುಂಞಿ ಕೊರಿಂಗಿಲ ಮಾತನಾಡಿ ಕೇಂದ್ರ ಸರಕಾರದ‌ ವಿರುದ್ಧ ಕಿಡಿಕಾರಿದರು. ಖಲಂದರ್ ಆಲಿ ಮಣ್ಣಾಪು, ನಳಿನಿ, ಸುಶೀಲ, ಪರಮೇಶ್ವರ ನಾಯ್ಕ, ಅಬೂಬಕ್ಕರ್ ಕೊರಿಂಗಿಲ, ಮಹಾಲಿಂಗ ನಾಯ್ಕ, ಹಮೀದ್ ಕೊಮ್ಮೆಮಾರ್, ಸದಾಶಿವ ರೈ ಗುಮ್ಮಟೆಗದ್ದೆ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊಯಿದು ಕುಂಞಿ ಕೋನಡ್ಕ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.