HomePage_Banner
HomePage_Banner

ಬನ್ನೂರು : ನ್ಯಾಯಾಲಯ ಕಾಮಗಾರಿಯಿಂದ ಚರಂಡಿ ವ್ಯವಸ್ಥೆ ಇಲ್ಲದೆ ತೋಡಿನಂತಾದ ಆನೆಮಜಲು ಅಂಗನವಾಡಿಯ ಅಂಗಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ಗ್ರಾಮದ ಆನೆಮಜಲಿನಲ್ಲಿ ನ್ಯಾಯಾಲಯದ ಕಾಮಗಾರಿ ನಡೆಯುತ್ತಿದ್ದು, ಎರಡು ದಿನದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಇಲ್ಲಿನ ರಸ್ತೆಯ ನೀರು ಸುಗಮವಾಗಿ ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಆಗದೇ ಇರುವುದರಿಂದ ರಸ್ತೆಯ ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರದ ಅಂಗಳದಲ್ಲಿ ನೀರು ಹರಿದು ತೋಡಿನಂತಾಗಿದೆ. ಅಂಗನವಾಡಿಯ ಶೌಚಾಲಯದ ಎದುರು ಕೂಡ ಸಾಕಷ್ಟು ನೀರು ನಿಂತು ಸಿಬಂದಿಗಳಿಗೆ ಶೌಚಾಲಯಕ್ಕೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಶೌಚಾಲಯದ ಗೋಡೆಗಳು ಕುಸಿದು ಬೀಳುವ ಆತಂಕ ವ್ಯಕ್ತವಾಗಿದೆ. ಶೌಚಾಲಯದ ಗುಂಡಿ ರಸ್ತೆಯ ಪಕ್ಕದಲ್ಲೇ ಇದ್ದು ರಸ್ತೆಯಿಂದ ವಾಹನ ಸವಾರರು ಸಹ ಆತಂಕದಲ್ಲೇ ಸಂಚಾರಿಸುವಂತಾಗಿದೆ.

ಇಲ್ಲಿನ ಸಮಸ್ಯೆಯನ್ನು ಅಂಗನವಾಡಿ ಸಿಬ್ಬಂದಿಗಳು ಕೋರ್ಟ್ ಕಟ್ಟಡದ ಕಾಮಗಾರಿ ವಹಿಸಿಕೊಂಡವರ ಗಮನಕ್ಕೆ ತಂದ ನಂತರ ಅಲ್ಲಿನ ಕಾರ್ಮಿಕರ ಜೊತೆಗೆ ಸೀದಿ ಕನ್‌ಸ್ಟ್ರಕ್ಷನ್‌ನ ರಮೇಶ್, ರಘು ಹಾಗೂ ಇನ್ನಿತರರು ಅಂಗನವಾಡಿ ಕೆಂದ್ರದ ಅಂಗಳದ ನೀರು ತೆರವು ಮಾಡಲು ಪ್ರಯತ್ನಿಸಿದ್ದರು.

ಆಗ್ರಹ: ನ್ಯಾಯಾಲಯದ ಕಟ್ಟಡ ಕಾಮಗಾರಿಯ ಜೊತೆಗೆ ರಸ್ತೆ ದುರಸ್ತಿ ಗೊಳಿಸುವ ಯೋಜನೆ ಇದ್ದರೂ, ಅದಕ್ಕೆ ಸಾಕಷ್ಟು ಸಮಯ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿಯಾದರೂ ಸಮರ್ಪಕವಾದ ಚರಂಡಿಯ ವ್ಯವಸ್ಥೆಯನ್ನು ಸಂಬಂಧಪಟ್ಟವರು ಕಲ್ಪಿಸಬೇಕಾಗಿ ಇಲ್ಲಿನ ಗ್ರಾಮಸ್ಥರ ಹಾಗೂ ಅಂಗನವಾಡಿ ಪುಟಾಣಿಗಳ ಪೋಷಕರು ಆಗ್ರಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.