HomePage_Banner
HomePage_Banner

ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಅನ್ಯಾನ್ಯ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮುಂದಿನ ಪೀಳಿಗೆಯನ್ನು ರಕ್ತದಾನ ಮಾಡುವಲ್ಲಿ ಪ್ರೇರೆಪಿಸಲು ದಿನಾಚರಣೆ ಅಗತ್ಯ – ಸಂಜೀವ ಮಠಂದೂರು

ಪುತ್ತೂರು : ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಸೇವಾ ಭಾರತಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಇದರ ಸಹಯೋಗದಲ್ಲಿ ಪುತ್ತೂರು ರೋಟರಿ ಟ್ರಸ್ಟ್ ಹಾಲ್ ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಜೂ. ೧೪ರಂದು ನಡೆಯಿತು. ಇದೇ ಸಂದರ್ಭದಲ್ಲಿ ರಕ್ತದಾನದ ಜಾಗೃತಿ ಮೂಡಿಸಿದ ಸಂಸ್ಥೆಗಳ ಸದಸ್ಯರಿಗೆ ಮತ್ತು ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿಯನ್ನು ಗೌರವಿಸಲಾಯಿತು.

ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಕ್ತದಾನದ ಮೂಲಕ ಜೀವ ಉಳಿಸುವ ದೃಷ್ಟಿಯಿಂದ ಸಮಾಜಕ್ಕೆ ವಿಶೇಷ ಸೇವೆ ಮಾಡುವವರನ್ನು ಗೌರವಿಸುವುದು ಮತ್ತು ನೆನಪಿಸುವ ಮೂಲಕ ಮುಂದಿನ ಪೀಳಿಗೆ ರಕ್ತದಾನ ಮಾಡುವಂತೆ ಪ್ರೇರೆಪಿಸುವುದು ಅಗತ್ಯವಿದೆ. ಇಂತಹ ರಕ್ತದಾನಿಗಳಿಗೆ ಪೂರ್ಣ ಸಹಕಾರ ನೀಡುವಲ್ಲಿ ಮುಂಚೂಣಿಯಲ್ಲಿರುವ ರೋಟರಿ ಬ್ಲಡ್ ಬ್ಯಾಂಕ್ ಕೇವಲ ಪುತ್ತೂರು ಮಾತ್ರವಲ್ಲ ಬೆಂಗಳೂರಿಗೂ ರಕ್ತ ಕಳುಹಿಸಿ ಕೊಡುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ದಿನಗಳಲ್ಲಿ ಜಗತ್ತಿನಲ್ಲಿ ಕೋವಿಡ್ ಸಾಂಕ್ರಮಿಕ ರೋಗದಿಂದ ಬದುಕು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಮತ್ತೊಮ್ಮೆ ಸಹಜೀವನ ಕೊಡುವಂತಹದ್ದು ಸರಕಾರಕ್ಕೆ ದುಸ್ಸಾಹಸ ಆಗಿದೆ. ಇಡೀ ಜಗತ್ತಿನ ಜನರ ಆರೋಗ್ಯ ಕಾಪಡಲು ಕಟ್ಟು ನಿಯಮ ಪಾಲನೆ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲೂ ಜನರಿಗೆ ಜೀವ ರಕ್ಷಣೆ ಮಾಡುವ ದೃಷ್ಟಿಯಿಂದ ರಕ್ತದ ಅವಶ್ಯಕತೆ ಇರುವ ಸಂದರ್ಭದಲ್ಲಿ ಬಹಳಷ್ಟು ರಕ್ತದಾನಿಗಳು ಇನ್ನೊಬ್ಬರ ಜೀವ ಉಳಿಸಲು ತಮ್ಮ ರಕ್ತ ನೀಡುವ ಮೂಲಕ ಹೃದಯಶ್ರೀಮಂತಿಕೆ ಬೆಳೆಸಿದ್ದಾರೆ. ರಕ್ತದಾನಿಗಳುನ್ನು ಸ್ಮರಿಸುವಂತಹದ್ದು ಮುಂದಿನ ಪೀಳಿಗೆಗೆ ಅವರನ್ನು ಪರಿಚಿಯಸುವುದು ಇದೊಂದು ಪ್ರೇರಣೆ ಕೆಲಸವಾಗಿದೆ ಎಂದರು.

ಗೌರವಾರ್ಪಣೆ:
ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್, ಹಿಂದು ಜಾಗರಣ ವೇದಿಕೆ, ರಕ್ತಸಂಜೀವಿನಿ ಕಾರ್ಯಕರ್ತರು, ಸೇವಾ ಭಾರತಿಯ ಕಾರ್ಯದರ್ಶಿ ರಮೇಶ್, ಯೋಗದ ಮೂಲಕ ಆರೋಗ್ಯದ ಕಾಳಜಿ ಮೂಡಿಸುತ್ತಿರುವ ಸೇವಾ ಭಾರತಿಯ ಶರಾವತಿ, ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರೂ, ರೋಟರಿ ಬ್ಲಡ್ ಬ್ಯಾಂಕ್‌ನ ಅಧ್ಯಕ್ಷರೂ ಆಗಿರುವ ಝೇವಿಯರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಕ್ರೀಯ ಸದಸ್ಯ ಪ್ಯಾಟ್ರಿಕ್ ಸಿಪ್ರಿಯನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಆಸ್ಕರ್ ಆನಂದ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಮಧು ನರಿಯೂರು ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸೊಸೈಟಿ ಪ್ರಧಾಮ ಕಾರ್ಯದರ್ಶಿ ಎ.ಜಗಜೀವನ್ ದಾಸ್ ಸ್ವಾಗತಿಸಿದರು. ರೋಟರಿ ಎಲೈಟ್ ನ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ವಾರ್ ರೂಮ್ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ರೋಟರಿ ಎಲೈಟ್ ರಂಜಿತ್ ಮತಾಯಿಸ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.