HomePage_Banner
HomePage_Banner

ಕೊಳ್ತಿಗೆ: ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಅಕ್ಕಿ, ದಿನಸಿ ವಿತರಣೆ

ಪುತ್ತೂರು : ಕೊರೊನಾ ವೈರಸ್ ಸೋಂಕು ಹರಡದಂತೆ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಮದ ಎಕ್ಕಡ್ಕ ವಾರ್ಡಿನ ತೀರಾ ಬಡ ಕುಟುಂಬಗಳಿಗೆ ಹಾಗೂ ಪಡಿತರ ಕಾರ್ಡು ಇಲ್ಲದ ಕೆಲವು ಬಡ ಕುಟುಂಬಗಳಿಗೆ ಜೂ. 13 ರಂದು ಮುಂಜಾಗೃತಾ ಕ್ರಮದೊಂದಿಗೆ ಎಕ್ಕಡ್ಕ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ತಲಾ 10 ಕೆ.ಜಿ ಯಂತೆ ಅಕ್ಕಿ ಹಾಗೂ ದಿನಸಿಗಳನ್ನು ಘಟಕದ ಯುವ ಮೋರ್ಚಾ ಸಂಚಾಲಕರಾದ ಮಂಜುನಾಥ್ ದುಗ್ಗಳ ವಿತರಿಸಿದರು.

ಈ ಸಂದರ್ಭದಲ್ಲಿ ಕೊಳ್ತಿಗೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಪಾಂಬಾರು, ಯುವ ಮೋರ್ಚಾ ಘಟಕದ ಸದಸ್ಯರುಗಳಾದ ಕಾರ್ತಿಕ್ ಬರಡಿಮಜಲು, ದಿನೇಶ್ ಕೆರೆಮೂಲೆ, ಕಾರ್ತಿಕ್ ಚಾಮೆತಕುಮೇರ್, ಸಾತ್ವಿಕ್ ಜೆ.ಪಿ, ಹರ್ಷೆಂದ್ರ ದುಗ್ಗಳ, ಸುಮಂತ್ ದುಗ್ಗಳ ಹಾಗೂ ಇತರರು ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.