HomePage_Banner
HomePage_Banner

ಕೆಯ್ಯೂರಿನಲ್ಲಿ  ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡಿಸೀಲ್ ಬೆಲೆ ಏರಿಕೆಯ ವಿರುದ್ದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಕೆಯ್ಯೂರು: ಕೆಯ್ಯೂರು ಗ್ರಾಮದ ಕೆಯ್ಯೂರು ದ್ವಾರದ ಬಳಿ ಪೆಟ್ರೋಲ್, ಡೀಸೆಲ್‌, ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋದಿಸಿ ಕೆಯ್ಯೂರು ಕಾಂಗ್ರೆಸ್ ಸಮಿತಿ ವತಿಯಿಂದ ಜೂ14ರಂದು 100 ನಾಟೌಟ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಬೆಲೆ ಏರಿಕೆ ವಿರುದ್ದ  ಮೋದಿ ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 
ಕೆಯ್ಯೂರು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಮಾತಾಡಿ ಕಾಂಗ್ರೇಸ್ ಪಕ್ಷ ಬಡ, ಮಧ್ಯಮ ವರ್ಗದ ಜನರ ಪರವಾಗಿ ಹೋರಾಟ ನಡೆಸುತ್ತದೆ. ಕೋರೋನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ತೈಲ ಬೆಲೆ, ಹಾಗೂ ಅಡುಗೆ  ಅನಿಲ ಬೆಲೆ ಏರಿಸಿ ಜನವಿರೋದಿ  ನೀತಿಯನ್ನು ಅನುಸರಿಸುತ್ತದೆ, ಜನರು ಕಷ್ಟದಲ್ಲಿದ್ದರೂ ,ಬಡವರ ಮೇಲೆ ಸ್ವಲ್ಪನಾದರೂ ಕಾಳಜಿ ಇದ್ದರೆ ಕೂಡಲೇ ಬೆಲೆ ಏರಿಕೆ ಕಡಿಮೆ ಮಾಡಲಿ ಎಂದು100 ನಾಟೌಟ್ ಪ್ರತಿಭಟನೆಯಲ್ಲಿ ಮಾತಾಡಿದರು. 
ಕೇಂದ್ರ ಸರಕಾರವು ಜನರನ್ನು ತಪ್ಪು ದಾರಿಗೆ ತಂದು, ದರೋಡೆ ಮಾಡಿ ಜೀವನ ನಡೆಸುವ ಬಿಜೆಪಿ ಸರಕಾರವನ್ನು ಮುಂದಿನ ದಿನಗಳಲ್ಲಿ ಜನರೆ ತಕ್ಕ ಪಾಠ ಕಳಿಸಬೇಕು ಎಂದು ಕೆಯ್ಯೂರು ಗ್ರಾ.ಪಂ.ಸದಸ್ಯ ಬಟ್ಯಪ್ಪ ರೈ ದೇರ್ಲ ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಜನರ ಬಳಿ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ,ಗೆದ್ದ ನಂತರ ಅಧಿಕಾರ ಹಿಡಿದು ಕೊಟ್ಟ ಆಶ್ವಾಸನೆಯನ್ನು ಮರೆತು, ಹಗಲು ದರೋಡೆ ಮಾಡುವ ಬಿಜೆಪಿ ಸರಕಾರಕ್ಕೆ ಮುಂದಿನ ದಿನಗಳಲ್ಲಿ  ಜನರೇ  ತಕ್ಕ ಪಾಠ ಕಳಿಸುತ್ತಾರೆ ಎಂದು ಕೆಯ್ಯೂರು ಗ್ರಾ.ಪಂ.ಮಾಜಿ ಸದಸ್ಯ ಹನೀಪ್ ಕೆ.ಎಂ.ಹೇಳಿದರು. ಈ ಸಂದರ್ಭದಲ್ಲಿ   ಕೆಯ್ಯೂರು ಗ್ರಾ.ಪಂ.ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಶೇಷಪ್ಪ ದೇರ್ಲ, ಅಮಿತಾ ಎಚ್ ರೈ,  ಕಾಂಗ್ರೆಸ್ ಕಾರ್ಯಕರ್ತರಾದ  ಶಿವಶ್ರೀ ರಂಜನ್ ರೈ ದೇರ್ಲ, ಅಶೋಕ್ ರೈ ದೇರ್ಲ, ಗೋಪಾಲ ಪೂಜಾರಿ ಕಣಿಯಾರು, ಚಂದ್ರಶೇಖರ ಪೂಜಾರಿ ಕಣಿಯಾರು, ಗಂಗಾಧರ ಪೂಜಾರಿ ಕೆಯ್ಯೂರು, ಶೀನಪ್ಪ ರೈ ಕೆಯ್ಯೂರು, ಹರಿನಾಥ ರೈ ಕೂಡೇಲು, ಲಲತ ಪಲ್ಲತ್ತಡ್ಕ, ಹಾರೀಶ್ ಪಾತುಂಜ, ಸಮ್ಮದ್ ,ತೌಸೀಪ್, ಅಶ್ರಪ್, ಸಾತ್ತಾರ್ ಅರಿಕ್ಕಿಲ, ಅಜೀಜ್ , ಶೇರೀಪ್, ನಿಜಾಮ್ ಹೊನೆಸ್ಟ್, ಅಬ್ಬಾಸ್ ಅರಿಕ್ಕಿಲ, ಅಮರ್ಹಾನ್, ಪ್ರತಿಭಟನೆ ಯಲ್ಲಿ ಭಾಗವಹಿಸಿದರು. ಕೆಯ್ಯೂರು ಕಾಂಗ್ರೇಸ್ ಸಮಿತಿ ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.