HomePage_Banner
HomePage_Banner

ಬಪ್ಪಳಿಗೆ ಕರ್ಕುಂಜದಲ್ಲಿ ಮನೆ ಗೋಡೆ ಕುಸಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಗರಸಭೆ ಅಧಿಕಾರಿಗಳಿಂದ ಮುನ್ನೆಚ್ಚರಿಕೆ ಕ್ರಮ

ಪುತ್ತೂರು: ಬಪ್ಪಳಿಗೆ ಕರ್ಕುಂಜ ಸಮೀಪ ಇಸ್ಮಾಯಿಲ್ ಎಂಬವರ ಮನೆಯ ಭಾಗಶಃ ಗೋಡೆಯೊಂದು ಕುಸಿದು ಬಿದ್ದು ಅಪಾಯದ ಸ್ಥಿತಿಯಲ್ಲಿದೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಮನೆ ಅಪಾಯದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಮನೆ ಮಂದಿ ಬೇರೆ ಮನೆಗೆ ಶಿಫ್ಟ್ ಆಗಿದ್ದರು. ಇದೇ ವೇಳೆ ಮನೆಯ ಒಂದು ಭಾಗ ಕುಸಿದಿದೆ. ಮನೆಯೂ ರಸ್ತೆಯಿಂದ ಸುಮಾರು ಐದರಿಂದ ಆರು ಅಡಿ ಎತ್ತರದಲ್ಲಿರುವುದರಿಂದ ಅಲ್ಲಿಂದ ಮಣ್ಣು ಕುಸಿತಗೊಂಡು ರಸ್ತೆಗೆ ಬೀಳುವ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಗೆ ಕಲ್ಲುಗಳನ್ನು ಇಟ್ಟು ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ನಗರಸಭೆ ಪೌರಾಯುಕ್ತ ಮಧು ಎಸ್.ಎಮ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬಲ್ನಾಡು ರಸ್ತೆಯಲ್ಲಿ ಅಲ್ಲಲ್ಲಿ ಮಣ್ಣು ಕುಸಿತ ಭೀತಿ:
ಮುಂಗಾರು ಮಳೆ ಆರಂಭ ಆಗುತ್ತಿದ್ದಂತೆ ನಗರಸಭೆ 500 ಮೀಟರ್ ದೂರದಲ್ಲಿರುವ ಮಿನಿ ವಿಧಾನ ಸೌಧದ ಹಿಂದಿನ ರಸ್ತೆ ಬೈಪಾಸ್ ಕಳೆದಂತೆ ಅವ್ಯವಸ್ಥೆಯ ಆಗರವಾಗಿದೆ. ರಸ್ತೆಯ ಎಲ್ಲಾ ತಿರುವುಗಳಲ್ಲೂ ರಸ್ತೆಗೆ ಮಣ್ಣುಗಳು ಗುಡ್ಡಗಳು ತೆಂಗಿನ ಮರಗಳು ಕುಸಿದು ಬೀಳಲಾರಂಭಿಸಿದೆ. ಸದ್ಯ ಲಾಕ್ ಡೌನ್‌ನಿಂದ ವಾಹನಗಳ ಓಡಾಟ ಕಡಿಮೆ ಇರುವ ಕಾರಣ ಅಪಾಯ ಇಲ್ಲದೆ ಇದ್ದರೂ ಬಹಳ ದೊಡ್ಡ ಮಟ್ಟದಲ್ಲಿ ಆಪಾಯಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಕ್ಷಣ ಈ ಕುರಿತು ಸ್ಪಂದಿಸಬೇಕು ಇಲ್ಲವಾದರೆ ಹೋರಾಟ ಮಾಡಲಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಪ್ಪಳಿಗೆ ಕರ್ಕುಂಜ ಬಲ್ನಾಡು ನಾಗರಿಕರು ಸಂದೇಶ ರವಾನೆಯಾಗಿದೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.