HomePage_Banner
HomePage_Banner

ಪ್ರಕೃತಿದತ್ತವಾಗಿ ಆಮ್ಲಜನಕ ಕೊಡುವ ಗಿಡಮರಗಳ ಬಗ್ಗೆ ನಿರ್ಲಕ್ಷ ಬೇಡ – ನಿರೀಕ್ಷಣಾ ಮಂದಿರದಲ್ಲಿ ವನಮಹೋತ್ಸವ ಆಚರಣೆಯಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಕೃತಿದತ್ತವಾಗಿ ಆಮ್ಲಜನಕ ಉತ್ಪತಿ ಮಾಡುವ ಪ್ಲಾಂಟ್‌ಗಳ ಬಗ್ಗೆ ಜನರ ನಿರ್ಲಕ್ಷದಿಂದಾಗಿ ಇವತ್ತು ಕೋವಿಡ್ ಸೋಂಕು ಬಂದಂತಹ ಸಂದರ್ಭದಲ್ಲಿ ನಾವೆಲ್ಲ ಆಕ್ಸಿಜನ್ ಪ್ಲಾಂಟ್ ನೋಡುತ್ತಿದ್ದೇವೆ. ಹಾಗಾಗಿ ಪ್ರಕೃತಿಯ ಬಗ್ಗೆ ನಿರ್ಲಕ್ಷ ಬೇಡ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ತಾಲೂಕು ಆಡಳಿತದ ಸಹಭಾಗಿತ್ವದಲ್ಲಿ ಜೂ.15ರಂದು ದರ್ಬೆ ನಿರೀಕ್ಷಣಾ ಮಂದಿರದ ಪರಿಸರದಲ್ಲಿ ವನಮಹೋತ್ಸವ ಕಾರ್ಯಕ್ರಮದ ಬಳಿಕ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು ನೆಲ, ಜಲ, ವಾಯು ಪರಿಶುದ್ದವಾಗಿರಬೇಕಾದರೆ ಗಿಡಮರಗಳನ್ನು ಬೆಳಸಿ ಪರಿಸರ ಉಳಿಸಬೇಕು, ಪ್ರಕ್ರತಿದತ್ತವಾಗಿ ಹೆಚ್ಚು ಆಮ್ಲಜನಕ ಕೊಡುವ ಗಿಡ ಮರಗಳನ್ನೇ ಬೆಳೆಸಬೇಕು. ಇವತ್ತು ಎಲ್ಲಾ ಅಧಿಕಾರಿಗಳು ಸೇರಿಕೊಂಡು ಪ್ರವಾಸಿ ಮಂದಿರದಲ್ಲಿ ಗಿಡಮರಗಳನ್ನು ನೆಡುವ ಕಾರ್ಯಕ್ರಮ ಸಾರ್ವಜನಿಕರಿಗೂ ಪರಿಸರ ಉಳಿಸುವ ಜಾಗೃತಿ ಮೂಡಲಿ ಎಂದು ಹೇಳಿದರು.

ಪುತ್ತೂರು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಾ.ಪಂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ. ಕಾರ್ಯಪ್ಪ, ಪುತ್ತೂರು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜರಾಮ್, ಇಂಜಿನಿಯರ್ ಪ್ರಮೋದ್, ಮೆಸ್ಕಾಂ ಇಂಜಿನಿಯರ್ ಶಿಲ್ಪಾ ಶೆಟ್ಟಿ, ಸಿಡಿಪಿಒ ಶ್ರೀಲತಾ, ಕೃಷಿ ಇಲಾಖೆಯ ನಾರಾಯಣ ಶೆಟ್ಟಿ, ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್, ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಆಚಾರ್ಯ, ಪ್ರಕಾಶ್, ಪ್ರಸಾದ್ ಕೆ.ವಿ, ಮಂಜುನಾಥ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಅಭಿವೃದ್ಧಿ ದೃಷ್ಟಿಯಿಂದ ಬಹಳಷ್ಟು ಮರಗಳನ್ನು ತೆರವು ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಗಿಡವನ್ನು ಮತ್ತೆ ನೆಟ್ಟು ಅಲ್ಲಿ ಗಿಡ ಮರಗಳ ಬೆಳೆಸುವ ಜಾಗೃತಿ ಮೂಡಿಸುವ ಕೆಲಸವನ್ನು ನಮ್ಮ ಇಲಾಖೆಯ ಮೂಲಕ ಮಾಡುತ್ತಿದ್ದೇವೆ. ಇವತ್ತು ಸುಮಾರು 30 ಉತ್ತಮ ಗಿಡಗಳನ್ನು ನೆಟ್ಟಿದ್ದೇವೆ – ವಿ.ಪಿ ಕಾರ್ಯಪ್ಪ, ಅರಣ್ಯಸಂರಕ್ಷಣಾಧಿಕಾರಿ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.