HomePage_Banner
HomePage_Banner

ಮುಂಡೂರು: `ಭತ್ತ ಬೆಳೆಯೋಣ’ ಪೂರ್ವಬಾವಿ ಸಭೆ-ನೂತನ ಸಮಿತಿ ರಚನೆ

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಈಗಾಗಲೇ ಆರಂಭಗೊಂಡಿರರುವ `ಬತ್ತ ಬೆಳೆಯೋಣ’ ವಿನೂತನ ಕಾರ್ಯಕ್ರಮದ ಪೂರ್ವಭಾವಿ ಸಭೆ ಮುಂಡೂರು ಕುಕ್ಕಿನಡ್ಕ ದೇವಸ್ಥಾನದಲ್ಲಿ ನಡೆಯಿತು. ಊರಿನವರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ಮಾಡುವುದೆಂದು ಚರ್ಚಿಸಲಾಯಿತು. ಸುಮಾರು ೫೦ ಮುಡಿ ಗದ್ದೆ ನಾಟಿ ಮಾಡುವ ಗದ್ದೆಯನ್ನು ಗುರುತಿಸಿದ್ದು ಅವರನ್ನು ಸಂಪರ್ಕ ಮಾಡಿ ಗದ್ದೆ ಕೃಷಿ ಮಾಡುವ ಬಗ್ಗೆ ಮನವರಿಕೆ ಮಾಡಲು ನಿಶ್ಚಯಿಸಲಾಯಿತು. ಸ್ಥಳೀಯ ಗ್ರಾ.ಪಂ ಮತ್ತು ಸಂಘ ಸಂಸ್ಥೆಗಳನ್ನು ಸಂಪರ್ಕ ಮಾಡಲು ತೀರ್ಮಾನಿಸಲಾಯಿತು.

ದೇವಸ್ಥಾನದಲ್ಲಿ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ನಿರ್ಣಯ ಮಾಡಲಾಯಿತು. ಗದ್ದೆ ನಾಟಿ ಮಾಡಲು ಊರವರ ಸಮಿತಿಯೊಂದನ್ನು ರಚಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿ ಶೆಟ್ಟಿಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಕಾರ್ಯದರ್ಶಿಯಾಗಿ ಬಾಲಕೃಷ್ಣ ಕಣ್ಣರಾಯರವರನ್ನು ಆಯ್ಕೆ ಮಾಡಲಾಯಿತು. ನೇಜಿ ಹಾಕುವ ಮತ್ತು ಕೊಯ್ಯುವ ಜವಾಬ್ದಾರಿಯನ್ನು ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರಜನಿ ಗೌಡ ವಹಿಸಿಕೊಂಡರು. ಗದ್ದೆ ಉಳುವ ಜವಾಬ್ದಾರಿ ಪುಟ್ಟಣ್ಣ ಗೌಡ. ವಿಶ್ವನಾಥ ಮತ್ತು ಜಯಾನಂದ ವಹಿಸಿಕೊಂಡರು. ಸಭೆಯಲ್ಲಿ ಗದ್ದೆ ಬೆಳೆಯೋಣ ಸಮಿತಿ ಪ್ರಮುಖರಾದ ಮುರಳಿ ಭಟ್ ಬಂಗಾರಡ್ಕ, ಬೂಡಿಯಾರ್ ರಾಧಾಕೃಷ್ಣ ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಉಮೇಶ ಗುತ್ತಿನಪಾಲು, ಸುಧೀರ್ ಶೆಟ್ಟಿ, ರಾಮಣ್ಣ ಗೌಡ, ನಾಗೇಶ್ ಕುದ್ರೆತ್ತಾಯ, ಪ್ರಸಾದ್ ಬೈಪಾಡಿತ್ತಾಯ ಮತ್ತಿತರರು ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿ ಪಟ್ಟೆ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.