HomePage_Banner
HomePage_Banner

ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರುದ್ಧ ತಿಂಗಳಾಡಿಯಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ | ದೇಶದಲ್ಲಿ ಅಚ್ಚೇದಿನ್ ಬಂದಿದೆಯೆಂದು ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ವಿರೋಧಿಸಿ ತಿಂಗಳಾಡಿ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ವತಿಯಿಂದ ೧೦೦ ನಾಟೌಟ್ ಪ್ರತಿಭಟನೆ ಜೂ.14ರಂದು ತಿಂಗಳಾಡಿ ಪೇಟೆಯಲ್ಲಿ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಪುತ್ತೂರು ಘಟಕದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರುರವರು ಬಿಜೆಪಿ ಸರಕಾರ ತೈಲ ಬೆಲೆಗಳನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ದೇಶದ ಜನರ ಮೇಲೆ ಪ್ರಹಾರ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಅಗತ್ಯ ವಸ್ತುಗಳು ಹೀಗೆ ಎಲ್ಲವುಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರು ಸಂಕಷ್ಟದ ಜೀವನ ಸಾಗಿಸುವಂತಾಗಿದೆ. ಕೇಂದ್ರ ಬಿಜೆಪಿ ಸರಕಾರ ಜನರನ್ನು ಮರುಳು ಮಾಡುತ್ತದೆಯೇ ವಿನಃ ಜನರಿಗೆ ಪ್ರಯೋಜನವಾಗುವ ಒಂದೇ ಕಾರ್ಯಕ್ರಮವನ್ನು ಜಾರಿಗೆ ತಂದಿಲ್ಲ. ಜನರ ಆಶೋತ್ತರಗಳಿಗೆ ವಿರುದ್ಧವಾಗಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳನ್ನು ಕಿತ್ತೊಗೆಯದೇ ನಾವು ವಿರಮಿಸಬಾರದು ಎಂದು ಹೇಳಿದರು.

ಅಚ್ಚೇ ದಿನ್ ತರುತ್ತೇವೆ ಎಂದು ಹೇಳಿ ಅಧಿಕಾರ ಪಡೆದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನ ಸಾಮಾನ್ಯರನ್ನು ನರಕದ ಕೂಪಕ್ಕೆ ತಳ್ಳುತ್ತಿದೆ, ಪೆಟ್ರೋಲ್ ಬೆಲೆ ಶತಕ ದಾಟಿದ್ದು ಇದೇನಾ ನಿಮ್ಮ ಅಚ್ಚೇ ದಿನ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಮನೋಹರ್ ರೈ ಎಂಡೆಸಾಗು ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆದೇಶದಂತೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ತೈಲ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಬಿಜೆಪಿ ಸರಕಾರ ತೈಲ ಬೆಲೆಗಳನ್ನು ವಿಪರೀತವಾಗಿ ಹೆಚ್ಚಿಸುವ ಮೂಲಕ ಜನರಿಗೆ ಸಂಕಷ್ಟವನ್ನು ತಂದೊಡಿದ್ದಾರೆ ಎಂದು ಹೇಳಿದರು.

ಸ್ವಾಗತಿಸಿದ ಕಾಂಗ್ರೆಸ್ ಕಾರ್ಯಕರ್ತ ಹಬೀಬ್ ಕಣ್ಣೂರು ಮಾತನಾಡಿ ತೈಲ ಬೆಲೆಯೇರಿಕೆಯಾದಾಗ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ಜನ ಸಾಮಾನ್ಯರ ಬಗ್ಗೆ ಕಾಳಜಿಯಿಲ್ಲದ ಕೇಂದ್ರ ಹಾಗೂ ರಾಜ್ಯ ಸರಕಾರ ತೊಲಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಸ್ಥಾಪಿಸಿದರೆ ಮಾತ್ರ ಜನ ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮೋಹನ್ ರೈ ತ್ಯಾಗರಾಜೆ, ರಫೀಕ್ ಎನ್.ಎಸ್, ಹಾರಿಸ್ ಬೋಳೋಡಿ, ಉಸ್ಮಾನ್ ಕೆ, ಮುರಳಿ ತ್ಯಾಗರಾಜೆ, ಇಸ್ಮಾಯಿಲ್ ಟಿ.ಎಂ, ಭಾಸ್ಕರ ಕೆ, ಅನ್ಸಾರ್ ಟಿ.ಎಸ್, ದಾಮೋದರ ನಾಯ್ಕ, ಸಿದ್ದಿಕ್ ನಿಡ್ಯಾಣ, ಆಬಿದ್ ತಿಂಗಳಾಡಿ, ಸವಾದ್ ತಿಂಗಳಾಡಿ, ಗೋವಿಂದ ನಾಯ್ಕ, ಅಸ್ಪಾಕ್ ನಿಡ್ಯಾಣ ಮತ್ತಿತರರು ಭಾಗವಹಿಸಿದ್ದರು. ಮೆಲ್ವಿನ್ ಮೊಂತೆರೋ ವಂದಿಸಿದರು.

ಸಿಹಿ ಹಂಚಿ ಸಂಭ್ರಮ:
ಪ್ರತಿಭಟನಾ ಸಭೆಯ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ದೇಶದಲ್ಲಿ ಅಚ್ಚೇ ದಿನ್ ಬಂದಿದೆ ಎಂದು ಹೇಳುತ್ತಾ ಸಿಹಿ ತಿಂಡಿ ಹಂಚಿ ಸಂಭ್ರಮಿಸುವ ಮೂಲಕ ಸರಕಾರವನ್ನು ಅಣಕಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.