HomePage_Banner
HomePage_Banner

ನಾಳೆ (16.06.2021) ಪುತ್ತೂರು ತಾಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ 1ನೇ / 2ನೇ ಡೋಸ್ ಕೋವಿಶೀಲ್ಡ್, ಕಡಬದಲ್ಲಿ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: 45 ವರ್ಷ ಮೇಲ್ಪಟ್ಟವರಿಗೆ 1ನೇ ಅಥವಾ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ನೀಡಿಕೆ ಕಾರ್ಯಕ್ರಮ ಜೂ. 16ರಂದು ಪುತ್ತೂರು ತಾಲೂಕಿನಲ್ಲಿ ನಡೆಯಲಿದ್ದು, ಕಡಬ ಮತ್ತು ಕೊಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಿಕೆ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ.

ತಾಲೂಕಿನ ಅಧೀನ ಆರೋಗ್ಯ ಸಂಸ್ಥೆಗಳಾದ ಶಿರಾಡಿ, ನೆಲ್ಯಾಡಿ, ಉಪ್ಪಿನಂಗಡಿ, ಪಾಣಾಜೆ, ಈಶ್ವರಮಂಗಲ, ಕೊಳ್ತಿಗೆ, ತಿಂಗಳಾಡಿ, ಸರ್ವೆ, ಕಾಣಿಯೂರು, ನೆಲ್ಲಿಕಟ್ಟೆಯಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಪುತ್ತೂರಿನಲ್ಲಿ 45 ವರ್ಷ ಮೇಲ್ಪಟ್ಟ ಕೋವಿಶೀಲ್ಡ್ ವ್ಯಾಕ್ಸಿನ್ 1ನೇ ಡೋಸ್ ಕೋವಿಶೀಲ್ಡ್ ಮತ್ತು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ (1ನೇ ಡೋಸ್ ಕೋವಿಶೀಲ್ಡ್ 84 ದಿನ ಆದವರಿಗೆ) ನೀಡಿಕೆ ಮತ್ತು ಕಡಬ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕೊಲ ಆರೋಗ್ಯ ಕೇಂದ್ರದಲ್ಲಿ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.