HomePage_Banner
HomePage_Banner

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಎನ್‌ಟಿಎಸ್‌ಇ ರಾಷ್ಟ್ರಮಟ್ಟದ ಪರೀಕ್ಷೆಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಎನ್.ಟಿ.ಎಸ್.ಇ. ಅಂತಿಮ ಸುತ್ತಿನ ರಾಷ್ಟ್ರಮಟ್ಟದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

 

ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ನವದೆಹಲಿ ಹಾಗೂ ಡಿ.ಎಸ್.ಇ.ಆರ್.ಟಿ ಬೆಂಗಳೂರು ಇದರ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ತೋರಿದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳಾದ ಶಿವರಾಜ್ ಟಿ(ಟಿ. ಪರಮೇಶ್ವರ ಮಯ್ಯ ಮತ್ತು ಎಮ್.ಆರ್.ರಾಜಲಕ್ಷ್ಮೀ ಪುತ್ರ ) ಮತ್ತು ಎನ್. ದೀಪಶ್ರೀ (ಈಶ್ವರಕುಮಾರ್ ಮತ್ತು ಶ್ಯಾಮಲ ಎನ್., ಇವರ ಪುತ್ರಿ)ಯವರು ಎನ್.ಟಿ.ಎಸ್.ಇ ಅಂತಿಮ ಸುತ್ತಿನ ರಾಷ್ಟ್ರಮಟ್ಟದ ಪರೀಕ್ಷೆಗೆ ಆಯ್ಕೆಗೊಂಡಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಇವರಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

ವಿದ್ಯಾರ್ಥಿಗಳಿಗೆ ನಿರಂತರವಾಗಿ ತರಬೇತಿ ಮತ್ತು ಮಾರ್ಗದರ್ಶನವನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳ ಈ ಸಾಧನೆಗೆ ಬೆಂಗಳೂರಿನ ಸಿಸ್ಕೋ ತಂಡ ಹಾಗೂ ಅರಿವು ತಂಡ, ಯೂತ್ ಫಾರ್ ಸೇವಾ, ಕುಮಟದ ಸಂಪನ್ಮೂಲ ವ್ಯಕ್ತಿ ಎಸ್.ಎ. ಭಟ್ ಮತ್ತು ಶಾಲಾ ಆಡಳಿತ ಮಂಡಳಿಯವರು ಸಹಕರಿಸಿದ್ದಾರೆ. ಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ಶಿಕ್ಷಕ ವೃಂದದವರಾದ ವೆಂಕಟೇಶ್ ದಾಮ್ಲೆ, ದಿನೇಶ್, ಮಲ್ಲಿಕಾ, ಶ್ರೀನಿಧಿ, ನಿಶ್ಚಿತಾ ಎಸ್.ಜಿ, ಭವ್ಯ ಎಸ್, ರಶ್ಮಿ ಕೆ., ಉಪನ್ಯಾಸಕ ನವೀನ್, ವಿದ್ಯಾರ್ಥಿನಿಯರಾದ ಸವಿತಾ, ಮಯೂರಿ ಎಂ.ಜಿ. ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.