HomePage_Banner
HomePage_Banner

ಪುತ್ತೂರು, ಸುಳ್ಯದಲ್ಲಿ ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಬಾಧೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪರಿಹಾರಕ್ಕಾಗಿ ಶಾಸಕ ಸಂಜೀವ ಮಠಂದೂರುರವರಿಂದ ತೋಟಗಾರಿಕಾ ಸಚಿವರಿಗೆ ಮನವಿ

ಪುತ್ತೂರು: ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆ ಹಳದಿ ಎಲೆ ರೋಗ ಬಾಧೆಗೆ ತುತ್ತಾಗುತ್ತಿದ್ದು, ಪುತ್ತೂರು ಹಾಗು ಸುಳ್ಯ ಭಾಗದಲ್ಲಿ ಕಂಡು ಬಂದಿರುವ ಹಳದಿ ರೋಗಕ್ಕೆ ಪರಿಹಾರ ಒದಗಿಸಲು ಸಂಶೋಧನೆ ನಡೆಸುವಂತೆ ಶಾಸಕ ಸಂಜೀವ ಮಠಂದೂರುರವರು ಮಾಡಿದ ಮನವಿಗೆ ತೋಟಗಾರಿಕಾ ಇಲಾಖಾ ಸಚಿವ ಆರ್. ಶಂಕರ್‌ರವರು ಸ್ಪಂದಿಸಿ ಪರ್ಯಾಯ ಬೆಳೆಗೆ ಈಗಾಗಲೇ ಅನುದಾನ ನೀಡಿರುವುದಾಗಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಎಕರೆ ಅಡಿಕೆ ತೋಟಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ. ಅಡಿಕೆಯನ್ನೇ ನಂಬಿರುವ ಕೃಷಿ ಪ್ರಧಾನವಾದ ಜಿಲ್ಲೆಯ ಬಹುತೇಕ ಗ್ರಾಮಗಳ ಅಡಿಕೆ ಕೃಷಿಕರ ಬದುಕು ಡೋಲಾಮಯವಾಗಿದೆ. ಹಳದಿ ರೋಗ ಇದೀಗ ಸುಳ್ಯ ಮತ್ತು ಪುತ್ತೂರು ತಾಲೂಕಿನ ಹಲವು ಗ್ರಾಮಗಳಿಗೆ ವ್ಯಾಪಿಸಿದ್ದು, ಈಗಾಗಲೇ ಹಲವು ಮಂದಿ ಕೃಷಿಕರ ಅಡಿಕೆ ಕೃಷಿ ಹಳದಿ ರೋಗಕ್ಕೆ ತುತ್ತಾಗಿ ನಾಶವಾಗಿದೆ. ಈ ನಿಟ್ಟಿನಲ್ಲಿ ಹಳದಿ ಎಲೆ ರೋಗದ ನಿಯಂತ್ರಣದ ಕುರಿತು ಅಧ್ಯಯನ ಮಾಡಬೇಕು. ರೋಗ ನಿರೋಧಕ ತಳಿಯ ಅಭಿವೃದ್ಧಿಯ ಬಗ್ಗೆ ಸಂಶೋಧನೆ ಮಾಡಲು ಹಾಗೂ ಅಡಿಕೆ ಕೃಷಿ ನಾಶಗೊಂಡ ಕೃಷಿಕರಿಗೆ ಪರಿಹಾರ ಧನ ಒದಗಿಸುವ ಕುರಿತು ಸಚಿವರಿಗೆ ಮನವಿ ಸಲ್ಲಿಸಿದರು. ಪರ್ಯಾಯ ಬೆಳೆಯಾಗಿ ಕೃಷಿ ಮಾಡಲು ಸರಕಾರದ ಕಡೆಯಿಂದ ಯಾವ ರೀತಿಯ ಸಹಕಾರ ನೀಡಬಹುದೆಂಬ ಕುರಿತು ಶಾಸಕ ಸಂಜೀವ ಮಠಂದೂರುರವರು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ಅವರೊಂದಿಗೆ ಚರ್ಚಿಸಿದರು. ಶಾಸಕರ ಮನವಿಗೆ ಸ್ಪಂದಿಸಿದ ತೋಟಗಾರಿಕೆ ಇಲಾಖೆ ಸಚಿವರು ಈಗಾಗಲೇ ರೂ. ೨೫ ಕೋಟಿ ಪರ್ಯಾಯ ಬೆಳೆಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.