HomePage_Banner
HomePage_Banner

ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ – ಶಿರಾಡಿ ಗ್ರಾ.ಪಂ.ನಿಂದ 7 ಅಂಗಡಿಗಳಿಗೆ ದಂಡ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಗುಂಡ್ಯ, ಅಡ್ಡಹೊಳೆ ಪ್ರದೇಶದಲ್ಲಿ ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ 7 ಅಂಗಡಿಗಳಿಗೆ ಶಿರಾಡಿ ಗ್ರಾ.ಪಂ.ನಿಂದ ತಲಾ ರೂ.1000ದಂತೆ ದಂಡ ವಿಧಿಸಲಾಗಿದೆ.

ಜಿಲ್ಲೆಯಲ್ಲಿ ಜೂ.21ರ ಮುಂಜಾನೆ ತನಕ ಲಾಕ್‌ಡೌನ್ ಜಾರಿಯಲ್ಲಿದ್ದರೂ ಶಿರಾಡಿ ಗ್ರಾ.ಪಂ.ವ್ಯಾಪ್ತಿಯ ಗುಂಡ್ಯ, ಅಡ್ಡಹೊಳೆ ಪ್ರದೇಶದಲ್ಲಿ ಜೂ.16ರಂದು ಸಂಜೆ 7 ಅಂಗಡಿಯವರು ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಶಿರಾಡಿ ಗ್ರಾ.ಪಂ. ಪಿಡಿಒ ವೆಂಕಟೇಶ್ ಹಾಗೂ ಸಿಬ್ಬಂದಿಗಳು ಒಟ್ಟು 7 ಅಂಗಡಿಯವರಿಗೆ ತಲಾ 1 ಸಾವಿರ ರೂ.ನಂತೆ ದಂಡ ವಿಧಿಸಿದ್ದಾರೆ. ಇನ್ನು ಮುಂದೆಯೂ ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡಿದಲ್ಲಿ ರೂ. 5 ಸಾವಿರ ದಂಡ, ವ್ಯಾಪಾರ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ವ್ಯಾಪರಸ್ಥರು ಹಾಗೂ ಸಾರ್ವಜನಿಕರು ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಿಡಿಒ ವೆಂಕಟೇಶ್‌ರವರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶಿರಾಡಿ ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆಯ ಪ್ರಮುಖರಾದ ಫಾ. ಹನಿ ಜೇಕಬ್, ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಕಾರ್ಯಪಡೆಯ ಸದಸ್ಯರಾದ ಜೋಮೊನ್, ತೇಜಸ್, ಗಿರೀಶ್, ಗ್ರಾ.ಪಂ.ಸಿಬ್ಬಂದಿಗಳಾದ ಎಲ್ಯಾಸ್, ರಮ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.