HomePage_Banner
HomePage_Banner

ಬೆಟ್ಟಂಪಾಡಿ: ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟರವರಿಂದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇರ್ದೆ-ಬೆಟ್ಟಂಪಾಡಿ ಗ್ರಾಮಗಳ ಆಶಾ ಕಾರ್ಯಕರ್ತೆಯರು ಹಾಗೂ ಬಡ ಎಪಿಎಲ್ ಪಡಿತರ ಚೀಟುದಾರರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಇರ್ದೆ-ಬೆಟ್ಟಂಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೋಟ್ಟುರವರಿಂದ ಕಿಟ್ ವಿತರಣೆಯು ಜೂ.17ರಂದು ಬೆಟ್ಟಂಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಿಟ್ ವಿತರಿಸಿದ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಆಶಾಕಾರ್ಯಕರ್ತೆಯರಿಗೆ ನೀಡಿರುವ ಕಿಟ್ ಸಣ್ಣ ಪ್ರಮಾಣದಲ್ಲಿರಬಹುದು. ಆದರೆ ನಿಮ್ಮ ಸೇವೆಯನ್ನು ಗುರುತಿಸುವ ಕಾರ್ಯ ಇರ್ದೆ-ಬೆಟ್ಟಂಪಾಡಿ ಸಹಕಾರಿ ಸಂಘದ ಮುಖಾಂತರ ನಡೆದಿದೆ ಎಂದರು. ಕಳೆದ ವರ್ಷದ ಕೊರೋನಾ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಆಶಾ ಕಾರ್ಯಕರ್ತೆಯರಿಗೆ ಪ್ರಥಮ ಬಾರಿಗೆ ಕಿಟ್ ವಿತರಿಸುವ ಕಾರ್ಯಕೈಗೊಂಡಿದ್ದು ಇದಾದ ಬಳಿಕ ರಾಜ್ಯದ ಮುಖ್ಯಮಂತ್ರಿ ಗಳು ಆಶಾಕಾರ್ಯಕರ್ತೆಯರ ಗೌರವ ಧನವನ್ನು ಏರಿಕೆ ಮಾಡಿರುವುದಲ್ಲದೇ ರಾಜ್ಯದ ಎಲ್ಲಾ ಸಹಕಾರಿ ಸಂಘಗಳು ಆಯಾ ಭಾಗದಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ರೂ.2000 ಗೌರವಧನ ನೀಡುವಂತೆ ಸಹಕಾರಿ ಸಚಿವರು ಆದೇಶಿಸಿದ್ದು ಸಹಕಾರಿ ಸಂಘಗಳ ಮುಖಾಂತರ ಆಶಾಕಾರ್ಯಕರ್ತೆಯತನ್ನು ಗೌರವಿಸುವ ಕಾರ್ಯ ನಡೆದಿದೆ ಎಂದ ಅವರು ಈ ವರ್ಷವೂ ಆಶಾಕಾರ್ಯಕರ್ತೆಯರ ಜೊತೆಗೆ ಬಡ ಎಪಿಎಲ್ ಪಡಿತರ ಚೀಟುದಾರರಿಗೂ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಗುತ್ತಿದೆ.

ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್ ರಂಗನಾಥ ರೈ ಗುತ್ತು ಮಾತನಾಡಿ, ನಮ್ಮ ಸಂಘದ ಸದಸ್ಯರಾಗಿ ಜಿಲ್ಲಾ ಕೇಂದ್ರ ಬ್ಯಾಂಕ್ ನ ಸದಸ್ಯರಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಶಿಕುಮಾರ್ ರೈಯವರಿಂದ ನಮ್ಮ‌ಸಂಘದ ಗೌರವ ವೃದ್ದಿಯಾಗಿದೆ ಎಂದರು.

ನಿರ್ದೇಶಕರಾದ ಕರುಣಾಕರ ಶೆಟ್ಟಿ ಕೊಮ್ಮಂಡ, ಹರೀಶ್ ಗೌಡ ಜಿ., ನಾಗರಾಜ ಕೆ., ದೇವಪ್ಪ ನಾಯ್ಕ ಕೆ., ಚಂದ್ರನ್ ಕೆ., ಶೇಷಪ್ಪ ರೈ ಎಂ., ಆಶಾ ಅರವಿಂದ, ದೀಪಿಕಾ ಪಿ.ರೈ, ಸದಾಶಿವ ರೈ ಗುಮ್ಮಟೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮಯ್ಯ ರೈ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.