HomePage_Banner
HomePage_Banner

ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕ-ರಕ್ಷಕ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನೆಹರೂನಗರದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘವು ಕಳೆದ ಶೈಕ್ಷಣಿಕ ವರ್ಷದಲ್ಲಿ(2020-21) ನೆಹರೂ ನಗರದಲ್ಲಿ ಪ್ರಾರಂಭಿಸಿದ ನೂತನ ಶಿಕ್ಷಣ ಸಂಸ್ಥೆ, ವಿವೇಕಾನಂದ ಸೆಂಟ್ರಲ್ ಸ್ಕೂಲ್, ಉನ್ನತ ಧ್ಯೇಯೋದ್ದೇಶಗಳೊಂದಿಗೆ ಪುತ್ತೂರಿನ ಸುತ್ತಮುತ್ತಲಿನ ವಿದ್ಯಾಕಾಂಕ್ಷಿಗಳಿಗೆ ಕೇಂದ್ರೀಯ ಶಿಕ್ಷಣ ವ್ಯವಸ್ಥೆಯ, ಚಟುವಟಿಕೆ ಪೂರಕ ಮೌಲ್ಯಯುತ ಶಿಕ್ಷಣವನ್ನು ನೀಡುವ ಸದುದ್ದೇಶವನ್ನು ಹೊಂದಿದೆ. ಆದ್ದರಿಂದ, ಈ ಶೈಕ್ಷಣಿಕ ವರ್ಷದಲ್ಲಿ ನಡೆಯುವ, ವಿಶೇಷವಾದ ವಿವಿಧ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಮೇ.30 ರಂದು ಎಲ್‌ಕೆ.ಜಿ., 31ರಂದು 2, 3, 4, 5, 6, ಮತ್ತು 7ನೇ ತರಗತಿ, ಜೂ.13ರಂದು ಯು.ಕೆ.ಜಿ. ಮತ್ತು1 ನೇ ತರಗತಿಯ ಶಿಕ್ಷಕ- ರಕ್ಷಕರ ಸಭೆಯನ್ನು ಅಂತರ್ಜಾಲದ ಮೂಲಕ ನಡೆಸಲಾಯಿತು.

ಮುಖ್ಯಗುರು ವಿ.ಜಿ.ಸಿಂಧು ರವರು, ವರ್ಷ ಪೂರ್ತಿ ನಡೆಯುವ ಶಾಲಾ ಚಟುವಟಿಕೆಗಳು, ಆನ್‌ಲೈನ್ ತರಗತಿಗಳ ಬಗ್ಗೆ ಮಾಹಿತಿ ನೀಡಿ, ಹೆತ್ತವರ ಸಹಕಾರ ಕೋರಿದರು. ಶಿಕ್ಷಕಿ ವಿಶಾಲಾಕ್ಷಿಯವರು ಎಲ್.ಕೆ.ಜಿ. ಮಕ್ಕಳಿಗಿರುವ ಚಟುವಟಿಕೆ ಕೇಂದ್ರೀಕೃತ ಶಿಕ್ಷಣದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಮತ್ತು ಸದಸ್ಯರು, ಹೆತ್ತವರ ಉನ್ನತಮಟ್ಟದ ಶಿಕ್ಷಣದ ನಿರೀಕ್ಷೆಯನ್ನು ತಲಪಲು, ನಮ್ಮ ಸಂಸ್ಥೆಯು ಶಕ್ತಿ ಮೀರಿ ಶ್ರಮಿಸುತ್ತದೆ. ನಮ್ಮ ಶಿಕ್ಷಕ ವರ್ಗವು ಅದೇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೆತ್ತವರು ತಮ್ಮ ಮಕ್ಕಳ ಜವಾಬ್ದಾರಿಯನ್ನು ನಮಗೆ ವಹಿಸಿದ ಬಳಿಕ, ಆ ಮಗುವನ್ನು ಒಬ್ಬ ಸಂಸ್ಕಾರಯುತ, ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಆ ನಿಟ್ಟಿನಲ್ಲಿ ಸದಾ ಕಾರ್ಯ ನಿರ್ವಹಿಸುವೆವು. ಎಂಬ ಭರವಸೆಯನ್ನಿತ್ತರು. ಜೊತೆಗೆ ಸಕಲ ಆಧುನಿಕ ಸೌಲಭ್ಯಗಳನ್ನೊಳಗೊಂಡ ಶಾಲಾ ಕಟ್ಟಡದಲ್ಲಿ, ಶಿಕ್ಷಣದ ಜೊತೆಗೆ, ಮಕ್ಕಳ ಸರ್ವತೋಮುಖ ಏಳಿಗೆಗೆ ಪೂರಕವಾದ ವಿವಿಧ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಹೆತ್ತವರ ವಿವಿಧ ಪ್ರಶ್ನೆಗಳಿಗೆ ಶಿಕ್ಷಕಿಯರು ಸಮರ್ಪಕವಾಗಿ ಉತ್ತರಿಸಿ ಅವರ ಸಂದೇಹಗಳನ್ನು ನಿವಾರಿಸಿದರು. ಶಿಕ್ಷಕಿಯರಾದ, ಸಹನಾ, ಆಶಾ, ಮಲ್ಲಿಕಾ, ಪೂರ್ಣಿಮಾ ಮತ್ತು ವಿನಯ ರವರು ತಮ್ಮ ಪರಿಚಯ ಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.