HomePage_Banner
HomePage_Banner

ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣ – ಸೀಲ್‌ಡೌನ್ ಆತಂಕದಲ್ಲಿ ಗ್ರಾಮಸ್ಥರು…!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

ಪುತ್ತೂರು: ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪಂಚಾಯತ್ ವ್ಯಾಪ್ತಿಯ 6 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಮುಂಡೂರು ಗ್ರಾಮದ ಕಾಳಿಂಗಹಿತ್ಲುವಿನ 1 ಮನೆ, ಅಂಬಟದ 1 ಮನೆ, ಸರ್ವೆ ಗ್ರಾಮದ ಕುಡುರಸ್ತೆಯಲ್ಲಿ 2 ಮನೆ ಹಾಗೂ ಸರ್ವೆ ನನ್ನವನ ಎಂಬಲ್ಲಿ 2 ಮನೆಯನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಸೀಲ್‌ಡೌನ್ ಮಾಡುವ ಸಂದರ್ಭದಲ್ಲಿ ಮೆಸ್ಕಾಂ ಎಇಇ ಶಿಲ್ಪಾ ಶೆಟ್ಟಿ, ಸಿಡಿಪಿಓ ಶ್ರೀಲತಾ, ಮುಂಡೂರು ಗ್ರಾ.ಪಂ ಕಾರ್ಯದರ್ಶಿ ಸುರೇಶ್ ನಾಯ್ಕ, ಸಿಬ್ಬಂದಿಗಳಾದ ದೇವಪ್ಪ ನಾಯ್ಕ ಕೇದಗೆದಡಿ ಹಾಗೂ ಕವಿತಾ ಉಪಸ್ಥಿತರಿದ್ದರು.

ಗ್ರಾ.ಪಂ ಸೀಲ್‌ಡೌನ್ ಆತಂಕ:
50ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಸೀಲ್‌ಡೌನ್ ಮಾಡುವ ಬಗ್ಗೆ ವಾರದ ಹಿಂದೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದು ಅದರಂತೆ ಜಿಲ್ಲೆಯ ಅನೇಕ ಗ್ರಾ.ಪಂಗಳು ಸೀಲ್‌ಡೌನ್ ಆಗಿದೆ. ಸ್ಥಳೀಯವಾಗಿ ಸವಣೂರು ಗ್ರಾ.ಪಂ ಕೂಡಾ ಈಗಾಗಲೇ ಸೀಲ್‌ಡೌನ್ ಆಗಿದೆ. ಇದೀಗ ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಳಗೊತ್ತಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಲಿದೆಯೇ ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಈಗಾಗಲೇ ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ 41 ಸಕ್ರಿಯ ಪ್ರಕರಣಗಳಿದ್ದು ಇದು ಇನ್ನಷ್ಟು ಹೆಚ್ಚಳವಾಗಲಿದೆಯೇ ಎನ್ನುವ ಆತಂಕ ಗ್ರಾಮದ ಜನರನ್ನು ಕಾಡುತ್ತಿದೆ. ಕೆಲವೇ ವಾರಗಳ ಮೊದಲು ಪಂಚಾಯತ್ ವ್ಯಾಪ್ತಿಯಲ್ಲಿ ಕೇವಲ 6 ಪಾಸಿಟಿವ್ ಕೇಸ್ ಮಾತ್ರ ಪತ್ತೆಯಾಗಿದ್ದು ಇದೀಗ ದಿಢೀರ್ ಏರಿಕೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.