HomePage_Banner
HomePage_Banner

ತಾಲೂಕು ಅಂಗನವಾಡಿ ಕಾರ್ಯಕರ್ತರಿಗೆ ಕಂಬಳ ಸಮಿತಿ ವತಿಯಿಂದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಂಗನವಾಡಿ ಕಾರ್ಯಕರ್ತರ ಸೇವೆ ಸರಕಾರಿ ನೌಕರರ ಸೇವೆಗಿಂತ ಕಡಿಮೆಯಿಲ್ಲ-ಸೊರಕೆ

ಪುತ್ತೂರು: ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪುತ್ತೂರು ಮತ್ತು ಕೋಟಿ ಚೆನ್ನಯ ಕಂಬಳ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ಆಹಾರ ಕಿಟ್ ಹಾಗೂ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನೌಕರರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮವು ಜೂ.೧೭ರಂದು ಬೊಳುವಾರಿನಲ್ಲಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕರ್ನಾಟಕ ಸರಕಾರದ ಮಾಜಿ ಸಚಿವರು, ಪುತ್ತೂರಿನ ಮಾಜಿ ಶಾಸಕರು, ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿ ಮಾತನಾಡುತ್ತಾ ಅಂಗನವಾಡಿ ಕಾರ್ಯಕರ್ತರು ಸಮಾಜದ ಆರೋಗ್ಯ ಕಾಪಾಡುವಲ್ಲಿ ಅವರ ಸೇವೆ ಶ್ಲಾಘನೀಯವಾಗಿದ್ದು ಅವರ ಸೇವೆಯು ಸಹಕಾರಿ ನೌಕರರ ಸೇವೆಗಿಂತ ಕಡಿಮೆಯಿಲ್ಲ. ಇಂತಹ ಸಂದರ್ಭದಲ್ಲಿ ಅವರ ಗೌರವಧನ ಹೆಚ್ಚಾಗಬೇಕು ಎಂದು ಅವರು ಹೇಳಿದರು. ಮಹಿಳೆ ಮನೆಗೆ ಮಾತ್ರ ಸೀಮಿತವಾದಂತ ಪರಿಸ್ಥಿತಿಯಲ್ಲಿ ಮಹಿಳೆಯರನ್ನು ಅಂಗನವಾಡಿಯ ಮೂಲಕ ಸ್ತ್ರೀಶಕ್ತಿ ಕಾರ್ಯಕ್ರಮ ಅಳವಡಿಸಿಕೊಂಡು ದೇಶದಲ್ಲಿ ಸ್ತ್ರೀಶಕ್ತಿ ದೊಡ್ಡ ಶಕ್ತಿಯಾಗಿ ಮೂಡಿಬರಲು ಅಂಗನವಾಡಿಯ ಕಾರ್ಯಕರ್ತರ ಸೇವೆ ಅತ್ಯುನ್ನತ್ತವಾಗಿದೆ ಎಂದು ಅವರು ಹೇಳಿದರು. ಅಂಗನವಾಡಿಯ ಮೂಲಕ ಸಮಾಜದ ಕಟ್ಟ ಕಡೆಯ ಮಕ್ಕಳು ಕೂಡ ಶಾರೀರಿಕ ಬೆಳವಣಿಗೆ ಹೊಂದಬೇಕು, ಉತ್ತಮ ಆರೋಗ್ಯ ಭ್ಯಾಗ ದೊರಕುವಂತಾಗಬೇಕು ಎಂಬ ದೃಷ್ಟಿಯಿಂದ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಅಂಗನವಾಡಿ ಯೋಜನೆಯನ್ನು ಅನುಷ್ಠಾನಕ್ಕೆ ತಂದರು. ೧೯೮೯ರಲ್ಲಿ ಪುತ್ತೂರಿನ ಆಗಿನ ಶಾಸಕರಾಗಿದ್ದ ವಿನಯ್‌ಕುಮಾರ್ ಸೊರಕೆ ಕಾಲದಲ್ಲಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಪ್ರಪ್ರಥಮ ಬಾರಿಗೆ ಪ್ರಾರಂಭಿಸಲಾಯಿತು. ಇಂದು ಈ ಸಂಸ್ಥೆ ಬೃಹದ್ದಾಕಾರವಾಗಿ ಬೆಳೆದು ಬಂದಿದೆ ಎಂದು ಅವರು ಹೇಳೀದರು. ಕೊರೊನಾ ರೋಗವು ಇಡೀ ಜಗತ್ತಿಗೆ ಬಂದ ಮಹಾಮಾರಿ ರೋಗವಾಗಿದೆ. ಇದು ಜಾತಿ, ಮತ, ಪಕ್ಷ, ಬಡವ, ಶ್ರೀಮಂತ ಎಂಬ ಭೇದ ಭಾವ ಮಾಡದೆ ಕೋಟ್ಯಂತರ ಜನರಿಗೆ ತಗಲಿದೆ. ಇದರಿಂದ ಅದೆಷ್ಟೋ ಜನರು ಪ್ರಾಣ ಕಳಕೊಂಡು ಲಕ್ಷಾಂತರ ಕುಟುಂಬಗಳು ತಬ್ಬಲಿಯಾಗಿದೆ ಹಾಗೂ ಬೀದಿಪಾಲಾಗಿದೆ. ನಮ್ಮ ಒಂದು ಸಣ್ಣ ತಪ್ಪಿನಿಂದ ಅಂಕಿ ಅಂಶಗಳ ಪ್ರಕಾರ ೧೦ಲಕ್ಷಕ್ಕೂ ಮಿಕ್ಕಿ ರಾಜ್ಯದಲ್ಲಿ ಕೊರೊನಾ ರೋಗದಿಂದ ಸಾವನ್ನಪ್ಪಿದ್ದಾರೆ. ಆದರೆ ಕೇವಲ ೩.೫ಲಕ್ಷ ಜನರು ಕೊರೊನಾದಿಂದ ಮೃತಪಟ್ಟಿರುವುದಾಗಿ ಲೆಕ್ಕ ನೀಡಿದ್ದಾರೆ. ಇಂತಹ ಮಹಾಮಾರಿ ರೋಗವನ್ನು ಕೊನೆಗಾಣಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಗಂಗಾನದಿ ಶುದ್ದೀಕರಿಸಲು ಇಪ್ಪತ್ತು ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಗಂಗಾನದಿಯಲ್ಲಿ ಶವಗಳು ತೇಲುತ್ತಾ ಬರುತ್ತಿದೆ. ನಾಯಿಗಳು ಶವವನ್ನು ಕಚ್ಚಿ ತಿನ್ನುವ ಸನ್ನಿವೇಷ ಇಂದು ಮಾಧ್ಯಮದಲ್ಲಿ ಪ್ರಕಟವಾಗುತ್ತಿದೆ. ಇದು ಎಂಥ ವಿಪರ್‍ಯಾಸ ಎಂದು ಅವರು ಹೇಳಿದರು. ಒಂದನೇ ಅಲೆ ಬಂದ ಸಂದರ್ಭದಲ್ಲಿ ೨ನೇ ಅಲೆಗೆ ನಾವು ಯಾವ ರೀತಿಯ ತಯಾರು ಮಾಡಲಿಲ್ಲ. ಇಂದು ಹೈಕೋರ್ಟ್ ಆಕ್ಸಿಜನ್ ನೀಡಿ, ವೆಂಟಲೇಟರ್ ನೀಡಿ ಎಂದು ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದ್ದೆ. ಇದರ ವಿರುದ್ದ ಕೇಂದ್ರ ಸರಕಾರವು ಅಫಿದಾವತು ಹಾಕಿದೆ. ಆದರೆ ಸುಪ್ರೀಂಕೋರ್ಟ್ ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತೆ ಆದೇಶಿಸುವಂತಾಗಿದೆ. ಇದರಿಂದ ಕೊರೊನಾ ನಿಭಾಯಿಸುವಲ್ಲಿ ಸರಕಾರವು ವಿಫಲಗೊಂಡಿದೆ ಎಂದು ಅವರು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಕಷ್ಟವನ್ನು ಮನಗಂಡು ಅವರಿಗೆ ಇಂತಹ ಕಿಟ್ ನೀಡಲು ಮುಂದೆ ಬಂದತಹ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪುತ್ತೂರು ಕಂಬಳ ಸಮಿತಿ ಹಾಗೂ ಇನ್ನಿತರ ಸಹಕಾರಿ ಸಂಘಗಳು ಕೃತಜ್ಞತೆ ಸಲ್ಲಿಸಿ ಮುಂದೆಯೂ ಇಂತಹ ಸೇವೆ ಮಾಡಲು ಮುಂದೆ ಬರುವಂತಹ ಕೆಲಸ ಆಗಲಿ ಎಂದು ಅವರು ಹೇಳಿದರು.

ಸರಕಾರ ಗುರುತಿಸದಿದ್ದರೂ ಅಂಗನವಾಡಿ ಕಾರ್ಯಕರ್ತರನ್ನು ನಾವು ಗುರುತಿಸುತ್ತೇವೆ-ಶಕುಂತಳಾ ಶೆಟ್ಟಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಕುಂತಳಾ ಶೆಟ್ಟಿ ಮಾತನಾಡಿ ಅಂಗನವಾಡಿ ಕಾರ್ಯಕರ್ತರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಪ್ರತಿಯೊಂದು ಮನೆಯಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. ರಾತ್ರಿ ಹಗಲೆನ್ನದೆ ಸೇವೆ ಮಾಡುತ್ತಿರುವ ಇವರನ್ನು ಸರಕಾರವು ಸರಿಯಾಗಿ ಗುರುತಿಸದಿದ್ದರೂ ನಾವು ನಿಮ್ಮನ್ನು ಗುರುತಿಸುತ್ತೇವೆ ಎಂದು ಅವರು ಹೇಳಿದರು. ಕೆಲವು ದಿನಗಳ ಹಿಂದೆ ನಗರದ ಆಶಾ ಕಾರ್ಯಕರ್ತೆಯರಿಗೆ ಕಿಟ್‌ನ್ನು ವಿತರಿಸಲಾಗಿದ್ದು ಹಾಗೂ ಅಂಗನವಾಡಿ ಕಾರ್ಯಕರ್ತರು ಸಂಖ್ಯೆ ಜಾಸ್ತಿ ಇದ್ದುದರಿಂದ ಆ ಸಂದರ್ಭದಲ್ಲಿ ಅವರಿಗೆ ಕಿಟ್‌ನ್ನು ವಿತರಿಸಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲರ ಸಹಕಾರದಿಂದ ಕಿಟ್‌ನ್ನು ವಿತರಿಸಲಾಗಿದೆ. ಇದು ಕಿಂಚಿತ್ತು ಸೇವೆಯಾದರೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾಜದಲ್ಲಿ ಇನ್ನಷ್ಟು ಕೆಲಸಕಾರ್‍ಯಗಳನ್ನು ಮಾಡಲು ಉತ್ತೇಜನಕವಾಗಲಿದೆ ಎಂದು ಅವರು ಹೇಳಿದರು. ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಕೆಲಸಕ್ಕೆ ಸರಿಯಾಗಿ ವೇತನ ಸಿಗದಿದ್ದಾಗ ನಾನು ಅವರ ವೇತನವನ್ನು ೨೦೦೦ರೂಪಾಯಿಗೆ ಏರಿಸುವಲ್ಲಿ ಶ್ರಮಿಸಿದ್ದೇನೆ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಅಮೆಚೂರ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ನಿರ್ಪಾಜೆ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಗಂಗಾಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಪದಾಧಿಕಾರಿ ಹಾಗೂ ದ.ಕ.ಜಿಲ್ಲಾ ಪ್ರಧಾನ ಕಾರ್‍ಯದರ್ಶಿಯಾಗಿರುವ ಮುರಳೀಧರ ರೈ ಮಠಂತಬೆಟ್ಟುರವರು ಕಾರ್‍ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಕಾರಿ ಸಂಘದ ಸದಸ್ಯೆ ಅರುಣಾ ಬೀರಿಗರವರು ವಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಮ್ ಡಿಸೋಜ, ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್‍ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬನ್ನೂರು ಸೇವಾ ಸಹಕಾರಿ ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಗೌಡ ಹನಿಯೂರು, ಕಾಂಗ್ರೆಸ್ ಮುಖಂಡ ಶಿವರಾಮ ಆಳ್ವ, ನಗರಸಭಾ ಸದಸ್ಯ ರಿಯಾಜ್, ರೋಶನ್ ರೈ ಬನ್ನೂರು, ವಿಕ್ರಂ ಶೆಟ್ಟಿ ಹಂತರ, ಶರೋನ್ ಸಿಕ್ವೇರಾ, ರಶೀದ್ ಮುರ, ಹಸೈನಾರ್ ಬನಾರಿ, ವಿಕ್ಷರ್ ಪಾಸ್, ದೀರಜ್ ಗೌಡ ಕೊಡ್ಯಾಡಿ, ಮೌರಿಸ್ ಮಸ್ಕರೇನಸ್, ಸಿರಿಲ್ ಮಸ್ಕರೇನಸ್, ಪ್ರಣಮ್ ಕೈಕಾರ, ದಯಾನಂದ ಶೆಟ್ಟಿ ಕೈಕಾರ, ಕಾಂಗ್ರೆಸ್ ಮುಖಂಡ ಶಿವgಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಪುತ್ತೂರು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಯೋಗೀಶ್ ಸಾಮಾನಿ, ಕೃಷ್ಣ ಶರ್ಮ, ದಿನೇಶ್ ಪಿ.ವಿ, ಶರತ್ ಕೇಪುಳು, ಸಿಮ್ರಾನ್, ಎಪಿಎಂಸಿ ನಿರ್ದೇಶಕ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಮೊದಲಾದವರು ಸಹಕರಿಸಿದರು.

ಶಕುಂತಳಾ ಶೆಟ್ಟಿ ಪ್ರೇರಣೆ-ಚಂದ್ರಹಾಸ ಶೆಟ್ಟಿ
ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಂಬಳ ಸಮಿತಿ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನವರು ಈ ಕಾರ್‍ಯಕ್ರಮ ಹಮ್ಮಿಕೊಳ್ಳಲು ನಮಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರೇರಣೆಯಾಗಿದ್ದಾರೆ. ಈ ಎರಡು ಸಂಸ್ಥೆಗಳಲ್ಲದೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಅಭಿಮಾನಿಗಳಾದ ಪಂಜಿಗುಡ್ಡೆ ಈಶ್ವರ ಭಟ್, ಅಜಿತ್ ಶೆಟ್ಟಿ ಬೆಂಗಳೂರು, ಶಿವರಾಮ ಆಳ್ವ ಕುರಿಯ, ರತ್ನಾಕರ ನಾಯ್ಕ್, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ರೋಶನ್ ರೈ ಬನ್ನೂರುರವರು ತನು-ಮನದಿಂದ ಸಹಕರಿಸಿದ್ದಾರೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಚಂದ್ರಹಾಸ ಶೆಟ್ಟಿಯವರು ತಿಳಿಸಿದರು.

೨೧೫ ಅಂಗನವಾಡಿ ೪೩೦ಕಾರ್ಯಕರ್ತರಿಗೆ ಕಿಟ್ ವಿತರಣೆ, ನೌಕರರಿಗೆ ಮಾಸ್ಕ್ ವಿತರಣೆ
ಪುತ್ತೂರು ತಾಲೂಕಿನ ೨೧೫ ಅಂಗನವಾಡಿಯ ೪೩೦ ಕಾರ್ಯಕರ್ತರಿಗೆ ರೇಷನ್ ಸಾಮಾಗ್ರಿಗಳನೊಳಗೊಂಡ ಕಿಟ್ ವಿತರಿಸಲಾಯಿತು. ಹಾಗೂ ಬನ್ನೂರು ರೈತ ಸೇವಾ ಸಹಕಾರಿ ಸಂಘದ ನೌಕರರಿಗೆ ಮಾಸ್ಕನ್ನು ವಿತರಿಸಲಾಯಿತು. ಬನ್ನೂರು ರೈತರ ಸೇವಾ ಸಹಕಾರ ಸಂಘದ ಪರವಾಗಿ ಆಡಳಿತ ಅಧಿಕಾರಿ ಗೋಪಾಲಕೃಷ್ಣ ಭಟ್ ಹಾಗೂ ವ್ಯವಸ್ಥಾಪಕಿ ರಾಧಾ ಬಿ.ರೈಯವರು ವಿನಂii ಕುಮಾರ್ ಸೊರಕೆಯವರಿಂದ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.