HomePage_Banner
HomePage_Banner

ನೆಟ್ಟಣ : ಆಟೋ ರಿಕ್ಷಾ ಚಾಲಕರಿಗೆ ಅರೋಗ್ಯ ರಕ್ಷಾ ಪರಿಕರಗಳ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ನೆಟ್ಟಣ ಸಂತ ಮೇರಿಸ್ ಚರ್ಚ್ ವತಿಯಿಂದ, ಕೋವಿಡ್ ಕೇರ್ ತಂಡದ ನೇತೃತ್ವದಲ್ಲಿ ನೆಟ್ಟಣ ಮತ್ತು ಬಿಳಿನೆಲೆ ಆಟೋ ಚಾಲಕರಿಗೆ ಅರೋಗ್ಯ ರಕ್ಷಾ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಧರ್ಮಗುರು ಫಾ. ಆದರ್ಶ್ ಜೋಸೆಫ್ ಆಟೋ ರಿಕ್ಷಾ ಚಾಲಕರು ಯಾವುದೇ ತುರ್ತು ಸಂದರ್ಭದಲ್ಲಿ ತಮ್ಮ ಅರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ದುಡಿಯುವವರಾಗಿದ್ದು, ಕೋವಿಡ್ ವಾರಿಯರ್ಸ್ ಆಗಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸವ ಕಾರ್ಯ ಚಾಲಕರಿಂದ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವ ಶಂಕರ್ ಅವರು ಮಾತನಾಡಿ ಆಟೋ ಚಾಲಕರು ನೀಡುವ ಸೇವೆಯನ್ನು ಶ್ಲಾಘಿಸಿದರು. ಅಲ್ಲದೆ ಎಲ್ಲರೂ ಜಾಗೃತರಾಗಿ ನಮ್ಮ ಗ್ರಾಮವನ್ನು ಆದಷ್ಟು ಬೇಗ ಕೊರೊನಾ ಮುಕ್ತ ವಾಗಿಸಬೇಕೆಂದು ಕರೆ ನೀಡಿದರು. ಶ್ರೀ ಪ್ರಸಾದ್ ನೆಟ್ಟಣ, ಹಾಗೂ ರವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋವಿಡ್ ಕೇರ್ ತಂಡದ ಸದಸ್ಯರು ಸಹಕರಿಸಿದರು. ವಿಜೇಶ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.