HomePage_Banner
HomePage_Banner

ಅನ್ಯಕೋಮಿನ ಜೊತೆ ಆಸ್ಪತ್ರೆಗೆ ಬಂದ ವಿಚಾರ ಯುವತಿ, ಯುವಕರನ್ನು ಠಾಣೆಗೆ ಒಪ್ಪಿಸಿದ ಹಿಂಜಾವೇ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು : ಅನ್ಯಕೋಮಿನ ಜೊತೆ ಆಸ್ಪತ್ರೆಗೆ ಬಂದಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿ ಯುವತಿ ಮತ್ತು ಯುವಕರನ್ನು ಹಿಂದು ಜಾಗರಣ ವೇದಿಕೆ ಠಾಣೆಗೆ ಒಪ್ಪಿಸಿದ ಘಟನೆ ಜೂ.೧೭ ರಂದು ನಡೆದ ಬಗ್ಗೆ ವರದಿಯಾಗಿದೆ.
ಪುತ್ತೂರು ಸರಕಾರಿ ಆಸ್ಪತ್ರೆಗೆ ಕಾರಿನಲ್ಲಿ 4 ಜನ ಬಂದಿದ್ದರು ಇದರಲ್ಲಿ ಒಂದು ಸಮುದಾಯಕ್ಕೆ ಸಂಬಂಧಿಸಿದ 2 ಮಂದಿ ಯುವಕರು, ಯುವತಿ  ಜೊತೆ  ಅನ್ಯ ಧರ್ಮದ ಯುವತಿ ಇದ್ದರೆಂಬ ವಿಚಾರದಲ್ಲಿ ಬಿಗುವಿನ ವಾತಾವರಣ  ಉಂಟಾಗಿ ಸ್ಥಳಕ್ಕೆ ಆಗಮಿಸಿದ  ಹಿಂದು ಜಾಗರಣ ವೇದಿಕೆ ಯ ಕಾರ್ಯಕರ್ತರು ಅವರನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಅವರವರ ಮನೆಯವರಿಗೆ ವಿಷಯ ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಯುವತಿ ಮನೆಯವರಿಗೆ ಗೊತ್ತಿದ್ದೆ ಆಸ್ಪತ್ರೆಗೆ ಕಳಿಸಿದ್ದು:
ಆಸ್ಪತ್ರೆಗೆ ಬಂದಿದ್ದವರು ವಿಟ್ಲ ಮೂಲದವರಾಗಿದ್ದು ಒಂದು  ಮಹಿಳೆಯೊಬ್ಬರಿಗೆ ವೈದ್ಯಕೀಯ ಪರೀಕ್ಷೆಗಾಗಿ ಆ ಧರ್ಮದ ಮನೆಯವರೊಂದಿಗೆ ಪುತ್ತೂರು ಆಸ್ಪತ್ರೆಗೆ ಹೊರಟಾಗ ಅನ್ಯಧರ್ಮೀಯ ಯುವತಿಗೂ‌ ಅನಾರೋಗ್ಯದ ಹಿನ್ನಲೆಯಲ್ಲಿ  ಆಕೆಯ ಮನೆಯವರೇ ಅವರೊಂದಿಗೆ ಕಳುಹಿಸಿರುವುದಾಗಿ  ಯುವತಿ ತಂದೆಯೇ ನಮಗೆ ತಿಳಿಸಿದ್ಸಾರೆ. ಈ ನಿಟ್ಟಿನಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.