HomePage_Banner
HomePage_Banner

ಕೋವಿಡ್ -19 ಗೆ ಚೆಕ್ ಪಾಯಿಂಟ್ ಪೊಲೀಸ್ ಸಿಬ್ಬಂದಿಗಳ ಹಸಿವನ್ನು ನೀಗಿಸಿದ ಸಾರ್ವಜನಿಕ ಬಂಧುಗಳಿಗೆ ಟ್ರಾಫಿಕ್ ಪೊಲೀಸರಿಂದ ಕೃತಜ್ಞತೆ ಸಲ್ಲಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ -19 ಸಂದರ್ಭದಲ್ಲಿ ಚೆಕ್ ಪಾಯಿಂಟ್ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳ ಹಸಿವನ್ನು ನೀಗಿಸಿದ ಸಾರ್ವಜನಿಕ ಬಂಧುಗಳನ್ನು ಪುತ್ತೂರು ಸಂಚಾರ ಪೊಲೀಸರು ಅಭಿನಂದಿಸುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಕೋವಿಡ್-19 ಸೋಂಕು ಹರಡುತ್ತಿರುವ ಸಂದರ್ಭ ಜನತಾ ಕರ್ಫ್ಯೂ ಆರಂಭವಾದದಿಂನಿಂದ ಪುತ್ತೂರು ನಗರಸಭೆ ವ್ಯಾಪ್ತಿಯ ವಿವಿಧ ಕಡೆ ಪೊಲೀಸರು ಚೆಕ್‌ಪಾಯಿಂಟ್ ಕರ್ತವ್ಯದಲ್ಲಿರುವ ವೇಳೆ ನಿತ್ಯ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಅವರಿಗೆ ರೋಗ ನಿರೋಧಕ ಶಕ್ತಿಯುಳ್ಳ ಕಷಾಯ, ಚಹಾ ಕಾಫಿ, ಊಟೋಪಚಾರ ಒದಗಿಸುತ್ತಿದ್ದ ಸಂಘ ಸಂಸ್ಥೆಯ ಒಟ್ಟು ಸಾರ್ವಜನಿಕ ಬಂಧುಗಳಿಗೆ ಪುತ್ತೂರು ಸಂಚಾರ ಪೊಲೀಸರು ಅವರವರ ಸಂಸ್ಥೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಎಸ್.ಐ ರಾಮ ನಾಯ್ಕ್ ಅವರು ಸಹಕರಿಸಿದ ಪ್ರಮುಖರಿಗೆ ಹಾರಾರ್ಪಣೆ ಮಾಡಿ ಅಭಿನಂದಿಸಿದರು.

ಕೋವಿಡ್ ಸಂದರ್ಭದಲ್ಲಿ ನಿಡ್ಡೋಡಿಯ ಪದ್ಮಶ್ರೀ ಭಟ್ ಅವರ ನೇತೃತ್ವದಲ್ಲಿ ‘ಆರದಿರಲಿ ಬದುಕು’ ಎಂಬ ಆರಾಧನಾ ಟೀಮ್‌ನಿಂದ ನವೀನ್ ಮತ್ತು ಸಾಲಿ ಅವರಿಂದ ಮಧ್ಯಾಹ್ನದ ಊಟದ ವ್ಯವಸ್ಥೆ, ಮುಳಿಯ ಜ್ಯುವೆಲ್ಸ್ ಸಂಸ್ಥೆಯಿಂದ ಮುಳಿಯ ಕೇಶವ ಭಟ್ ನೇತೃತ್ವದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಶಂಕರ್‌ನಾರಾಯಣ, ಸುಬ್ರಾಯ ಶರ್ಮ, ದಿವಾಕರ್, ಶಂಕರ್ ನಾರಾಯಣ, ರಮೇಶ್ ಉಪಾಧ್ಯಾಯ, ಶೇಖರ್, ಪ್ರಶಾಂತ್, ಮಹೇಂದ್ರ, ಧನೇಶ್ ಅವರ ಸಹಕಾರದೊಂದಿಗೆ ಬೆಳಗ್ಗಿನ ಚಹಾ ತಿಂಡಿ ವ್ಯವಸ್ಥೆ, ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಪ್ರಭಾ ವಿ ಶಂಕರ್ ಅವರ ನೇತೃತ್ವದಲ್ಲಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರಿತಿಕಲಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಅವರಿಂದ ಬೆಳಿಗ್ಗೆ ಮಧ್ಯಾಹ್ನ ಸಂಜೆ ಕಷಾಯ, ವೆಜ್ ಸೂಪ್, ತಿಂಡಿಗಳ ವ್ಯವಸ್ಥೆ, ಪೈ ಕೆಟರಿಂಗ್‌ನ ದಿನೇಶ್ ಪೈ ಮತ್ತು ದೀಕ್ಷಾ ಪೈ ದಂಪತಿಯಿಂದ ಸಂಜೆ ಚಹಾ ತಿಂಡಿ ವ್ಯವಸ್ಥೆ, ಮೆಡಿಕಲ್ ಅಸೋಸಿಯೇಷನ್‌ನ ಮುತ್ತುರಾಜ್, ಪುರುಷೋತ್ತಮ, ಪ್ರಶಾಂತ್ ಅವರಿಂದ ಮಧ್ಯಾಹ್ನದ ಊಟದ ಬಳಿಕ ಚಹಾ ವ್ಯವಸ್ಥೆ, ಹೊಟೇಲ್ ದಿನೇಶ್ ಭವನದಲ್ಲಿ ಗಿರಿಧರ ಶೆಣೈ, ನಿತಿನ್, ಸಚಿನ್ ಶೆಣೈ ಅವರಿಂದ ಪೊಲೀಸರಿಗೆ ಊಟೋಪಚಾರ, ಚಹಾ ತಿಂಡಿ ವ್ಯವಸ್ಥೆ ಮಾಡುತ್ತಿರುವುದನ್ನು ಗುರುತಿಸಿದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗಳು ಅವರಿಗೆಲ್ಲ ಅಭಿನಂದನೆ ಸಲ್ಲಿಸಿದರು. ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸ್ಕರೀಯ, ಶಿವಪ್ರಸಾದ್, ಚಂದ್ರ, ನಿವೃತ್ತ ಎ.ಎಸ್.ಐ ಸುರೇಶ್ ಶರ್ಮ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.