HomePage_Banner
HomePage_Banner

ವಿಟ್ಲದಲ್ಲಿ ಎರಡನೇ ದಿನವೂ ಮುಂದುವರಿದ ತಪಾಸಣೆ-ಜನಸಂಚಾರ ವಿರಳ ;  132 ಮಂದಿಯ ಗಂಟಲ ದ್ರವ ಸಂಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ‌ ತುರ್ತು ಸಭೆಯ ನಿರ್ಣಯದಂತೆ ಎರಡನೇ ದಿನವಾದ ಜೂ.18ರಂದು ವಿಟ್ಲದ ನಾಲ್ಕು ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಗಳನ್ನು ತೆರೆಯಲಾಗಿದ್ದು, ಪೇಟೆಗೆ ಆಗಮಿಸಿದವರ ಪೈಕಿ ಒಟ್ಟು 132 ಮಂದಿಯ ಗಂಟಲ ದ್ರವವನ್ನು ಸಂಗ್ರಹಿಸಿ ಸ್ವೇಬ್ ಟೆಸ್ಟ್ ಗೆ ಒಳಪಡಿಸಲಾಯಿತು.

ವಿಟ್ಲ ಪಟ್ಟಣ ಪಂಚಾಯತ್ ಕೊರೊನಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದ್ದು, ಪ್ರತಿದಿನ ಪೇಟೆಗೆ ಬರುವ ಜನರನ್ನು ವಿಟ್ಲ ಪೇಟೆಯ ಪ್ರವೇಶ ಸ್ಥಳವಾದ ನಾಡಕಚೇರಿ, ಮೇಗಿನಪೇಟೆ, ಬೊಬ್ಬೆಕೇರಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ವಿಟ್ಲ ಪೊಲೀಸರು ಜಂಟಿಯಾಗಿ ಚೆಕ್ ಪಾಯಿಂಟ್ ತೆರೆದು ವಿಚಾರಣೆ ನಡೆಸಿದ್ದಾರೆ. ವಿಟ್ಲ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ನಾಡಕಚೇರಿ, ಮೇಗಿನಪೇಟೆ ಮೂರು ಕಡೆಗಳಲ್ಲಿ ವಿಟ್ಲ ಸಮುದಾಯ ಆರೋಗ್ಯದ ಕೇಂದ್ರದ ಮತ್ತು ಅಳಿಕೆಯ ಸಿಬ್ಬಂದಿಗಳು ಸ್ವೇಬ್ ಟೆಸ್ಟ್ ನಡೆಸಿದರು.

ಜೂ.17ರಂದು 80 ಮಂದಿಯನ್ನು ಹಾಗೂ ಜೂ.೧೮ರಂದು 132 ಮಂದಿ ಸೇರಿದಂತೆ ಒಟ್ಟು 212 ಮಂದಿಯ ಸ್ವೇಬ್ ಟೆಸ್ಟ್ ನಡೆಸಲಾಗಿದೆ. ಪ್ರಥಮ ದಿನಕ್ಕೆ ಹೋಲಿಕೆ ಮಾಡಿದರೆ ಎರಡನೇ ದಿನವಾದ ಜೂ.18ರಂದು ವಿಟ್ಲ ಪೇಟೆಯಲ್ಲಿ ಜನಸಂಖ್ಯೆ ವಿರಳವಾಗಿತ್ತು. ಹತ್ತುಗಂಟೆಯ ವರೆಗೆ ನಾಲ್ಕು ಚೆಕ್ ಪಾಯಿಂಟ್ ಗಳಲ್ಲಿ ತಪಾಸಣೆ ನಡೆಲಾಗಿದೆ ಆದರೂ ಆ ಬಳಿಕ ತಪಾಸಣೆ ನಡೆಸುತ್ತಿರುವುದು ಕಂಡುಬಂದಿಲ್ಲ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.