HomePage_Banner
HomePage_Banner

ಭಾರತೀಯ ಅಂಚೆ ಇಲಾಖೆಯಿಂದ ಸಪ್ತಮ ವರ್ಷದ ಯೋಗದ ಕಂಪಿಗೆ ವಿಶೇಷ – ಚಿತ್ರಾತ್ಮಕ ವಿನ್ಯಾಸದ ಮೊಹರು ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ವಿಭಾಗದಲ್ಲಿ ಅಂಚೆ ಚೀಟಿ ಸಂಗ್ರಹಣಾ ಖಾತೆ ತೆರೆಯಲು ಅವಕಾಶ

ಪುತ್ತೂರು: ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 21ನೇ ದಿನಾಂಕವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿವಸವನ್ನಾಗಿ ಆಚರಿಸುತ್ತಿದ್ದು, ಈ ಯೋಗದ ಕಂಪನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆಯು ವಿಶಿಷ್ಟ ಮೊಹರನ್ನು ಬಿಡುಗಡೆಗೊಳಿಸುತ್ತಿದೆ. ಸಪ್ತಮ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ಮರಣೀಯವಾಗಿಸುವ ಸಲುವಾಗಿ ವಿಶಿಷ್ಟ ಮೊಹರಿನ ಬಿಡುಗಡೆಯು ಒಂದು ವಿಶೇಷ ಪ್ರಯತ್ನವಾಗಿದೆ ಎಂದು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಪ್ರಕಟಣೆ ನೀಡಿದೆ.
ಭಾರತೀಯ ಅಂಚೆಯು ತನ್ನ 810 ಪ್ರಧಾನ ಅಂಚೆ ಕಛೇರಿಗಳಲ್ಲಿ ಈ ವಿಶೇಷ ಚಿತ್ರಾತ್ಮಕ ವಿನ್ಯಾಸವಿರುವ ಮೊಹರನ್ನು ಒಮ್ಮೆಲೇ ಬಿಡುಗಡೆಗೊಳಿಸುತ್ತದೆ. ಪ್ರಧಾನ ಅಂಚೆ ಕಛೇರಿಯಲ್ಲಿ ಸ್ವೀಕೃತವಾಗುವ ಮತ್ತು ಬಟವಾಡೆಯಾಗುವ ಎಲ್ಲಾ ಅಂಚೆ ಪತ್ರ ಮತ್ತು ಭಾಂಗಿಗಳ ಮೇಲೂ 21.06.2021 ರಂದು ವಿಶಿಷ್ಟ ಮೊಹರಿನ ಮುದ್ರೆಯು ಒತ್ತಲ್ಪಡುತ್ತದೆ. ಈ ವಿಶಿಷ್ಟ ಚೈತ್ರಿಕ ಮೊಹರು ಶಾಯಿಯಿಂದ ಮುದ್ರಿಸಲ್ಪಡುವುದು, ಚಿತ್ರಾತ್ಮಕವಾಗಿರುವುದು, ಮತ್ತು ಮೊಹರಿನಲ್ಲಿ ‘ಅಂತರಾಷ್ಟ್ರೀಯ ಯೋಗ ದಿವಸ 2021’ ಎಂಬ ಬರಹವು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಿಂದ ಕೂಡಿರುತ್ತದೆ. ಒಮ್ಮೆ ಲಗತ್ತಿಸಿದ ಅಂಚೆ ಚೀಟಿಯು ಪುನ: ಬಳಸಲ್ಪಡಬಾರದೆಂಬ ನಿಟ್ಟಿನಲ್ಲಿ ಲಗತ್ತಿಸಿದ ಆ ಚೀಟಿಯ ಮೇಲೆ ಈ ವಿಶಿಷ್ಟ ಮೊಹರಿನ ಮುದ್ರೆಯೊತ್ತಲಾಗುವುದು.

ಇಂತಹ ಮೊಹರು ಮತ್ತು ಮುದ್ರೆಯು ಅಂಚೆ ಚೀಟಿ ಸಂಗ್ರಹಣಾಕಾಂಕ್ಷಿಗಳಿಗೆ ಸಂಗ್ರಹಣೆಗೆ ಲಭ್ಯವಾಗುವುದು, ಮತ್ತು ಅಂಚೆ ಚೀಟಿ ಸಂಗ್ರಹಣೆಯ ಬಗ್ಗೆ ಜ್ನಾನಾಭಿವೃದ್ಧಿಗೂ ಸಹಕಾರಿಯಾಗಿರುವುದು. ಅಂಚೆ ಸಂಗ್ರಹಣಾ ಅಭಿರುಚಿ ಹೊಂದಿರುವವರು ರೂ.200 ನ್ನು ಅಂಚೆ ಕಛೇರಿಯಲ್ಲಿ ಪಾವತಿಸುವ ಮೂಲಕ ಅಂಚೆ ಚೀಟಿ ಸಂಗ್ರಹಣಾಖಾತೆಯನ್ನು ತೆರೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.