HomePage_Banner
HomePage_Banner

ಅರಿಯಡ್ಕ ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ : ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ 19 ಕಾರ್ಯಪಡೆಯ ಸಭೆ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಸಭಾಧ್ಯಕ್ಷತೆಯಲ್ಲಿ ಜೂ.17 ರಂದು ಅರಿಯಡ್ಕ ಶ್ರೀಕೃಷ್ಣ ಭಜನಾ ಮಂದಿರದ ಸಭಾ ಭವನದಲ್ಲಿ ನಡೆಯಿತು. ಕೋವಿಡ್ 19 ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರರವರು ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನ ಕೇಸ್ ಜಾಸ್ತಿ ಆಗಿದೆ, ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ ಅಂತವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಬೇಕು. ಹೋಮ್ ಐಸೋಲೇಶನ್ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮಾಡಬೇಕು. ಅದಲ್ಲದೆ ಪಾಸಿಟಿವ್ ಇರುವ ಮನೆಗಳ ಹತ್ತಿರ ಇರುವ ಮನೆಗಳ ಸದಸ್ಯರನ್ನು ಟೆಸ್ಟ್ ಮಾಡಬೇಕು, ಇತ್ತೀಚೆಗೆ ಟೆಸ್ಟ್ ಜಾಸ್ತಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪಂಚಾಯತ್ ಸದಸ್ಯರು ತಮ್ಮ ತಮ್ಮ ವಾರ್ಡಿನಲ್ಲಿ ವ್ಯಾಕ್ಸೀನ್ ಕೊಡಿಸುವ ಕಾರ್ಯ ಮಾಡಿದರೆ ಒಳ್ಳೆಯದು. ನಮ್ಮ ಆರೋಗ್ಯದೊಂದಿಗೆ ಇತರರ ಆರೋಗ್ಯದ ಬಗ್ಗೆ ಗಮನ ಹರಿಸಲು ಒಳ್ಳೆಯ ಅವಕಾಶ ಎಂದರು.

ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ನೋಡೆಲ್ ಅಧಿಕಾರಿ ವಿದ್ಯಾ ರಾಣಿ, ಕಿರಿಯ ಆರೋಗ್ಯ ಸಹಾಯಕಿ ನವ್ಯಾ ಎ.ಪಿ.ಡಿ.ಓ ಪದ್ಮಾ ಕುಮಾರಿ, ಗ್ರಾಮ ಕರಣಿಕ ಶಬ್ಬೀರ್, ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಮೋನಪ್ಪ ಪೂಜಾರಿ ಕಾವು, ವಿಜೀತ್ ಕಾವು, ನಾರಾಯಣ ನಾಯ್ಕ ಚಾಕೋಟೆ, ಅನಿತಾ ಆಚಾರಿ ಮೂಲೆ, ಜಯಂತಿ ಪಟ್ಟು ಮೂಲೆ, ಅಬ್ದುಲ್ ರಹಿಮಾನ್ ಕಾವು, ಹರೀಶ್ ರೈ ಜಾರತ್ತಾರು, ವಿನೀತಾ ಬಳ್ಳಿಕಾನ, ರಾಜೇಶ್ ಮಣಿಯಾಣಿ, ಸಾವಿತ್ರಿ ಪೊನ್ನೆತ್ತಳ್ಕ, ಪ್ರವೀಣ ಎ, ಕೋರೊನ ವಾರಿಯರ್ಸ್ ತಂಡದ ಸದಸ್ಯರಾದ ಸಚಿನ್ ರೈ ಪಾಪೆಮಜಲು, ರಾಜೇಶ್ ಗೋಳ್ತಿಲ, ಅಪ್ಪಯ್ಯನಾಯ್ಕ ಬಪ್ಪುಪುಂಡೇಲು, ಹರಿಪ್ರಸಾದ್ ಮಾಯಿಲಕೊಚ್ಚಿ, ಅರಿಯಡ್ಕ ಆರೋಗ್ಯ ಸಹಾಯಕಿ ಜೆಸಿಂತಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಕಾರ್ಯದರ್ಶಿ ಶಿವರಾಮ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.