HomePage_Banner
HomePage_Banner

ಪತಿಯ ವೈದ್ಯಕೀಯ ಚಿಕಿತ್ಸೆಗೆ ದಾನಿಗಳ ನೆರವಿಗಾಗಿ ಪತ್ನಿಯ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮೂಲತ: ಪುತ್ತೂರಿನವರಾದ ಲಲಿತಾ ಆರ್.ಶೆಟ್ಟಿರವರ ಪತಿ ರಮಾನಂದ ಶೆಟ್ಟಿರವರು ಕಳೆದ ನಾಲ್ಕು ವರುಷಗಳಿಂದ ಕಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ನೆರವಿನ ಹಸ್ತ ಬೇಕಾಗಿದೆ ಎಂದು ಲಲಿತಾ ಆರ್.ಶೆಟ್ಟಿರವರು ಮನವಿ ಮಾಡಿದ್ದಾರೆ.

ರಮಾನಂದ ಶೆಟ್ಟಿರವರಿಗೆ ಯಾವುದೇ ಕೆಲಸ ನಿರ್ವಹಿಸಲು ಅಸಾಧ್ಯವಾದ ಕಾರಣ ಲಲಿತಾ ಆರ್.ಶೆಟ್ಟಿರವರು ಪತಿಯ ಕಾಯಿಲೆಗೆ ಔಷಧಿಯನ್ನು ಭರಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಈಗಾಗಲೇ ಸುಮಾರು 6 ಲಕ್ಷ ರೂ.ಗಳು ವೈದ್ಯಕೀಯ ವೆಚ್ಚಕ್ಕೆ ಖರ್ಚಾಗಿದ್ದು, ಇನ್ನೂ ಮುಂದಿನ ವೈದ್ಯಕೀಯ ವೆಚ್ಚಕ್ಕೆ ಸಹೃದಯಿ ದಾನಿಗಳು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಸಹಾಯ ಹಸ್ತವನ್ನು ನೀಡಬೇಕಾಗಿದೆ.

ದಾನಿಗಳು ನೀಡುವ ಸಹಾಯವನ್ನು ಲಲಿತಾ ಆರ್ ಶೆಟ್ಟಿ, ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಮಿಷನ್ ರೋಡ್ ಬೆಂಗಳೂರು ಬ್ರಾಂಚ್, ಖಾತೆ ಸಂಖ್ಯೆ- 20102454575, ಐಎಫ್‌ಎಸ್‌ಇ ಕೋಡ್- ಎಸ್‌ಬಿಐಎನ್ 0060133, ಇಲ್ಲಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಲಲಿತಾ ಆರ್ ಶೆಟ್ಟಿ-9449398432 ಸಂಪರ್ಕಿಸಬಹುದು ಎಂದು ಲಲಿತಾ ಆರ್. ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.