HomePage_Banner
HomePage_Banner

ಬಜತ್ತೂರು ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಬಜತ್ತೂರು ಗ್ರಾಮ ಪಂಚಾಯತ್ ಮಟ್ಟದ ಕೊರೋನಾ ಜಾಗೃತಿ ಸಭೆ ಜೂ.18ರಂದು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಜಾಗೃತಿ ಸಮಿತಿ ಮಾರ್ಗದರ್ಶಿ ಅಧಿಕಾರಿ ರಾಜ್‌ಗೋಪಾಲ್ ಎಸ್.ಎಸ್.ರವರು ಮಾತನಾಡಿ, ಕೊರೋನಾ ಜಾಗೃತಿ ಮುಟ್ಟಿಸುವ ಬಗ್ಗೆ ಮತ್ತು ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಜಾಗೃತಿ ಪಡೆಯಿಂದ ಮಾಡುವಂತೆ ಸಲಹೆ ನೀಡಿದರು. ದಿನದಲ್ಲಿ ೭೫ಕ್ಕಿಂತಲೂ ಹೆಚ್ಚು ಮಂದಿಯ ಕೋವಿಡ್ ತಪಾಸಣೆ ನಡೆಸುವಂತೆ ತಿಳಿಸಿದ ಅವರು ಜನ ಸೇರುವ ಜಾಗಗಳಾದ ಹಾಲಿನ ಸೊಸೈಟಿ, ಪಡಿತರ ಅಂಗಡಿಗಳಲ್ಲಿ ಕ್ಯಾಂಪ್ ಮಾಡುವಂತೆ ತಿಳಿಸಿದರು. ಹೆಚ್ಚು ವ್ಯಾಕ್ಸಿನ್ ಪೂರೈಸಿ ಗ್ರಾಮ ಪಂಚಾಯತ್‌ಗಳಲ್ಲಿ ಲಸಿಕೆ ಶಿಬಿರ ಮಾಡುವಂತೆ ಗ್ರಾ.ಪಂ.ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.

ಉಪಾಧ್ಯಕ್ಷೆ ಸ್ಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ಗಂಗಾಧರ ಪಿ.ಎನ್., ಮೋನಪ್ಪ ಗೌಡ, ಸಂತೋಷ್ ಕುಮಾರ್ ಪಿ., ಗಂಗಾಧರ ಕೆ.ಎಸ್., ಉಮೇಶ್ ಓಡ್ರಪಾಲು, ಅರ್ಪಿತ, ಯಶೋದಾ, ರತ್ನ, ವಿಮಲ, ಗ್ರಾಮಕರಣಿಕ ಹರೀಶ್ ಪಿ, ಕೃಷಿ ಅಧಿಕಾರಿ ಭರಮಣ್ಣವರ, ಆರೋಗ್ಯ ಸಹಾಯಕಿ ಪುಷ್ಪವಲ್ಲಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಅಂಗನವಾಡಿ ಸಹಾಯಕಿಯರು, ಕೊರೋನಾ ಜಾಗೃತಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.