HomePage_Banner
HomePage_Banner

ಕ್ಯಾಂಪ್ಕೋ ಮಾಸ್ಟರ್ ಗೋಡೌನ್ ಕಾವು ಇಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಒತ್ತಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರ ಅಧ್ಯಕ್ಷತೆಯಲ್ಲಿ ಜೂನ್ ೧೫ ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಿನಲ್ಲಿ ನಿರ್ಮಾಣಗೊಂಡಿರುವ ಕ್ಯಾಂಪ್ಕೋ ಮಾಸ್ಟರ್ ಗೋಡೌನ್ ಸಮಾರಂಭದಲ್ಲಿ ನಿರ್ಮಾಣಗೊಂಡಿರುವುದು ಸಂತಸವಾಗಿದೆ. ಕ್ಯಾಂಪ್ಕೋ ಆನ್ ವೀಲ್ಸ್‌ನ ಯೋಜನೆ ಹಾಗೂ ಅಡಿಕೆ, ಪೆಪ್ಪರ್‌ಗೆ ಸಂಬಂಧಪಟ್ಟ ವಿವಿಧ ಯೋಜನೆಗಳಿಂದ ಕೃಷಿಕರ ಅನೇಕ ದಿನಗಳ ಕನಸು ನನಸಾಗಿದೆ. ಇದರಿಂದ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಂದರ್ಭ ಒದಗಿ ಬರಲಿದೆ. ಇದು ನಮ್ಮೂರಿಗೆ ಹೆಮ್ಮೆ. ಈ ನಿಟ್ಟಿನಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೇಂದು ಸದಸ್ಯ ಹರೀಶ್ ಜಾರತ್ತಾರು ಸಭೆಯ ಗಮನಕ್ಕೆ ತಂದರು. ಸದಸ್ಯ ಅಬ್ದುಲ್ ರಹಿಮಾನ್ ಧ್ವನಿಗೂಡಿಸಿದರು. ಈ ಬಗ್ಗೆ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಿಗೆ ಪತ್ರ ಬರೆಯಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಪಂಚಾಯತ್ ವ್ಯಾಪ್ತಿಯ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಲ್ಲಿ ಎನ್. ಎಚ್ ರಸ್ತೆಯ ಚರಂಡಿ ದುರಸ್ತಿ ಮಾಡಿಲ್ಲ. ಕೇವಲ ರಸ್ತೆಯ ನೀರನ್ನು ಮಾತ್ರ ಬದಿಗೆ ಹೋಗುವಂತೆ ಮಾಡಿದ್ದಾರೆ. ಇದರಿಂದ ಮಳೆ ನೀರು ಸರಿಯಾಗಿ ಹರಿದು ಹೋಗದೇ, ಅಂಗಡಿ ಮುಂಗಟ್ಟುಗಳಿಗೆ ನೀರು ಹರಿದು ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ತೊಂದರೆಯಾಗಿದೆ ತಕ್ಷಣ ಸಮರ್ಪಕ ಚರಂಡಿ ದುರಸ್ತಿ ಮಾಡಬೇಕೇಂದು ಸದಸ್ಯ ಲೋಕೇಶ್ ಚಾಕೋಟೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಮೀನಾಕ್ಷಿ ಪಾಪೆಮಜಲು ಮಾತನಾಡಿ ಕೌಡಿಚ್ಚಾರು- ಸುಳ್ಯಪದವು ರಸ್ತೆಯ ಪಾಪೆಮಜಲು ಎಂಬಲ್ಲಿ ಚರಂಡಿ ದುರಸ್ತಿ ಮಾಡುವ ನೆಪದಲ್ಲಿ ನನ್ನ ಮನೆಯ ಬಳಿ ನೀರು ಹೋಗುವಂತೆ ಮಾಡಿ, ಮನೆಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಬರೆದುಕೊಳ್ಳಲು ನಿರ್ಣಯಿಸಲಾಯಿತು.

ಮಾಡ್ನೂರು ಗ್ರಾಮದಲ್ಲಿ ನೀರಿನ ಬಿಲ್ಲು ಸಂಗ್ರಹ ಕಡಿಮೆಯಾಗುತ್ತಿದೆ. ಎಂದು ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಹೇಳಿದರು. ಇದಕ್ಕೆ ಉತ್ತರಿಸಿದ ಪಿ.ಡಿ.ಒ ಪದ್ಮಾ ಕುಮಾರಿಯವರು ಕರೋನಾ ಸಮಯ ಆದ ಕಾರಣ ಬಿಲ್ ಸಂಗ್ರಹಕ್ಕೆ ಸಿಬ್ಬಂದಿಗಳನ್ನು ಕಳಿಸಿಲ್ಲ. ಎಂದರು. ನಾವು ಬಿಲ್ ಕಲೆಕ್ಟ್ ಮಾಡಬೇಡಿ ಎಂದು ಹೇಳಿಲ್ಲ ಎಂದು ದಿವ್ಯನಾಥ ಶೆಟ್ಟಿ ಹೇಳಿದರು. ಜನ ಬಿಲ್‌ನ ಹಣ ಕೊಡಲು ಸಿದ್ದ ಇದ್ದಾರೆ. ಹಣ ಕೊಡುವಲ್ಲಿ ಸಂಗ್ರಹ ಮಾಡಬಹುದಲ್ಲವೇ ಎಂದು ಸದಸ್ಯ ಅಬ್ದುಲ್ ರಹಿಮಾನ್ ಹೇಳಿದರು. ಈ ಬಗ್ಗೆ ಮಾತನಾಡಿದ ಪಿಡಿಓ ನಾಳೆಯಿಂದಲೇ ಬಿಲ್ ಸಂಗ್ರಹಕ್ಕೆ ಸಿಬ್ಬಂದಿಗಳನ್ನು ಕಳುಹಿಸುತ್ತೇನೆ ಎಂದರು.

ಕೌಡಿಚ್ಚಾರು ಭಾಗದಲ್ಲಿ ನೀರು ಸರಬರಾಜು ಮಾಡುತ್ತಿದ್ದ ಉದಯರವರು ಪ್ರಸ್ತುತ ನೀರು ಬಿಡುತ್ತಿಲ್ಲ. ಅವರ ಬದಲಿಗೆ ಐತ್ತಪ್ಪ ಮಣಿಯಾಣಿಯವರು ನೀರು ಬಿಡುತ್ತಿದ್ದಾರೆ. ಹೊಸ ಸ್ಥಾವರದ ಕೆಲಸ ಪೂರ್ಣ ಆಗುವವರೆಗೆ ಉದಯರವರಿಗೆ ನೀಡುತ್ತಿದ್ದ ವೇತನವನ್ನು ಐತ್ತಪ್ಪ ಮಣಿಯಾಣಿಯವರಿಗೆ ಅವರ ಮೊದಲಿನ ವೇತನಕ್ಕೆ ಸೇರಿಸಿ ನೀಡಬೇಕೆಂದು ಸದಸ್ಯ ನಾರಾಯಣ ನಾಯ್ಕ ಹೇಳಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕುಡಿಯುವ ನೀರಿನ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವುದೆಂದು ಬಂದ ಅರ್ಜಿಯನ್ನು ಓದಿ ಹೇಳಲಾಯಿತು. ಮಳೆಗಾಲದಲ್ಲಿ ಕಡಿತಗೊಳ್ಳದಿದ್ದಲ್ಲಿ ಮರು ಸಂಪರ್ಕ ಪಡೆಯಲು ರೂ ೫೦೦/- ಜೋಡಣೆ ಶುಲ್ಕ ವಿಧಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ನಂತರ ಪಂಚಾಯತ್ ಸಿಬ್ಬಂದಿಗಳಿಗೆ ಮತ್ತು ಸದಸ್ಯರಿಗೆ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕರೋನಾ ಸ್ವಾಬ್ ಟೆಸ್ಟ್ ಮಾಡಲಾಯಿತು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು, ಹರೀಶ್ ರೈ ಜಾರತ್ತಾರು, ಮೋನಪ್ಪ ಪೂಜಾರಿ ಕೆರೆಮಾರು, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಜಯಂತಿ ಪಟ್ಟುಮೂಲೆ, ಅನಿತಾ ಆಚಾರಿಮೂಲೆ, ಲೋಕೇಶ್ ಚಾಕೋಟೆ, ನಾರಾಯಣ ನಾಯ್ಕ ಚಾಕೋಟೆ, ಹೇಮಾವತಿ ಚಾಕೋಟೆ, ವಿಜಿತ್ ಕಾವು, ಸದಾನಂದ ಮಣಿಯಾಣಿ, ಸಾವಿತ್ರಿ ಪೊನ್ನೆತ್ತಳ್ಕ, ವಿನೀತಾ ಬಳ್ಳಿಕಾನ, ಮೀನಾಕ್ಷಿ ಪಾಪೆಮಜಲು, ರೇಣುಕಾ ಕರ್ಕೇರಾ ಮಡ್ಯಂಗಳ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಾವತಿ ಮರತ್ತಮೂಲೆ, ಪ್ರವೀಣ್ ಎ ಅಮ್ಚಿನಡ್ಕ, ಶಂಕರ ಕಾವು, ಸಲ್ಮಾ ಕಾವು, ಅಬ್ದುಲ್ ರಹಿಮಾನ್ ಕಾವು, ಪಂಚಾಯತ್ ಪಿಡಿಓ ಪದ್ಮ ಕುಮಾರಿ ಸ್ವಾಗತಿಸಿ ಸಿಬ್ಬಂದಿ ಪ್ರಭಾಕರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.