HomePage_Banner
HomePage_Banner

ಕೊಯಿಲ: ಶಾಲಾ ಜಗಲಿಯಲ್ಲಿ ಮೋಜು ಮಸ್ತಿ – ಮಾಂಸದೂಟ ತಯಾರು; ಬೀಡಿ,ಸಿಗರೇಟು ತುಂಡು ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಲಾಕ್‌ಡೌನ್ ಸಂದರ್ಭ ದುರ್ಬಳಕೆ ಮಾಡಿಕೊಂಡಿರುವ ಸುಮಾರು 10 ಮಂದಿಯ ತಂಡವೊಂದು ಕೊಯಿಲ ಸರಕಾರಿ ಶಾಲೆಯ ಜಗಲಿಯಲ್ಲಿ ಮಾಂಸದೂಟ ತಯಾರಿಸಿ ಮೋಜು ಮಸ್ತಿ ನಡೆಸಿರುವುದು ಕಂಡುಬಂದಿದೆ.

ಜೂ.16ರಂದು ರಾತ್ರಿ ಕಾರು, ಬೈಕ್‌ನಲ್ಲಿ ಬಂದ ಸುಮಾರು 10 ಮಂದಿಯಿದ್ದ ತಂಡವೊಂದು ಶಾಲೆಯ ಜಗಲಿ, ಆವರಣದಲ್ಲಿ ಮಾಂಸದೂಟ ತಯಾರಿಸಿ ಮೋಜು ಮಸ್ತಿ ನಡೆಸಿರುವುದಾಗಿ ವರದಿಯಾಗಿದೆ. ಶಾಲಾ ಜಗಳಿಯಲ್ಲಿ ಬೀಡಿ, ಸಿಗರೇಟುಗಳ ತಂಡು ಪತ್ತೆಯಾಗಿದೆ. ಜೂ.16ರಂದು ರಾತ್ರಿ ಗಾಳಿ ಮಳೆಯಿಂದಾಗಿ ಈ ಪರಿಸರದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ವಿದ್ಯುತ್ ತಂತಿ ಮೇಲೆ ಮರ ಬಿದ್ದಿರುವ ಸಾಧ್ಯತೆ ಇರುವ ಬಗ್ಗೆ ಪರಿಶೀಲಿಸುವ ಸಲುವಾಗಿ ಶಾಲೆ ಪರಿಸರಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಶಾಲಾ ಆವರಣದ ಪಕ್ಕದಲ್ಲಿ ವಾಹನಗಳು ನಿಲುಗಡೆಯಾಗಿರುವುದನ್ನು ಕಂಡು ಶಾಲೆ ಪಕ್ಕ ತೆರಳಿದ ವೇಳೆ ಮೋಜು, ಮಸ್ತಿಯಲ್ಲಿ ತೊಡಗಿದ್ದವರು ಅಲ್ಲಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.